ಐಸಿಸಿ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದ ಭಾರತ
ದುಬೈ, ಮೇ 02 : ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಸೋಮವಾರ ಬಿಡುಗಡೆ ಮಾಡಿರುವ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ ಭಾರತ ಕ್ರಿಕೆಟ್ ತಂಡ ಮೂರನೇ ಸ್ಥಾನಕ್ಕೇರಿದೆ.
ಐದು ಹೆಚ್ಚುವರಿ ಅಂಕಗಳನ್ನು ಗಳಿಸಿರುವ ಭಾರತ, 117 ಪಾಯಿಂಟ್ಸ್ ಗಳಿಂದ ಮೂರನೇ ಸ್ಥಾನದಲ್ಲಿದ್ದ ನ್ಯೂಜಿಲೆಂಡ್ ತಂಡವನ್ನು ಹಿಂದಿಕ್ಕಿ ಮೂರನೇ ಸ್ಥಾನಕ್ಕೆ ಬಡ್ತಿ ಪಡೆದಿದೆ. ಇನ್ನು ದಕ್ಷಿಣ ಆಫ್ರಿಕಾ ಅಗ್ರಸ್ಥಾನದಲ್ಲಿಯೇ ಮುಂದುವರಿದಿದೆ.

ನ್ಯೂಜಿಲೆಂಡ್ ಈಗ 115 ಪಾಯಿಂಟ್ಸ್ ಗಳಿಂದ ನಾಲ್ಕನೇ ಸ್ಥಾನಕ್ಕೆ ಇಳಿದಿದೆ. ಎಂಟನೇ ಸ್ಥಾನದಲ್ಲಿದ್ದ ಪಾಕಿಸ್ತಾನ ತಂಡ 9ನೇ ಸ್ಥಾನಕ್ಕೆ ಕುಸಿದಿದ್ದರೆ ವೆಸ್ಟ್‌ಇಂಡೀಸ್ ಎಂಟನೇ ಸ್ಥಾನಕ್ಕೆ ಬಡ್ತಿ ಪಡೆದಿದೆ.
2017ರ ಸೆಪ್ಟೆಂಬರ್ 30ರಂದು ಅಗ್ರ ಎಂಟು ಸ್ಥಾನ ಹೊಂದಿರುವ ತಂಡಗಳು ಮಾತ್ರ ಐಸಿಸಿ ಏಕದಿನ ವಿಶ್ವಕಪ್‌ಗೆ ನೇರ ಅರ್ಹತೆ ಗಳಿಸಲಿವೆ. ಉಳಿದ ತಂಡಗಳು ಅರ್ಹತಾ ಟೂರ್ನಿ ಆಡಬೇಕು.
ಪಾಕಿಸ್ತಾನ ಹಾಗೂ ವೆಸ್ಟ್‌ಇಂಡೀಸ್ ತಂಡಗಳ ನಡುವೆ ತೀವ್ರ ಪೈಪೋಟಿ ನಡೆದಿದೆ. ಈಗಾಗಲೇ ಈ ಎರಡೂ ತಂಡಗಳು ಪಾಯಿಂಟ್ಸ್ ಗಳನ್ನು ಕಳೆದು ಕೊಂಡು ಎಂಟು ಹಾಗೂ ಒಂಬತ್ತನೇ ಸ್ಥಾನದಲ್ಲಿ ಇವೆ. ಪಾಕಿಸ್ತಾನ 90ರಿಂದ 88 ಪಾಯಿಂಟ್ಸ್ ಗೆ ಕುಸಿದಿದೆ. ವೆಸ್ಟ್ ಇಂಡೀಸ್ 83ರಿಂದ 79ಕ್ಕೆ ಇಳಿದಿದೆ.
2014ರಿಂದ 2016ರ ವೇಳೆಗೆ ಆಡಿದ ಪಂದ್ಯಗಳನ್ನೂ ಶ್ರೇಯಾಂಕ ಪಟ್ಟಿಯಲ್ಲಿ ಪರಿಗಣಿಸಲಾಗಿದೆ. ಬಾಂಗ್ಲಾ ದೇಶ ಹಾಗೂ ಶ್ರೀಲಂಕಾ ತಂಡಗಳು ಕ್ರಮವಾಗಿ ಎಳು ಮತ್ತು ಆರನೇ ಸ್ಥಾನದಲ್ಲಿವೆ.
ಐಸಿಸಿ ಚಾಂಪಿಯನ್ಸ್ ಟ್ರೋಫಿ ಹಾಗೂ 2019ರ ವಿಶ್ವಕಪ್‌ಗೆ ಆತಿಥ್ಯ ವಹಿಸಲಿರುವ ಇಂಗ್ಲೆಂಡ್ ತಂಡ 109 ಪಾಯಿಂಟ್ಸ್ ಗಳಿಂದ ಐದನೇ ಸ್ಥಾನದಲ್ಲಿದೆ.
ಅಂಕಪಟ್ಟಿ:
1. South Africa 123 (+4)
2. Australia 118 (-)
3. India 117 (+5)
4. New Zealand 115 (+2)
5. England 109 (+1)
6. Sri Lanka 93 (-5)
7. Bangladesh 91 (-1)
8. Pakistan 88 (-2)
9. West Indies 79 (-4)
10. Afghanistan 52 (-)
11. Zimbabwe 46 (-2)
12. Ireland 43 (+1)
Story first published: Wednesday, January 3, 2018, 10:04 [IST]
Other articles published on Jan 3, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications