Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಸಿಸಿ ಏಕದಿನ Ranking: ಸ್ಮೃತಿ ಮಂಧಾನ ಈಗ ವಿಶ್ವ ನಂ.1 ಆಟಗಾರ್ತಿ!

ICC ODI Rankings: Smriti Mandhana becomes No.1 batter in world

ನವದೆಹಲಿ, ಫೆಬ್ರವರಿ 3: ಭಾರತ ಮಹಿಳಾ ಕ್ರಿಕೆಟ್ ತಂಡದ ಸ್ಮೃತಿ ಮಂಧಾನ ಈಗ ಏಕದಿನ ಕ್ರಿಕೆಟ್‌ನಲ್ಲಿ ವಿಶ್ವ ನಂ.1 ಆಟಗಾರ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಐಸಿಸಿ ಪ್ರಕಟಿಸಿರುವ ಏಕದಿನ ನೂತನ ಬ್ಯಾಟಿಂಗ್ ರ್ಯಾಂಕಿಂಗ್‌ನಲ್ಲಿ ಸ್ಮೃತಿ ಅಗ್ರಸ್ಥಾನಕ್ಕೇರಿದ್ದಾರೆ.

ಇತ್ತೀಚೆಗಷ್ಟೇ ಮುಕ್ತಾಯಗೊಂಡ ನ್ಯೂಜಿಲ್ಯಾಂಡ್ ವಿರುದ್ಧದ ಏಕದಿನ ಸರಣಿಯ 2ನೇ ಪಂದ್ಯದಲ್ಲಿ ಸ್ಮೃತಿ ಮಂಧಾನ ಅಜೇಯ 90 ರನ್ ಬಾರಿಸಿದ್ದರು. ಈ ಸಾಧನೆ ಮಂಧಾನ ಅವರನ್ನು ರ್ಯಾಂಕಿಂಗ್‌ನಲ್ಲಿ ಮೇಲೆತ್ತಿದೆ. ಸ್ಮೃತಿ 3 ಸ್ಥಾನಗಳ ಜಿಗಿತದೊಂದಿಗೆ ನಂ.1 ಸ್ಥಾನ ಅಲಂಕರಿಸಿದ್ದಾರೆ.

ಹ್ಯಾಮಿಲ್ಟನ್ ಏಕದಿನದಲ್ಲಿನ ಅರ್ಧಶತಕ ರನ್‌ನಿಂದ ನ್ಯೂಜಿಲ್ಯಾಂಡ್ ನಾಯಕಿ ಸುಝೀ ಬೇಟ್ಸ್ ಕೂಡ 1 ಸ್ಥಾನ ಚೇತರಿಕೆ ಕಂಡಿದ್ದು, ಈಗ 6ನೇ ಶ್ರೇಯಾಂಕದಲ್ಲಿದ್ದಾರೆ. ಇನ್ನುಳಿದಂತೆ ಎಲ್ಲೈಸ್ ಪೆರ್ರಿ (ಆಸ್ಟ್ರೇಲಿಯಾ), ಮೆಗ್ ಲ್ಯಾನಿಂಗ್ (ಆಸೀಸ್), ಆಮಿ ಸಟ್ಟರ್ವೈಟ್ (ಆಸೀಸ್), ಮಿಥಾಲಿ ರಾಜ್ (ಭಾರತ) ಕ್ರಮವಾಗಿ 2ರಿಂದ 5ರೊಳಗೆ ಸ್ಥಾನ ಪಡೆದಿದ್ದಾರೆ.

ಅಂದ್ಹಾಗೆ ಏಕದಿನ ಕ್ರಿಕೆಟ್‌ನಲ್ಲಿ ಸ್ಮೃತಿ 4 ಶತಕಗಳನ್ನು ಬಾರಿಸಿದ್ದಾರೆ. ಮಂದಾನ 90 ರನ್ ಬಾರಿಸಿದ ನ್ಯೂಜಿಲ್ಯಾಂಡ್ ವಿರುದ್ಧ ದ್ವಿತೀಯ ಪಂದ್ಯದಲ್ಲಿ ಭಾರತ 8 ವಿಕೆಟ್ ಭರ್ಜರಿ ಗೆಲುವನ್ನಾಚರಿಸಿತ್ತಲ್ಲದೆ ಏಕದಿನ ಸರಣಿಯನ್ನು 2-1ರಿಂದ ವಶಪಡಿಸಿಕೊಂಡಿತ್ತು.

Story first published: Sunday, February 3, 2019, 9:27 [IST]
Other articles published on Feb 3, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+