For Quick Alerts
ALLOW NOTIFICATIONS  
For Daily Alerts
 

2023ರ ಐಸಿಸಿ ಏಕದಿನ ತಂಡ ಪ್ರಕಟ: ರೋಹಿತ್ ಶರ್ಮಾಗೆ ನಾಯಕತ್ವ; 6 ಭಾರತೀಯರಿಗೆ ಸ್ಥಾನ

ಭಾರತ ತಂಡದ ಸ್ಟಾರ್ ಬ್ಯಾಟರ್‌ಗಳಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಸೇರಿದಂತೆ ಇತರ ಆರು ಭಾರತೀಯ ಆಟಗಾರರನ್ನು ಒಳಗೊಂಡ 2023ರ ಏಕದಿನ ತಂಡವನ್ನು ಐಸಿಸಿ ಪ್ರಕಟಿಸಿದೆ.

ಐಸಿಸಿ ವರ್ಷದ ಏಕದಿನ ತಂಡದ ನಾಯಕರಾಗಿ ಭಾರತದ ರೋಹಿತ್ ಶರ್ಮಾ ಮಂಗಳವಾರ ಆಯ್ಕೆಯಾದರು. ಈ ತಂಡದಲ್ಲಿ ಹೆಚ್ಚಾಗಿ ವಿಶ್ವಕಪ್ ಫೈನಲಿಸ್ಟ್‌ಗಳಾದ ಭಾರತ (ರನ್ನರ್ ಅಪ್) ಮತ್ತು ಆಸ್ಟ್ರೇಲಿಯಾ (ವಿಜೇತ), ಸೆಮಿಫೈನಲಿಸ್ಟ್‌ಗಳಾದ ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ಆಟಗಾರರನ್ನು ಒಳಗೊಂಡಿದೆ ಎಂದು ಐಸಿಸಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ICC ODI Squad for 2023 Announced: Rohit Sharma And Virat Kohli Among 6 Indian Players Get Place

ಐಸಿಸಿ ವರ್ಷದ ಏಕದಿನ ತಂಡದ ಅಗ್ರ ಕ್ರಮಾಂಕದಲ್ಲಿ ಆರಂಭಿಕರಾದ ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ ಸೇರಿದ್ದಾರೆ. ಭಾರತ ತಂಡದ ನಾಯಕ ಕಳೆದ ವರ್ಷ 52ರ ಸರಾಸರಿಯಲ್ಲಿ 1,255 ರನ್ ಗಳಿಸಿದರೆ, ಶುಭ್ಮನ್ ಗಿಲ್ ನ್ಯೂಜಿಲೆಂಡ್ ವಿರುದ್ಧದ ಅಮೋಘ 208 ರನ್ ಗಳಿಸಿದರು ಮತ್ತು ಏಕದಿನ ಸ್ವರೂಪದಲ್ಲಿ ಅತಿ ಹೆಚ್ಚು ರನ್ (1,584) ಗಳಿಸಿದ ಆಟಗಾರನಾದರು.

ಮೂರನೇ ಕ್ರಮಾಂಕದಲ್ಲಿದ್ದ ಟ್ರಾವಿಸ್ ಹೆಡ್, ವರ್ಷವಿಡೀ ಸ್ಥಿರವಾಗಿ ಮತ್ತು ಐಸಿಸಿ ಪಂದ್ಯಾವಳಿಯಲ್ಲಿ ಅಸಾಧಾರಣವಾಗಿ ಉತ್ತಮ ಪ್ರದರ್ಶನ ನೀಡಿದರು. ಭಾರತ ವಿರುದ್ಧ ಫೈನಲ್‌ನಲ್ಲಿ ಅವರ 137 ರನ್‌ಗಳ ಪ್ರದರ್ಶನ ಪ್ರಮುಖವಾಗಿತ್ತು.

ಐಸಿಸಿ ವರ್ಷದ ಏಕದಿನ ತಂಡದ ನಾಲ್ಕನೇ ಕ್ರಮಾಂಕದಲ್ಲಿ ಭಾರತದ ದಿಗ್ಗಜ ವಿರಾಟ್ ಕೊಹ್ಲಿ ಇದ್ದರೆ, ನಂತರ ಡ್ಯಾರಿಲ್ ಮಿಚೆಲ್, ಹೆನ್ರಿಚ್ ಕ್ಲಾಸೆನ್ ಮತ್ತು ಮಾರ್ಕೊ ಜಾನ್ಸೆನ್ ಸ್ಥಾನ ಪಡೆದಿದ್ದಾರೆ.

ICC ODI Squad for 2023 Announced: Rohit Sharma And Virat Kohli Among 6 Indian Players Get Place

ವಿರಾಟ್ ಕೊಹ್ಲಿ ಕಳೆದ ವರ್ಷ ಏಕದಿನ ಪಂದ್ಯಗಳಲ್ಲಿ 1,337 ರನ್ ಗಳಿಸಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಮುಗಿಸಿದರು ಮತ್ತು ವರ್ಷದಲ್ಲಿ ಆರು ಶತಕಗಳನ್ನು ಬಾರಿಸಿದರು.

ವಿರಾಟ್ ಕೊಹ್ಲಿ ಅವರು ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ ಅತಿ ಹೆಚ್ಚು ಅಂತಾರಾಷ್ಟ್ರೀಯ ಶತಕಗಳ ದಾಖಲೆಯನ್ನು ಮೀರಿಸಿದರು. ಏಕದಿನ ವಿಶ್ವಕಪ್‌ನಲ್ಲಿ ಪಂದ್ಯಾವಳಿಯ ಆಟಗಾರ ಪ್ರಶಸ್ತಿಯನ್ನು ಪಡೆದರು.

ನ್ಯೂಜಿಲೆಂಡ್‌ನ ಡ್ಯಾರಿಲ್ ಮಿಚೆಲ್ ಐದು ಶತಕಗಳನ್ನು ಸಿಡಿಸಿದರು ಹಾಗೂ 52.34ರ ಸರಾಸರಿ ಮತ್ತು 100.24ರ ಸ್ಟ್ರೈಕ್ ರೇಟ್‌ನಲ್ಲಿ 1,204 ರನ್ ಗಳಿಸಿದರು.

ICC ODI Squad for 2023 Announced: Rohit Sharma And Virat Kohli Among 6 Indian Players Get Place

ಹೆನ್ರಿಚ್ ಕ್ಲಾಸೆನ್ ಕೂಡ ಬ್ಯಾಟ್ ಮೂಲಕ ಇಡೀ ವರ್ಷ ಪ್ರಾಬಲ್ಯ ಸಾಧಿಸಿದರು. ಸೆಂಚುರಿಯನ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯ ವಿಜೇತ 174 ರನ್ ಅವರ ಅಗ್ರ ಬ್ಯಾಟಿಂಗ್ ಪ್ರದರ್ಶನವಾಗಿದೆ.

ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್ ಮತ್ತು ಮೊಹಮ್ಮದ್ ಶಮಿ ಅವರಂತಹ ಭಾರತೀಯ ಮೂವರು ಬೌಲರ್‌ಗಳೊಂದಿಗೆ ಆಸ್ಟ್ರೇಲಿಯಾದ ಆಡಮ್ ಝಂಪಾ ಬೌಲಿಂಗ್ ದಾಳಿಯನ್ನು ಸೇರಿದರು.

ಆಡಮ್ ಝಂಪಾ 2023ರ ಇಡೀ ವರ್ಷದಲ್ಲಿ 26.3ರ1 ಸರಾಸರಿಯಲ್ಲಿ 38 ವಿಕೆಟ್‌ಗಳನ್ನು ಪಡೆದರು. ವಿಶ್ವಕಪ್‌ನ ಮೂರು ಸತತ ಪಂದ್ಯಗಳಲ್ಲಿ ನಾಲ್ಕು ವಿಕೆಟ್‌ಗಳನ್ನು ಪಡೆದರು. ಜೊತೆಗೆ ಪಂದ್ಯಾವಳಿಯಲ್ಲಿ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ ಎನಿಸಿಕೊಂಡರು.

ಭಾರತದ ಮೊಹಮ್ಮದ್ ಸಿರಾಜ್ 2023ರಲ್ಲಿ 44 ವಿಕೆಟ್‌ಗಳನ್ನು ಗಳಿಸಿದರು. ಏಷ್ಯಾ ಕಪ್ ಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ 21 ರನ್‌ಗಳಿಗೆ 6 ವಿಕೆಟ್‌ಗಳನ್ನು ಕಬಳಿಸಿದ್ದು ಭಾರತ ಪ್ರಶಸ್ತಿ ಗೆಲ್ಲಲು ನೆರವಾಯಿತು.

ಕುಲದೀಪ್ ಯಾದವ್ ಕಳೆದ ವರ್ಷ 49 ಏಕದಿನ ವಿಕೆಟ್‌ಗಳನ್ನು ಕಬಳಿಸಿದರು. ಏಷ್ಯಾ ಕಪ್‌ನ ಸೂಪರ್-ಫೋರ್ ಹಂತದಲ್ಲಿ ಪಾಕಿಸ್ತಾನ ತಂಡದ ವಿರುದ್ಧ 25 ರನ್‌ಗಳಿಗೆ ಐದು ವಿಕೆಟ್‌ಗಳನ್ನು ಪಡೆದರು.

ಮುಂಬೈನಲ್ಲಿ ನಡೆದ ವಿಶ್ವಕಪ್ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ 57 ರನ್‌ಗಳಿಗೆ 7 ವಿಕೆಟ್‌ ಪಡೆದ ಮೊಹಮ್ಮದ್ ಶಮಿ ನಾಲ್ಕು ಬಾರಿ ಐದು ವಿಕೆಟ್‌ಗಳ ಸಾಧನೆ ಮಾಡಿ ವರ್ಷವಿಡೀ ಅತ್ಯುತ್ತಮವಾಗಿದ್ದರು.

ಐಸಿಸಿ ವರ್ಷದ ಏಕದಿನ ತಂಡ

ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ಟ್ರಾವಿಸ್ ಹೆಡ್, ವಿರಾಟ್ ಕೊಹ್ಲಿ, ಡ್ಯಾರಿಲ್ ಮಿಚೆಲ್, ಹೆನ್ರಿಚ್ ಕ್ಲಾಸೆನ್ (ವಿಕೆಟ್ ಕೀಪರ್), ಮಾರ್ಕೊ ಜಾನ್ಸೆನ್, ಆಡಮ್ ಝಂಪಾ, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ

Story first published: Tuesday, January 23, 2024, 16:43 [IST]
Other articles published on Jan 23, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+