ಐಸಿಸಿ ಏಕದಿನ ಶ್ರೇಯಾಂಕ: ಎಬಿಡಿ ನಂ.1, 3ನೇ ಸ್ಥಾನದಲ್ಲಿ ಕೊಹ್ಲಿ
ದುಬೈ, ಮಾರ್ಚ್, 10 : ದಕ್ಷಿಣ ಆಫ್ರಿಕಾದ ಸ್ಟಾರ್ ಬ್ಯಾಟ್ಸ್ ಮನ್ ಎಬಿಡಿ ವಿಲಿಯರ್ಸ್ ಅಂತಾರಾಷ್ಟ್ರೀಯ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ.
ಇತ್ತೀಚೆಗಷ್ಟೇ ನ್ಯೂಜಿಲೆಂಡ್ ವಿರುದ್ಧ ಸರಣಿಯಲ್ಲಿ 262 ರನ್ ಗಳಿಸಿರುವ ಎಬಿಡಿ ಆಸೀಸ್ ನ ಡೇವಿಡ್ ವಾರ್ನರ್ ಅವರನ್ನು ಹಿಂದಿಕ್ಕಿ ಬ್ಯಾಟಿಂಗ್ ಶ್ರೇಯಾಂಕ್ ನಲ್ಲಿ ನಂಬರ್ ಒನ್ ಸ್ಥಾನಕ್ಕೆ ಜಿಗಿದಿದ್ದಾರೆ.
ವಿಲಿಯರ್ಸ್ 875 ಅಂಕದೊಂದಿಗೆ ಅಗ್ರಸ್ಥಾನಕ್ಕೆ ಬಡ್ತಿ ಪಡೆದರೆ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ 871 ಅಂಕದೊಂದಿಗೆ ಕೇವಲ 4 ಪಾಯಿಂಟ್ಸ್ ಗಳಿಂದ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ.[ಐಸಿಸಿ ಟೆಸ್ಟ್ ಶ್ರೇಯಾಂಕ: 3ನೇ ಸ್ಥಾನಕ್ಕೆ ಕುಸಿದ ವಿರಾಟ್ ಕೊಹ್ಲಿ]
ಇನ್ನುಳಿದ ಟಾಪ್ 10 ಪಟ್ಟಿಯಲ್ಲಿರುವ ಆಟಗಾರರ ಅಂಕಗಳು ಈ ಕೆಳಗಿನಂತಿವೆ.

ಮೂರನೇ ಸ್ಥಾನದಲ್ಲಿ ಕೊಹ್ಲಿ
ಟೆಸ್ಟ್ ಶ್ರೇಯಾಂಕದಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿರುವ ವಿರಾಟ್ ಕೊಹ್ಲಿ, ಏಕದಿನ ಕ್ರಿಕೆಟ್ ಶ್ರೇಯಾಂಕದಲ್ಲೂ 852 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದ್ದಾರೆ.

ಇಂಗ್ಲೆಂಡ್ ನ ಜೋ ರೂಟ್
ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯ ಕೊನೆ ಪಂದ್ಯದಲ್ಲಿ ಆಕರ್ಷಕ ಶತಕ ಬಾರಿಸಿದ್ದ ಇಂಗ್ಲೆಂಡ್ ನ ಜೋ ರೂಟ್ 787 ಅಂಕದೊಂದಿಗೆ ನಾಲ್ಕನೇ ಸ್ಥಾನಕ್ಕೇರಿದ್ದಾರೆ.

ದಕ್ಷಿಣ ಆಫ್ರಿಕಾದ ಡುಪ್ಲೆಸಿಸ್
ದಕ್ಷಿಣ ಆಫ್ರಿಕಾದ ಡುಪ್ಲೆಸಿಸ್ 781 ಅಂಕಗಳಿಸಿ ಐದನೇ ಸ್ಥಾನದಲ್ಲಿದ್ದಾರೆ. ಇನ್ನು ಮತ್ತೊಬ್ಬ ದ.ಆಫ್ರಿಕಾದ ಡಿ ಕಾಕ್ 6ನೇ ಸ್ಥಾನದಲ್ಲಿದ್ದಾರೆ.

ಇಂಗ್ಲೆಂಡ್ ನ ಮಾರ್ಟಿನ್ ಗುಫ್ತಿಲ್
ಇಂಗ್ಲೆಂಡ್ ನ ಮಾರ್ಟಿನ್ ಗುಫ್ತಿಲ್ ಎರಡು ಸ್ಥಾನ ಮೇಲಕ್ಕೇರಿದ್ದು 777 ಅಂಕಗಳೊಂದಿಗೆ ಏಳನೇ ಸ್ಥಾನದಲ್ಲಿದ್ದಾರೆ.

ಇನ್ನುಳಿದ ಸ್ಥಾನಗಳು
ನ್ಯೂಜಿಲೆಂಡ್ ನ ಕೇನ್ ವಿಲಿಯಮ್ಸನ್ 758 ಅಂಕದೊಂದಿಗೆ 8ನೇ ಸ್ಥಾನದಲ್ಲಿದ್ದಾರೆ. ಪಾಕ್ ನ ಬಾಬರ್ ಅಝಮ್ 733 ಅಂಕ ಗಳಿಸಿ 9ನೇ ಸ್ಥಾನದಲ್ಲಿದ್ದರೆ, 10ನೇ ಸ್ಥಾನದಲ್ಲಿ ಆಸೀಸ್ ನ ಸ್ಟಿವ್ ಸ್ಮಿತ್ 733 ಅಂಕದೊಂದಿಗೆ ಇದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications