For Quick Alerts
ALLOW NOTIFICATIONS  
For Daily Alerts
 

Virat Kohli: ಯಾವುದೇ ಪಂದ್ಯ ಆಡದಿದ್ದರೂ ಎಂಎಸ್ ಧೋನಿ ದಾಖಲೆ ಮುರಿದ ವಿರಾಟ್ ಕೊಹ್ಲಿ; ಅರೇ ಏನಿದು?

ಗುರುವಾರ, ಜನವರಿ 25ರಿಂದ ಹೈದರಾಬಾದ್‌ನಲ್ಲಿ ಆರಂಭವಾಗಲಿರುವ ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕಾಗಿ ಆತಿಥೇಯ ಟೀಮ್ ಇಂಡಿಯಾ ಸಜ್ಜಾಗಿದೆ. ಪಂದ್ಯ ಆರಂಭಕ್ಕೆ ಕೇವಲ ಒಂದು ದಿನ ಮಾತ್ರ ಬಾಕಿ ಉಳಿದಿದೆ.

ಇದಕ್ಕೂ ಮುನ್ನ ವೈಯಕ್ತಿಕ ಕಾರಣಗಳಿಂದ ಮೊದಲ ಎರಡು ಟೆಸ್ಟ್ ಪಂದ್ಯಗಳಿಂದ ಹೊರಗುಳಿದಿರುವ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಇಲ್ಲದೆ, ಭಾರತ ತಂಡ ಕಣಕ್ಕಿಳಿಯಬೇಕಾದ ಅನಿವಾರ್ಯತೆ ಎದುರಾಗಿದೆ.

ICC ODI Squad for 2023: Virat Kohli Breaks MS Dhonis Rare Record

ಆದಾಗ್ಯೂ, ತಮ್ಮ ಟೆಸ್ಟ್ ಪಂದ್ಯಗಳಿಂದ ಹಿಂದೆ ಸರಿಯುವ ಘೋಷಣೆಯ ಕೆಲವೇ ಕ್ಷಣಗಳಲ್ಲಿ, ವಿರಾಟ್ ಕೊಹ್ಲಿ 2023ರ ಐಸಿಸಿ ವರ್ಷದ ಏಕದಿನ ತಂಡದಲ್ಲಿ ಸ್ಥಾನ ಪಡೆದರು. ಇದಾದ ನಂತರ ಕೆಲವೇ ಕ್ಷಣಗಳಲ್ಲಿ ಭಾರತದ ಮಾಜಿ ನಾಯಕ ಎಂಎಸ್ ಧೋನಿ ಅವರ ಬೃಹತ್ ದಾಖಲೆಯನ್ನು ಮುರಿದರು.

ವಿರಾಟ್ ಕೊಹ್ಲಿ 14ನೇ ಬಾರಿಗೆ ಐಸಿಸಿ ವರ್ಷದ ಏಕದಿನ ತಂಡಕ್ಕೆ ಆಯ್ಕೆಯಾಗಿದ್ದರೆ, ಮಾಜಿ ಕ್ರಿಕೆಟಿಗ ಎಂಎಸ್ ಧೋನಿ 13 ಬಾರಿ ಐಸಿಸಿ ವರ್ಷದ ಏಕದಿನ ತಂಡದಲ್ಲಿ ಕಾಣಿಸಿಕೊಂಡಿದ್ದರು.

ವೈಯುಕ್ತಿಕ ಕಾರಣಗಳಿಂದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಎರಡು ಟೆಸ್ಟ್ ಪಂದ್ಯಗಳಿಂದ ಹೊರಗುಳಿಯಲಿರುವ ವಿರಾಟ್ ಕೊಹ್ಲಿ ಅವರು "ಅದ್ಭುತ ಆಟಗಾರ' ಎಂದು ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮಂಗಳವಾರ ಹೇಳಿದ್ದಾರೆ.

ICC ODI Squad for 2023: Virat Kohli Breaks MS Dhonis Rare Record

ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು ಇಂಗ್ಲೆಂಡ್ ವಿರುದ್ಧ ಹೋರಾಡಲಿದೆ.

ಐದು ಪಂದ್ಯಗಳ ಸರಣಿಯ ಎರಡನೇ ಟೆಸ್ಟ್ ವಿಶಾಖಪಟ್ಟಣದಲ್ಲಿ, ಮೂರನೇ ಟೆಸ್ಟ್ ಪಂದ್ಯ ರಾಜ್‌ಕೋಟ್‌ನಲ್ಲಿ, ನಾಲ್ಕನೇ ಟೆಸ್ಟ್ ರಾಂಚಿಯಲ್ಲಿ ಮತ್ತು ಐದನೇ ಮತ್ತು ಅಂತಿಮ ಟೆಸ್ಟ್ ಧರ್ಮಶಾಲಾದಲ್ಲಿ ನಡೆಯಲಿದೆ.

"ಯಾವುದೇ ತಂಡವು ವಿರಾಟ್ ಕೊಹ್ಲಿಯಂತಹ ಗುಣಮಟ್ಟದ ಆಟಗಾರನನ್ನು ಕಳೆದುಕೊಳ್ಳುತ್ತದೆ. ಅದರಲ್ಲಿ ಯಾವುದೇ ಸಂದೇಹವಿಲ್ಲ. ಅವರು ಅಸಾಧಾರಣ ಆಟಗಾರ ಮತ್ತು ಅವರ ದಾಖಲೆಗಳು ಎಲ್ಲವನ್ನೂ ಹೇಳುತ್ತವೆ. ಅವರು ತಂಡಕ್ಕೆ ದೊಡ್ಡ ಉತ್ತೇಜನ ನೀಡುತ್ತಿದ್ದಾರೆ. ಆದರೆ ಇದು ಇತರ ಆಟಗಾರರು ಅವಕಾಶ ಪಡೆಯಲು ಮತ್ತು ಕೆಲವು ಉತ್ತಮ ಪ್ರದರ್ಶನಗಳನ್ನು ನೀಡಲು ಅವಕಾಶ ನೀಡುತ್ತದೆ," ಎಂದು ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಪಂದ್ಯದ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

"ನಾವು ತಂಡದಲ್ಲಿ ಕೆಲವು ಉತ್ತಮ ಅನುಭವಿ ಆಟಗಾರರನ್ನು ಪಡೆದಿದ್ದೇವೆ. ನಮ್ಮಲ್ಲಿ ರೋಹಿತ್ ಶರ್ಮಾ, ಕೆಎಲ್ ರಾಹುಲ್, ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಅವರಂತಹ ಆಟಗಾರರು ಟೆಸ್ಟ್‌ನಲ್ಲಿ ಒಂದು ದಶಕಕ್ಕೂ ಹೆಚ್ಚು ಕಾಲ ತಂಡದಲ್ಲಿ ಆಡಿದ್ದಾರೆ".

"ಅಲ್ಲದೆ, ತಂಡದಲ್ಲಿ ಶುಭ್ಮನ್ ಗಿಲ್ ಮತ್ತು ಶ್ರೇಯಸ್ ಅಯ್ಯರ್ ಅವರಂತಹ ಕೆಲವು ಶ್ರೇಷ್ಠ ಆಟಗಾರರಿದ್ದಾರೆ. ಆದರೆ ನಾನು ಅವರನ್ನು ಯುವಕರೆಂದು ಕರೆಯುವುದಿಲ್ಲ. ಅವರು ಸ್ವಲ್ಪ ಸಮಯದವರೆಗೆ ತಂಡದೊಂದಿಗೆ ಇದ್ದಾರೆ ಮತ್ತು ಐದು ಪಂದ್ಯಗಳ ಸರಣಿಯಲ್ಲಿ ತಮ್ಮನ್ನು ತಾವು ಪ್ರದರ್ಶಿಸಲು ಮತ್ತು ಸಾಬೀತುಪಡಿಸಲು ಅವರಿಗೆ ಅವಕಾಶವಿದೆ," ಎಂದು ಭಾರತ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ತಿಳಿಸಿದರು.

ಹೈದರಾಬಾದ್ ಪಿಚ್ ಬಗ್ಗೆ ಕೇಳಿದಾಗ, ಪರಿಸ್ಥಿತಿಯನ್ನು ಊಹಿಸಲು ಕಷ್ಟ ಎಂದು ಹೇಳಿದರು. "ಹೇಳುವುದು ಕಷ್ಟ. ಆಟ ಪ್ರಾರಂಭವಾದ ನಂತರ ನಾವು ನೋಡುತ್ತೇವೆ ಮತ್ತು ಅದನ್ನು ಲೆಕ್ಕಾಚಾರ ಮಾಡುತ್ತೇವೆ. ನಾನು ನೋಡಿದ ಸ್ಥಳದಿಂದ ಅದು ಚೆನ್ನಾಗಿ ಕಾಣುತ್ತದೆ. ಪಿಚ್ ಸ್ವಲ್ಪ ಸ್ಪಿನ್ ಆಗಬಹುದು, ಎಷ್ಟು ವೇಗವಾಗಿದೆ ನನಗೆ ಗೊತ್ತಿಲ್ಲ," ಎಂದು ರಾಹುಲ್ ದ್ರಾವಿಡ್ ಹೇಳಿದರು.

Story first published: Tuesday, January 23, 2024, 22:34 [IST]
Other articles published on Jan 23, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+