For Quick Alerts
ALLOW NOTIFICATIONS  
For Daily Alerts
 

ICC ODI Rankings: ಅಗ್ರ ಸ್ಥಾನದಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ

ICC ODI Rankings: Virat Kohli, Rohit Sharma maintain top two spots

ನವದೆಹಲಿ: ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಪುರುಷರ ಏಕದಿನ ಕ್ರಿಕೆಟ್‌ನ ರ್‍ಯಾಂಕ್ ಪಟ್ಟಿ ಪ್ರಕಟಿಸಿದೆ. ಇದರಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಉಪನಾಯಕ ರೋಹಿತ್ ಶರ್ಮಾ ಮೊದಲೆರಡು ಸ್ಥಾನ ಪಡೆದುಕೊಂಡಿದ್ದಾರೆ. ಕೊಹ್ಲಿ 871 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ದ್ವಿತೀಯ ಸ್ಥಾನಿ ರೋಹಿತ್ 855 ಪಾಯಿಂಟ್ಸ್ ಪಡೆದುಕೊಂಡಿದ್ದಾರೆ. ವಿಶೇಷವೆಂದರೆ ಪಾಕಿಸ್ತಾನದ ನಾಯಕ ಬಾಬರ್ ಅಝಾಮ್ ಅವರು ಕೊಹ್ಲಿ-ರೋಹಿತ್ ಬೆನ್ನಲ್ಲೇ ಇದ್ದಾರೆ.

ಏಕದಿನ ಕ್ರಿಕೆಟ್ ಬೌಲರ್‌ಗಳಲ್ಲಿ ನ್ಯೂಜಿಲೆಂಡ್‌ ವೇಗಿ ಟ್ರೆಂಟ್ ಬೌಲ್ಟ್ (722 ಪಾಯಿಂಟ್ಸ್) ನಂ.1 ಸ್ಥಾನದಲ್ಲಿದ್ದಾರೆ. ಭಾರತದ ವೇಗಿ ಜಸ್‌ಪ್ರೀತ್ ಬೂಮ್ರಾ (719) ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಏಕದಿನ ಕ್ರಿಕೆಟ್ ನೂತನ ರ್‍ಯಾಂಕಿಂಗ್ ಪಟ್ಟಿಯಲ್ಲಿ ತಂಡಗಳ ಸ್ಥಾನಮಾನ, ಉಳಿದ ಆಟಗಾರರ ಶ್ರೇಯಾಂಕ-ಪಾಯಿಂಟ್‌ಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

ಟಾಪ್ 10 ಬ್ಯಾಟಿಂಗ್ ರ್‍ಯಾಂಕಿಂಗ್

ಟಾಪ್ 10 ಬ್ಯಾಟಿಂಗ್ ರ್‍ಯಾಂಕಿಂಗ್

1. ವಿರಾಟ್ ಕೊಹ್ಲಿ, ಭಾರತ (871 ರೇಟಿಂಗ್ ಪಾಯಿಂಟ್ಸ್‌), 2. ರೋಹಿತ್ ಶರ್ಮಾ, ಭಾರತ (855), 3. ಬಾಬರ್ ಅಝಾಮ್, ಪಾಕಿಸ್ತಾನ (829), 4. ರಾಸ್ ಟೇಲರ್, ನ್ಯೂಜಿಲೆಂಡ್, 5. ಫಾ ಡು ಪ್ಲೆಸಿಸ್, ದಕ್ಷಿಣ ಆಫ್ರಿಕಾ, 6. ಡೇವಿಡ್ ವಾರ್ನರ್, ಆಸ್ಟ್ರೇಲಿಯಾ , 7. ಜೋ ರೂಟ್, ಇಂಗ್ಲೆಂಡ್, 8. ಆ್ಯರನ್ ಫಿಂಚ್, ಆಸ್ಟ್ರೇಲಿಯಾ, 9. ಕೇನ್ ವಿಲಿಯಮ್ಸನ್, ನ್ಯೂಜಿಲೆಂಡ್, 10. ಕ್ವಿಂಟನ್ ಡಿ ಕಾಕ್, ದಕ್ಷಿಣ ಆಫ್ರಿಕಾ.

ಟಾಪ್ ಟೆನ್ ಬೌಲರ್‌ಗಳು

ಟಾಪ್ ಟೆನ್ ಬೌಲರ್‌ಗಳು

1. ಟ್ರೆಂಟ್ ಬೌಲ್ಟ್, ನ್ಯೂಜಿಲೆಂಡ್ (722 ರೇಟಿಂಗ್ ಪಾಯಿಂಟ್ಸ್‌), 2. ಜಸ್‌ಪ್ರೀತ್ ಬೂಮ್ರಾ, ಭಾರತ (719), 3. ಮುಜೀಬ್ ಉರ್ ರಹ್ಮಾನ್, ಅಫ್ಘಾನಿಸ್ತಾನ (701), 4. ಪ್ಯಾಟ್ ಕಮಿನ್ಸ್, ಆಸ್ಟ್ರೇಲಿಯಾ, 5. ಕಾಗಿಸೊ ರಬಾಡಾ, ದಕ್ಷಿಣ ಆಫ್ರಿಕಾ, 6. ಕ್ರಿಸ್ ವೋಕ್ಸ್, ಇಂಗ್ಲೆಂಡ್, 7. ಮೊಹಮ್ಮದ್ ಅಮೀರ್, ಪಾಕಿಸ್ತಾನ, 8. ಮ್ಯಾಟ್ ಹೆನ್ರಿ, ನ್ಯೂಜಿಲೆಂಡ್, 9. ರಶೀದ್ ಖಾನ್, ಅಫ್ಘಾನಿಸ್ತಾನ, 10. ಲಾಚ್ಲಾನ್ ಫರ್ಗುಸನ್, ನ್ಯೂಜಿಲೆಂಡ್‌.

ಅಗ್ರ ಸ್ಥಾನಿ ಆಲ್ ರೌಂಡರ್‌ಗಳು

ಅಗ್ರ ಸ್ಥಾನಿ ಆಲ್ ರೌಂಡರ್‌ಗಳು

1. ಮೊಹಮ್ಮದ್ ನಬಿ, ಅಫ್ಘಾನಿಸ್ತಾನ (301 ರೇಟಿಂಗ್ ಪಾಯಿಂಟ್ಸ್‌), 2. ಬೆನ್ ಸ್ಟೋಕ್ಸ್, ಇಂಗ್ಲೆಂಡ್ (293), 3. ಇಮಾದ್ ವಾಸಿಮ್, ಪಾಕಿಸ್ತಾನ (278), 4. ಕಾಲಿನ್‌ ಡೆ ಗ್ರ್ಯಾಂಡ್‌ಹೋಮ್, ನ್ಯೂಜಿಲೆಂಡ್, 5. ಕ್ರಿಸ್ ವೋಕ್ಸ್, ಇಂಗ್ಲೆಂಡ್, 6. ರಶೀದ್ ಖಾನ್, ಅಫ್ಘಾನಿಸ್ತಾನ, 7. ಮಿಚೆಲ್ ಸ್ಯಾಂಟ್ನರ್, ನ್ಯೂಜಿಲೆಂಡ್, 8. ರವೀಂದ್ರ ಜಡೇಜಾ, ಭಾರತ, 9. ಸಿಕಂದರ್ ರಾಝಾ, ಜಿಂಬಾಬ್ವೆ, 10. ಸೀನ್ ವಿಲಿಯಮ್ಸ್, ಜಿಂಬಾಬ್ವೆ.

ಟಾಪ್ ಟೆನ್ ದೇಶಗಳು

ಟಾಪ್ ಟೆನ್ ದೇಶಗಳು

1.ಇಂಗ್ಲೆಂಡ್ (127 ರೇಟಿಂಗ್ ಪಾಯಿಂಟ್ಸ್‌), 2. ಭಾರತ (119), 3. ನ್ಯೂಜಿಲೆಂಡ್ (116), 4. ದಕ್ಷಿಣ ಆಫ್ರಿಕಾ, 5. ಆಸ್ಟ್ರೇಲಿಯಾ, 6. ಪಾಕಿಸ್ತಾನ, 7. ಬಾಂಗ್ಲಾದೇಶ, 8. ಶ್ರೀಲಂಕಾ, 9. ವೆಸ್ಟ್ ಇಂಡೀಸ್, 10. ಅಫ್ಘಾನಿಸ್ತಾನ.

Story first published: Friday, August 14, 2020, 16:02 [IST]
Other articles published on Aug 14, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+