ODI Ranking: ಅಗ್ರ ಸ್ಥಾನದಲ್ಲೇ ಉಳಿದ ವಿರಾಟ್ ಕೊಹ್ಲಿ, ಜಸ್‌ಪ್ರೀತ್ ಬೂಮ್ರಾ

ನವದೆಹಲಿ, ನವೆಂಬರ್ 12: ಆಗಸ್ಟ್ ತಿಂಗಳಲ್ಲಿನ ವೆಸ್ಟ್ ಇಂಡೀಸ್ ಸರಣಿಯ ಬಳಿಕ ಯಾವುದೇ ಏಕದಿನ ಪಂದ್ಯದಲ್ಲಿ ಆಡದ ಹೊರತಾಗಿಯೂ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ವೇಗಿ ಜಸ್‌ಪ್ರೀತ್ ಬೂಮ್ರಾ ನೂತನ ಐಸಿಸಿ ಏಕದಿನ ರ್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನದಲ್ಲೇ ಉಳಿದಿದ್ದಾರೆ.
ಮೆನ್ ಇನ್ ಬ್ಲೂ ತಂಡ ಕಡೆಯ ಏಕದಿನ ಸರಣಿ ಆಡಿದ್ದ ವೆಸ್ಟ್ ಇಂಡೀಸ್ ವಿರುದ್ಧ ಆಗಸ್ಟ್ ತಿಂಗಳಲ್ಲಿ. ಆ ಸರಣಿಯಲ್ಲಿ ಕೊಹ್ಲಿ ದ್ವಿತೀಯ ಪಂದ್ಯದಲ್ಲಿ 120, ಮೂರನೇ ಪಂದ್ಯದಲ್ಲಿ 114 ರನ್ ಬಾರಿಸಿದ್ದರು. ಆ ಸರಣಿಯನ್ನು ಭಾರತ 2-0ಯಿಂದ ಗೆದ್ದುಕೊಂಡಿತ್ತು.
ಪ್ರಸ್ತುತ ರ್ಯಾಂಕಿಂಗ್‌ನಲ್ಲಿ ಕೊಹ್ಲಿ ನಂ.1 ಸ್ಥಾನದಲ್ಲಿದ್ದರೆ, ಹಿಟ್‌ಮ್ಯಾನ್ ರೋಹಿತ್ ಕೂಡ ಕೊಹ್ಲಿ ಬೆನ್ನಲ್ಲೇ ಇದ್ದಾರೆ!

ಕೊಹ್ಲಿ ಬೆನ್ನಲ್ಲೇ ರೋಹಿತ್
ನೂತನ ಏಕದಿನ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನದಲ್ಲಿರುವ ಕೊಹ್ಲಿ 895 ಅಂಕ ಕಲೆ ಹಾಕಿದ್ದರೆ, ದ್ವಿತೀಯ ಸ್ಥಾನದಲ್ಲಿರುವ ರೋಹಿತ್ ಶರ್ಮಾ 863 ಪಾಯಿಂಟ್‌ನಿಂದ ನಂ.2 ಸ್ಥಾನದಲ್ಲಿದ್ದಾರೆ. 3ನೇ ಸ್ಥಾನದಲ್ಲಿ ಪಾಕಿಸ್ಥಾನದ ಬಾಬರ್ ಅಝಾಮ್ (834 ಪಾಯಿಂಟ್ಸ್) ಇದ್ದಾರೆ.

19ರಲ್ಲಿ ಶಿಖರ್
ಇನ್ನು ಏಕದಿನ ರ್ಯಾಂಕಿಂಗ್‌ನ 4ನೇ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾದ ಫ್ರಾಂಕೋಯಿಸ್ ಡು ಪ್ಲೆಸಿಸ್, 5ನೇ ಸ್ಥಾನದಲ್ಲಿ ನ್ಯೂಜಿಲೆಂಡ್‌ನ ರಾಸ್ ಟೇಲರ್ ಇದ್ದಾರೆ. ಟೀಮ್ ಇಂಡಿಯಾದ ಏಕದಿನ ಓಪನರ್ ಶಿಖರ್ ಧವನ್ 19ನೇ ಸ್ಥಾನದಲ್ಲಿ, ಎಂಎಸ್ ಧೋನಿ 23ರಲ್ಲಿ ಇದ್ದಾರೆ.

ಬೂಮ್ರಾಗೆ ಅಗ್ರ ಸ್ಥಾನ
ಏಕದಿನ ಬೌಲಿಂಗ್ ರ್ಯಾಂಕಿಂಗ್‌ನಲ್ಲಿ ಭಾರತದ ವೇಗಿ ಜಸ್‌ಪ್ರೀತ್ ಬೂಮ್ರಾ 797 ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲೇ ಉಳಿದಿದ್ದಾರೆ. ದ್ವಿತೀಯ ಸ್ಥಾನದಲ್ಲಿ ನ್ಯೂಜಿಲೆಂಡ್‌ನ ಟ್ರೆಂಟ್ ಬೌಲ್ಟ್ (740), ತೃತೀಯ ಸ್ಥಾನದಲ್ಲಿ ಅಫ್ಘಾನಿಸ್ತಾನದ ಮುಜೀಬ್ ಉರ್ ರಹ್ಮಾನ್ (707), 4ನೇ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾದ ಕಾಗಿಸೊ ರಬಾಡ (694), 5ನೇ ಸ್ಥಾನದಲ್ಲಿ ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ (693) ಇದ್ದಾರೆ.

ಆಲ್ ರೌಂಡರ್‌ಗಳು
ಏಕದಿನ ಆಲ್ ರೌಂಡರ್‌ಗಳ ಶ್ರೇಯಾಂಕದಲ್ಲಿ ಇಂಗ್ಲೆಂಡ್‌ನ ಬೆನ್ ಸ್ಟೋಕ್ಸ್ (319 ಪಾಯಿಂಟ್ಸ್), ಅಫ್ಘಾನಿಸ್ತಾನದ ಮೊಹಮ್ಮದ್ ನಬಿ (307), ಪಾಕಿಸ್ತಾನದ ಇಮಾದ್ ವಾಸಿಮ್ (295), ಇಂಗ್ಲೆಂಡ್‌ನ ಕ್ರಿಸ್ ವೋಕ್ಸ್ (267), ಅಫ್ಘಾನಿಸ್ತಾನದ ರಶೀದ್ ಖಾನ್ (263) ಮೊದಲ 5 ಸ್ಥಾನಗಳಲ್ಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications