ಐಸಿಸಿ ಒಡಿಐ ದಶಕದ ತಂಡದಲ್ಲಿ ಮೂವರು ಭಾರತೀಯರ ಹೆಸರು

ಬೆಂಗಳೂರು: 2020ರ ಇಸವಿ ಮುಕ್ತಾಯವಾಗುತ್ತಲೇ ಒಂದು ದಶಕವೇ ಕೊನೆಗೊಳ್ಳಲಿದೆ. ಹೀಗಾಗಿ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮೂರೂ ಕ್ರಿಕೆಟ್ ಮಾದರಿಗಳಲ್ಲಿ ದಶಕದ ಅತ್ಯುತ್ತಮ ಆಟಗಾರರನ್ನು ಹೆಸರಿಸಿದೆ. ಮೂರೂ ಕ್ರಿಕೆಟ್ ಮಾದರಿಗಳಲ್ಲೂ ಕನಿಷ್ಠ ಇಬ್ಬರು ಭಾರತೀಯ ಆಟಗಾರರು ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ವಿಶೇಷವೆಂದರೆ ಏಕದಿನ ಕ್ರಿಕೆಟ್ ನಲ್ಲಿ ಐಸಿಸಿ ದಶಕದ ಆಟಗಾರರಲ್ಲಿ ಟೀಮ್ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಸ್ಥಾನ ಪಡೆದುಕೊಂಡಿದ್ದಾರೆ.
ವರ್ಣ ರಂಜಿತ ಕ್ರಿಕೆಟ್ ಬದುಕು ಕಂಡಿರುವ ಎಂಎಸ್ ಧೊನಿ, ಭಾರತದ ನಾಯರಾಗಿದ್ದು ಐಸಿಸಿ ಮೂರು ಪ್ರತಿಷ್ಠಿತ ಟ್ರೋಫಿಗಳನ್ನು ಗೆದ್ದ ಏಕಮಾತ್ರ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಐಸಿಸಿ ಒಡಿಐ ದಶಕದ ತಂಡದಲ್ಲಿ ಧೋನಿ ನಾಯಕರಾಗಿ ಹೆಸರಿಸಲ್ಪಟ್ಟಿದ್ದಾರೆ.
ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಭಾನುವಾರ ಪ್ರಕಟಿಸಿರುವ ಐಸಿಸಿ ಒಡಿಐ ದಶಕದ ತಂಡದಲ್ಲಿ ಸ್ಥಾನ ಪಡೆದಿರುವವರ ಪಟ್ಟಿ ಇಲ್ಲಿದೆ.

ಆರಂಭಿಕ ಆಟಗಾರರು
ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಏಕದಿನ ಕ್ರಿಕೆಟ್ ದಶಕದ ತಂಡದಲ್ಲಿ ಭಾರತದ ಆರಂಭಿಕ ಬ್ಯಾಟ್ಸ್‌ಮನ್ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಮತ್ತು ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಆರಂಭಿಕ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.

ನಾಯಕ ಮತ್ತು ವಿಕೆಟ್ ಕೀಪರ್
ಭಾರತೀಯರಲ್ಲಿ ಟೆಸ್ಟ್, ಏಕದಿನ ಮತ್ತು ಟಿ20ಐ ಮೂರರಲ್ಲೂ ಬೆಸ್ಟ್ ನಾಯಕನೆಂಬ ಕೀರ್ತಿ ಎಂಎಸ್ ಧೋನಿಗಿದೆ. ಐಸಿಸಿ ಒಡಿಐ ದಶಕದ ತಂಡದಲ್ಲಿ ಧೋನಿ ನಾಯಕರಾಗಿ ಹೆಸರಿಸಲ್ಪಟ್ಟಿದ್ದಾರೆ. ವಿಶ್ವ ಕ್ರಿಕೆಟ್‌ನಲ್ಲಿ ಅತ್ಯುತ್ತಮ ವಿಕೆಟ್ ಕೀಪರ್ ಎನಿಸಿರುವ ಕೂಲ್ ಕ್ಯಾಪ್ಟನ್ ಎಂಎಸ್‌ಡಿ ವಿಕೆಟ್ ಕೀಪರ್ ಆಗಿ ಹೆಸರಿಸಲ್ಪಟ್ಟಿದ್ದಾರೆ.
ಐಸಿಸಿ ಒಡಿಐ ದಶಕದ ತಂಡ
ರೋಹಿತ್ ಶರ್ಮಾ (ಭಾರತ), ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ), ವಿರಾಟ್ ಕೊಹ್ಲಿ (ಭಾರತ), ಎಬಿ ಡಿ ವಿಲಿಯರ್ಸ್ (ದಕ್ಷಿಣ ಆಫ್ರಿಕಾ), ಶಕೀಬ್ ಅಲ್ ಹಸನ್ (ಬಾಂಗ್ಲಾದೇಶ), ಎಂಎಸ್ ಧೋನಿ (ಭಾರತ, ನಾಯಕ ಮತ್ತು ವಿಕೆಟ್ ಕೀಪರ್), ಬೆನ್ ಸ್ಟೋಕ್ಸ್ (ಇಂಗ್ಲೆಂಡ್), ಮಿಚೆಲ್ ಸ್ಟಾರ್ಕ್ (ಆಸ್ಟ್ರೇಲಿಯಾ), ಟ್ರೆಂಟ್ ಬೌಲ್ಟ್ (ನ್ಯೂಜಿಲೆಂಡ್), ಇಮ್ರಾನ್ ತಾಹಿರ್ (ದಕ್ಷಿಣ ಆಫ್ರಿಕಾ), ಲಸಿತ್ ಮಾಲಿಂಗ (ಶ್ರೀಲಂಕಾ).
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications