For Quick Alerts
ALLOW NOTIFICATIONS  
For Daily Alerts
 

ಐಸಿಸಿ ಏಕದಿನ ರ‍್ಯಾಂಕಿಂಗ್: ಮತ್ತೆ ಅಗ್ರಸ್ಥಾನದತ್ತ ಕೊಹ್ಲಿ ಹೆಜ್ಜೆ: ಟಾಪ್ 4 ಸ್ಥಾನಗಳಲ್ಲಿ 3 ಭಾರತೀಯರು

ಟೀಮ್ ಇಂಡಿಯಾದ ದಿಗ್ಗಜ ಆಟಗಾರ ವಿರಾಟ್ ಕೊಹ್ಲಿ ಈ ಬಾರಿಯ ವಿಶ್ವಕಪ್‌ನಲ್ಲಿ ದಾಖಲೆಯ ಪ್ರದರ್ಶನ ನೀಡಿ ಅಬ್ಬರಿಸಿದ್ದಾರೆ. ಟೀಮ್ ಇಂಡಿಯಾ ಫೈನಲ್ ಪಂದ್ಯದಲ್ಲಿ ಗೆಲ್ಲಲು ಸಾಧ್ಯವಾಗದಿದ್ದರೂ ಟೂರ್ನಿಯುದ್ದಕ್ಕೂ ಭಾರತೀಯ ಆಟಗಾರರ ಆಟ ನಿಜಕ್ಕೂ ಅಮೋಘ. ಆಟಗಾರರ ಈ ಪ್ರದರ್ಶನ ಐಸಿಸಿ ಶ್ರೇಯಾಂಕದ ಮೇಲೆ ನೇರ ಪರಿಣಾಮ ಬೀರಿದೆ. ಹೀಗಾಗಿ ಟೀಮ್ ಇಂಡಿಯಾದ ಆಟಗಾರರು ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ಪ್ರಾಬಲ್ಯ ಸಾಧಿಸಿದ್ದಾರೆ.

ಈಗಾಗಲೇ ಟೀಮ್ ಇಂಡಿಯಾದ ಯುವ ಆರಂಭಿಕ ಆಟಗಾರ ಶುಬ್ಮನ್ ಗಿಲ್ ನಂಬರ್ 1 ಸ್ಥಾನದಲ್ಲಿ ಇದ್ದು ನೂತನವಾಗಿ ಬಿಡುಗಡೆಯಾಗಿರುವ ಪಟ್ಟಿಯಲ್ಲಿಯೂ ಅವರು ಮೊದಲ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಈ ಮಧ್ಯೆ ವಿರಾಟ್ ಕೊಹ್ಲಿ ಮತ್ತೆ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನದತ್ತ ದಾಪುಗಾಲಿಟ್ಟಿದ್ದಾರೆ. ಅಗ್ರ ನಾಲ್ಕು ಬ್ಯಾಟರ್‌ಗಳ ಪೈಕಿ ಮೂವರು ಬಾರತೀಯ ಬ್ಯಾಟರ್‌ಗಳೇ ಸ್ಥಾನ ಪಡೆದುಕೊಂಡಿರುವುದು ಗಮನಾರ್ಹ ಅಂಶ.

ICC ODI Rankings Latest Reports: Virat Kohli Climbs to 3rd Position and 3 Indian BatsmeninTop5

ನೂತನವಾಗಿ ಬಿಡುಗಡೆಯಾಗಿರುವ ಶ್ರೇಯಾಂಕ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಮೂರನೇ ಸ್ಥಾನಕ್ಕೆ ಏರಿಕೆ ಕಂಡಿದ್ದಾರೆ. ವಿಶ್ವಕಪ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಕೊಹ್ಲಿ ಶತಕ ಸಿಡಿಸಿದ್ದು ಫೈನಲ್‌ನಲ್ಲಿ ಅರ್ಧ ಶತಕ ಸಿಡಿಸದ್ದರು. ಈ ಮೂಲಕ ಭಾರೀ ಏರಿಕೆ ಕಂಡಿದ್ದಾರೆ. ಇದೀಗ ಟೀಮ್ ಇಂಡಿಯಾದ ಮಾಜಿ ನಾಯಕ ಮೊದಲ ಎರಡು ಸ್ಥಾನಗಳಲ್ಲಿರುವ ಶುಬ್ಮನ್ ಗಿಲ್ ಹಾಗೂ ಪಾಕಿಸ್ತಾನದ ಬಾಬರ್ ಅಜಂ ಸ್ಥಾನಕ್ಕೆ ಮತ್ತಷ್ಟು ಸನಿಹದಲ್ಲಿದ್ದಾರೆ. ಇನ್ನು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಕುಡ ನಾಲ್ಕನೇ ಸ್ಥಾನಕ್ಕೇರಿದ್ದಾರೆ. ಕ್ವಿಂಟನ್ ಡಿಕಾಕ್ ಅವರನ್ನು ಹಿಂದಿಕ್ಕಿ ಟಾಪ್ 4ಗೆ ಲಗ್ಗೆಯಿಟ್ಟಿದ್ದಾರೆ ರೋಹಿತ್ ಶರ್ಮಾ.

826 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಶುಬ್ಮನ್ ಗಿಲ್ ಅಗ್ರಸ್ಥಾನದಲ್ಲಿದ್ದರೆ ಬಾಬರ್ ಅಜಮ್ 824 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಕೊಹ್ಲಿ 791 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಟಾಪ್ 2 ಸ್ಥಾನದ ಸನಿಹಕ್ಕೆ ಬಂದಿದ್ದಾರೆ. ಇನ್ನು ರೋಹಿತ್ ಶರ್ಮಾ 769 ಅಂಕಗಳನ್ನು ಹೊಂದಿದ್ದು ನಾಲ್ಕನೇ ಸ್ಥಾನದಲ್ಲಿದ್ದಾರೆ.

2017ರಿಂದ 2021ರ ಮಧ್ಯೆ ಸುಮಾರು ನಾಲ್ಕು ವರ್ಷಗಳ ಕಾಲ ಕೊಹ್ಲಿ ಸತತ 1258 ದಿನಗಳ ಕಾಲ ನಂ.1 ಶ್ರೇಯಾಂಕವನ್ನು ಹೊಂದಿದ್ದರು. ಇನ್ನು ಇತ್ತೀಚೆಗೆ ಬಾಬರ್ ವಿಶ್ವಕಪ್ ಟೂರ್ನಿಯಲ್ಲಿ ಗಿಲ್ ಅಗ್ರಸ್ಥಾನವನ್ನು ಆಕ್ರಮಿಸುವವರೆಗೆ ಹೆಚ್ಚಿನ ಕಾಲ ಮೊದಲ ಶ್ರೇಯಾಂಕದಲ್ಲಿ ಉಳಿದುಕೊಂಡಿದ್ದರು.

ಟಾಪ್ 5 ಬ್ಯಾಟರ್‌ಗಳು ಮತ್ತು ಅಂಕಗಳು
1. ಶುಬ್ಮನ್ ಗಿಲ್ - 826 ರೇಟಿಂಗ್ ಅಂಕಗಳು
2. ಬಾಬರ್ ಅಜಮ್ - 824 ರೇಟಿಂಗ್ ಪಾಯಿಂಟ್‌ಗಳು
3. ವಿರಾಟ್ ಕೊಹ್ಲಿ - 791 ರೇಟಿಂಗ್ ಅಂಕಗಳು
4. ರೋಹಿತ್ ಶರ್ಮಾ - 769 ರೇಟಿಂಗ್ ಅಂಕಗಳು
5. ಕ್ವಿಂಟನ್ ಡಿ ಕಾಕ್ - 760 ರೇಟಿಂಗ್ ಅಂಕಗಳು

ಇನ್ನು ಬೌಲಿಂಗ್‌ನಲ್ಲಿ ಟೀಮ್ ಇಂಡಿಯಾದ ಇಬ್ಬರು ವೇಗಿಗಳಾದ ಮೊಹಮ್ಮದ್ ಸಿರಾಜ್ ಹಾಗೂ ಮೊಹಮ್ಮದ್ ಶಮಿ ಟಾಪ್ 10ರಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಮೊಹಮ್ಮದ್ ಸಿರಾಜ್ 699 ಅಂಕಗಳೊಂದಿಗೆ 3ನೇ ಸ್ಥಾನಕ್ಕೆ ಕುಸಿದಿದ್ದು, ಆಸ್ಟ್ರೇಲಿಯಾದ ಜೋಶ್ ಹೇಜಲ್‌ವುಡ್‌ಗಿಂತ 4 ಅಂಕಗಳಷ್ಟು ಹಿಂದಿದ್ದಾರೆ. ದಕ್ಷಿಣ ಆಫ್ರಿಕಾದ ಸ್ಪಿನ್ನರ್ ಕೇಶವ್ ಮಹಾರಾಜ್ 741 ರೇಟಿಂಗ್ ಅಂಕಗಳೊಂದಿಗೆ ಅಗ್ರಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಮೊಹಮ್ಮದ್ ಶಮಿ ಒಂದು ಸ್ಥಾನ ಕುಸಿತ ಕಂಡಿದ್ದು 10ನೇ ಸ್ಥಾನದಲ್ಲಿದ್ದಾರೆ.

ಅನುಭವಿ ಆಟಗಾರ ಮೊಹಮ್ಮದ್ ಶಮಿ ಈ ಬಾರಿಯ ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದಾರೆ. ಆಡಿದ 7 ಪಂದ್ಯಗಳಲ್ಲಿ ಶಮಿ 24 ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ. ವಿರ್ಶವಕಪ್‌ನಲ್ಲಿ 3 ಐದು ವಿಕೆಟ್‌ಗಳ ಗೊಂಚಲು ಪಡೆದುಕೊಂಡಿರುವ ಶಮಿ ಏಕದಿನ ವಿಶ್ವಕಪ್‌ನಲ್ಲಿ ಅತ್ಯಂತ ವೇಗವಾಗಿ 50 ವಿಕೆಟ್‌ಗಳನ್ನು ಕಬಳಿಸಿದ ಬೌಲರ್ ಎಂಬ ದಾಖಲೆ ಬರೆದಿದ್ದಾರೆ.

Story first published: Wednesday, November 22, 2023, 15:55 [IST]
Other articles published on Nov 22, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+