Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸರಣಿ ಸೋತರೂ ಐಸಿಸಿ ಶ್ರೇಯಾಂಕ ಉಳಿಸಿಕೊಂಡ ಭಾರತ

ದುಬೈ, ಜೂ.25: ಬಾಂಗ್ಲಾದೇಶ ವಿರುದ್ಧ ಏಕದಿನ ಸರಣಿ ಕಳೆದುಕೊಂಡರೂ ಟೀಂ ಇಂಡಿಯಾ ತನ್ನ ಐಸಿಸಿ ಶ್ರೇಯಾಂಕವನ್ನು ಉಳಿಸಿಕೊಂಡಿದೆ. ಬಾಂಗ್ಲಾ ವಿರುದ್ಧ 2-1 ಅಂತರದಿಂದ ಸರಣಿ ಸೋತ ಭಾರರ 2 ಅಂಕ ಕಳೆದುಕೊಂಡರೂ 2ನೇ ಸ್ಥಾನದಲ್ಲಿ ಭದ್ರವಾಗಿದೆ ಎಂದು ಐಸಿಸಿ ಗುರುವಾರ ಪ್ರಕಟಿಸಿದ ಪಟ್ಟಿಯಿಂದ ತಿಳಿದು ಬಂದಿದೆ.

ಭಾರತ ವಿರುದ್ಧ ಭರ್ಜರಿ ಪ್ರದರ್ಶನ ನೀಡಿರುವ ಬಾಂಗ್ಲಾದೇಶ ಒಂದು ಸ್ಥಾನ ಮೇಲಕ್ಕೇರಿ 7ನೇ ಸ್ಥಾನಕ್ಕೆ ಬಂದಿದೆ. ಜೂ.24ರಂದು ಢ್ಕಾದ ಮೀರ್ ಪುರನಲ್ಲಿರುವ ಷೇರ್ ಇ ಬಾಂಗ್ಲಾ ಮೈದಾನದ ನಡೆದ ಅಂತಿಮ ಪಂದ್ಯದಲ್ಲಿ ಬಾಂಗ್ಲಾದೇಶ ಸೋತರೂ ಶ್ರೇಯಾಂಕ ಪಟ್ಟಿಯಲ್ಲಿ ಮೇಲಕ್ಕೇರಿದೆ. ಸರಣಿ ವಿಜಯದಿಂದ ಒಟ್ಟಾರೆ 93 ಅಂಕಗಳನ್ನು ಗಳಿಸಿ 7ಸ್ಥಾನದಲ್ಲಿರುವ ಬಾಂಗ್ಲಾಕ್ಕಿಂತ 6 ಅಂಕ ಹೆಚ್ಚಿಗೆ ಗಳಿಸಿರುವ ಇಂಗ್ಲೆಂಡ್ 6ನೇ ಸ್ಥಾನದಲ್ಲಿದೆ.

ICC ODI Rankings: India drop 2 points; Bangladesh move to 7th

ಸೆಪ್ಟೆಂಬರ್ 30, 2015ಕ್ಕೆ ಅನ್ವಯವಾಗುವಂತೆ ಟಾಪ್ ತಂಡಗಳು ಮುಂಬರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ 2017ಕ್ಕೆ ಅರ್ಹತೆ ಪಡೆದುಕೊಳ್ಳಲಿವೆ. ಆಸ್ಟ್ರೇಲಿಯಾ 129 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ವೆಸ್ಟ್ ಇಂಡೀಸ್ ತಂಡ ಜುಲೈನಲ್ಲಿ ಶ್ರೀಲಂಕಾ ಜೊತೆ ಕಾದಾಡಲಿದ್ದು, ಅಂಕಪಟ್ಟಿಯಲ್ಲಿ ಮೇಲಕ್ಕೇರಿದರೆ ಮಾತ್ರ ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆಯಲಿದೆ.

ಜೂ.24ಕ್ಕೆ ಅನ್ವಯವಾಗುವಂತೆ ಶ್ರೇಯಾಂಕ ಪಟ್ಟಿ
1. ಆಸ್ಟ್ರೇಲಿಯಾ-129
2.ಭಾರತ-115
3. ನ್ಯೂಜಿಲೆಂಡ್ -112
4.ದಕ್ಷಿಣ ಆಫ್ರಿಕಾ-112
5. ಶ್ರೀಲಂಕಾ-106
6. ಇಂಗ್ಲೆಂಡ್-98
7. ಬಾಂಗ್ಲಾದೇಶ-93
8. ವೆಸ್ಟ್ ಇಂಡೀಸ್ -88
9. ಪಾಕಿಸ್ತಾನ-87
10. ಐರ್ಲೆಂಡ್-50
11. ಜಿಂಬಾಬ್ವೆ-44
(ಒನ್ ಇಂದಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+