ಬೌಲಿಂಗ್ ಶ್ರೇಯಾಂಕ: ಭಾರತದ ಬುಮ್ರಾ ಜೀವನ ಶ್ರೇಷ್ಠ ಸಾಧನೆ
ನವದೆಹಲಿ, ಸೆಪ್ಟೆಂಬರ್ 04 : ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಪ್ರಕಟಿಸಿದ ನೂತನ ಬೌಲಿಂಗ್ ಶ್ರೇಯಾಂಕ ಪಟ್ಟಿಯಲ್ಲಿ ಭಾರತದ ವೇಗಿ ಜಸ್ ಪ್ರೀತ್ ಬುಮ್ರಾ ಜೀವನ ಶ್ರೇಷ್ಠ ಸಾಧನೆ ಮಾಡಿದ್ದಾರೆ.
ಶ್ರೀಲಂಕಾ ವಿರುದ್ಧ ಏಕದಿನ ಸರಣಿಯಲ್ಲಿ 15 ವಿಕೆಟ್ ಕಿತ್ತು ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ 23 ವರ್ಷದ ಬುಮ್ರಾ ಐಸಿಸಿ ಸ್ರೇಯಾಂಕ ಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದ್ದಾರೆ.
ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ 687 ರೇಟಿಂಗ್ ಅಂಕಗಳನ್ನು ಪಡೆಯುವ ಮೂಲಕ 4ನೇ ಸ್ಥಾನಕ್ಕೆ ಜಿಗಿದು ಸರ್ವಶ್ರೇಷ್ಠ ಸಾಧನೆ ಮಾಡಿದರು.
ಬೌಲರ್, ಬ್ಯಾಟ್ಸ್ ಮನ್, ತಂಡಗಳು ಏಕದಿನ ಕ್ರಿಕೆಟ್ ನಲ್ಲಿ ಯಾರು ಯಾವ ಸ್ಥಾನದಲ್ಲಿದ್ದಾರೆ ಎನ್ನುವುದನ್ನು ಮುಂದೆ ಓದಿ

ಬೌಲಿಂಗ್ ಶ್ರೇಯಾಂಕ ಪಟ್ಟಿ
ಆಸ್ಟ್ರೇಲಿಯಾದ ಜೋಶ್ ಹ್ಯಾಜಲ್ ವುಡ್ 732 ಅಂಕಗಳೊಂದಿಗೆ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾದ ಇಮ್ರಾನ್ ತಾಹೀರ್ (718) 2ನೇ ಸ್ಥಾನ ಪಡೆದಿದ್ದಾರೆ. ಇನ್ನು ಮೂರನೇ ಸ್ಥಾನದಲ್ಲಿ ಆಸ್ಟ್ರೇಲಿಯಾದ ಮೈಕಲ್ ಸ್ಟ್ರಾಕ್ ಇದ್ದಾರೆ.

ಏಕದಿನ ಬ್ಯಾಟಿಂಗ್ ಶ್ರೇಯಾಂಕ
ಏಕದಿನ ಬ್ಯಾಟಿಂಗ್ ನಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 887 ಅಂಕಗಳೊಂದಿಗೆ ಮೊದಲ ಅಗ್ರಸ್ಥಾನದಲ್ಲಿ ಮುಂದುವರೆದಿದ್ದಾರೆ. ಆಸೀಸ್ ನ ಡೆವಿಡ್ ವಾರ್ನರ್(861) 2 ಹಾಗೂ ದಕ್ಷಿಣ ಆಫ್ರಿಕಾದ ಎಬಿಡಿ ವಿಲಿಯರ್ಸ್ 3ನೇ ಸ್ಥಾನದಲ್ಲಿದ್ದಾರೆ. ಇನ್ನು 764 ಪಾಯಿಂಟ್ಸ್ ಹೊಂದಿರುವ ರೋಹಿತ್ ಶರ್ಮಾ 9ನೇ ಸ್ಥಾನದಲ್ಲಿದ್ದಾರೆ.

ಆಲ್ ರೌಂಡರ್ ಶ್ರೇಯಾಂಕ
ಆಲ್ ರೌಂಡರ್ ಟಾಪ್ 10 ಪಟ್ಟಿಯಲ್ಲಿ ಸ್ಥಾನಗಳಿಸಲು ಟೀಂ ಇಂಡಿಯಾ ಆಟಗಾರರು ವಿಫಲರಾಗಿದ್ದು, ರವೀಂದ್ರ ಜಡೇಜಾ 15ನೇ ಸ್ಥಾನದಲ್ಲಿದ್ದಾರೆ. ಬಾಂಗ್ಲಾದ ಶಕೀಬ್ ಅಲ್ ಹಸನ್ ಅಗ್ರಸ್ಥಾನ ಸ್ಥಾನ, ಪಾಕ್ ನ ಹಫೀಜ್ ಎರಡನೇ ಸ್ಥಾನದಲ್ಲಿದ್ದಾರೆ

ತಂಡಗಳ ಶ್ರೇಯಾಂಕ ಪಟ್ಟಿ
1. ದಕ್ಷಿಣ ಆಫ್ರಿಕಾ, 2. ಆಸ್ಟ್ರೇಲಿಯಾ, 3. ಭಾರತ, 4. ಇಂಗ್ಲೆಂಡ್, 5. ನ್ಯೂಜಿಲೆಂಡ್, 6. ಪಾಕಿಸ್ತಾನ, 7. ಬಾಂಗ್ಲಾದೇಶ, 8. ಶ್ರೀಲಂಕಾ, 9. ವೆಸ್ಟ್ ಇಂಡೀಸ್, 10. ಅಪಘಾನಿಸ್ತಾನ .
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications