ಏಕದಿನ ಶ್ರೇಯಾಂಕ: ವಿರಾಟ್, ರೋಹಿತ್ ಸನಿಹಕ್ಕೆ ತಲುಪಿದ ಬಾಬರ್ ಅಜಂ

ನೂತನ ಐಸಿಸಿ ಏಕದಿನ ಶ್ರೇಯಾಂಕ ಪಟ್ಟಿ ಬಿಡುಗಡೆಯಾಗಿದೆ. ಬ್ಯಾಟ್ಸ್‌ಮನ್‌ಗಳ ವಿಭಾಗದಲ್ಲಿ ಅಗ್ರ ಎರಡು ಸ್ಥಾನಗಳಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ಗಳಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಮುಂದುವರಿದಿದ್ದಾರೆ. ಆದರೆ ಪಾಕಿಸ್ತಾನದ ಸೀಮಿತ ಓವರ್‌ಗಳ ನಾಯಕ ಬಾಬರ್ ಅಜಂ ಕೂಡ ಈ ಇಬ್ಬರು ದಾಂಡಿಗರ ಸನಿಹಕ್ಕೆ ಬಂದಿದ್ದಾರೆ.
ಪಾಕಿಸ್ತಾನ ಜಿಂಬಾಬ್ವೆ ವಿರುದ್ಧ ಏಕದಿನ ಸರಣಿಯಲ್ಲಿ ಪಾಲ್ಗೊಂಡಿತ್ತು. ಈ ಸರಣಿಯಲ್ಲಿ ಬಾಬರ್ ಅಜಂ ಉತ್ತಮ ಪ್ರದರ್ಶನವನ್ನು ನೀಡಿದ್ದಾರೆ. 3 ಪಂದ್ಯಗಳ ಈ ಸರಣಿಯಲ್ಲಿ ಅಜಂ 221 ರನ್ ಗಳಿಸಿದ್ದರು. ಅದರಲ್ಲು ಅಂತಿಮ ಪಂದ್ಯದಲ್ಲಿ 125 ರನ್ ಗಳಿಸಿದ್ದರು. ಈ ಪಂದ್ಯವನ್ನು ಪಾಕಿಸ್ತಾನ ಸೂಪರ್ ಓವರ್‌ನಲ್ಲಿ ಸೋಲೊಪ್ಪಿಕೊಂಡಿತ್ತು.
ಈ ಪ್ರದರ್ಶನದ ಬಳಿಕ ಪಾಕಿಸ್ತಾನದ ನಾಯಕ ಬಾಬರ್ ಅಜಂ ಟೀಮ್ ಇಮಡಿಯಾ ಉಪನಾಯಕ ರೋಹಿತ್ ಶರ್ಮಾ ಅವರಿಗಿಂತ 18 ಅಂಕಗಳಷ್ಟು ಹಿಂದಿದ್ದಾರೆ. ಹಾಗೂ ಭಾರೀಯ ತಮಡದ ನಾಯಲ ವಿರಾಟ್ ಕೊಹ್ಲಿ ಅವರಿಗಿಂತ 34 ಅಂಕಗಳಷ್ಟು ಹಿನ್ನೆಡೆಯಲ್ಲಿದ್ದಾರೆ. ಬಾಬರ್ ಅಜಂ ಬಳಿಕ, ರಾಸ್ ಟೇಯ್ಲರ್, ಫಾಪ್ ಡು ಪ್ಲೆಸಿಸ್, ಕೇನ್ ವಿಲಿಯಮ್ಸನ್, ಆರೋನ್ ಫಿಂಚ್ ಡೇವಿಡ್ ವಾರ್ನರ್ ಕ್ವಿಂಟನ್ ಡಿಕಾಕ್ ಹಾಗೂ ಜಾನಿ ಬೈರ್‌ಸ್ಟೋವ್ ಉಳಿದ ಟಾಪ್ 10ನಲ್ಲಿರುವ ಬ್ಯಾಟ್ಸ್‌ಮನ್‌ಗಳಾಗಿದ್ದಾರೆ.
ಏಕದಿನ ಮಾದರಿಯ ಬೌಲರ್‌ಗಳ ಶ್ರೇಯಾಂಕಪಟ್ಟಿಯಲ್ಲಿ ಪಾಕಿಸ್ತಾನದ ಯುವ ವೇಗಿ ಶಾಹೀನ್ ಅಫ್ರಿದಿ ಉತ್ತಮ ಏರಿಕೆಯನ್ನು ಕಂಡ ಬೌಲರ್ ಎನಿಸಿದ್ದಾರೆ. 8 ಸ್ಥಾನಗಳ ಏರಿಕೆ ಕಂಡಿರುವ ಶಾಹಿನ್ ಅಫ್ರಿದಿ ವೃತ್ತಿ ಜೀವನದ ಶ್ರೇಷ್ಠ 16ನೇ ಸ್ಥಾನದಲ್ಲಿದ್ದಾರೆ. ಬೌಲರ್ಗಳ ಪಟ್ಟಿಯಲ್ಲಿ ಟ್ರೆಂಟ್ ಬೋಲ್ಟ್ ನಂಬರ್ 1 ಬೌಲರ್ ಎನಿಸಿದ್ದರೆ ಬಾರತೀಯ ವೇಗಿ ಜಸ್ಪ್ರೀತ್ ಬೂಮ್ರಾ 2ನೇ ಸ್ಥಾನದಲ್ಲಿ ಮುಂದುವರಿಸಿದ್ದಾರೆ.
ಇನ್ನು ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಅಕ್ಟೋಬರ್ 29ಕ್ಕೆ ನಿಷೇಧ ಅಂತ್ಯಗೊಳಿಸಿರುವ ಬಾಂಗ್ಲಾದೇಶದ ಆಲ್‌ರೌಂಡರ್ ಶಕೀಬ್ ಅಲ್ ಹಸನ್ ಮೊದಲ ಸ್ಥಾನವನ್ನು ಮರಳಿ ಪಡೆದುಕೊಂಡಿದ್ದಾರೆ. ಮೊಹಮ್ಮದ್ ನಬಿ ಎರಡನೇ ಸ್ಥಾನಕ್ಕೆ ಜಾರಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications