ಐಸಿಸಿ ಏಕದಿನ ತಂಡ ಪ್ರಕಟ, ವಿರಾಟ್ ಕೊಹ್ಲಿ ನಾಯಕ
ಬೆಂಗಳೂರು, ಡಿಸೆಂಬರ್ 22: ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) 2016ನೇ ಸಾಲಿನ ಅಂತಾರಾಷ್ಟ್ರೀಯ ಏಕದಿನ ತಂಡವನ್ನು ಪ್ರಕಟಿಸಲಾಗಿದೆ. ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಅವರನ್ನು ನಾಯಕರಾಗಿ ಆಯ್ಕೆ ಮಾಡಲಾಗಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) ತನ್ನ ವಾರ್ಷಿಕ ಪ್ರಶಸ್ತಿಗಳನ್ನು ಗುರುವಾರ (ಡಿಸೆಂಬರ್ 22) ಪ್ರಕಟಿಸಿದೆ. [ಐಸಿಸಿ 2016 ಟೆಸ್ಟ್ ಟೀಂ ಪ್ರಕಟ, ಆರ್ ಅಶ್ವಿನ್ ಏಕೈಕ ಭಾರತೀಯ]

ಇಂಗ್ಲೆಂಡ್ ನಾಯಕ ಅಲಿಸ್ಟರ್ ಕುಕ್ ಅವರು ಟೆಸ್ಟ್ ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ. [ಐಸಿಸಿ ಪ್ರಶಸ್ತಿ ಘೋಷಣೆ: ಮಿಸ್ಬಾಗೆ ಮೊದಲ ಪ್ರಶಸ್ತಿ]
ಐಸಿಸಿ ಏಕದಿನ ತಂಡದಲ್ಲಿ ಕೊಹ್ಲಿ ಅಲ್ಲದೆ, ರೋಹಿತ್ ಶರ್ಮ ಹಾಗೂ ರವೀಂದ್ರ ಜಡೇಜ ಭಾರತದಿಂದ ಆಯ್ಕೆಯಾದ ಉಳಿದ ಆಟಗಾರರಾಗಿದ್ದಾರೆ.
ಐಸಿಸಿ ವಾರ್ಷಿಕ ಏಕದಿನ ಕ್ರಿಕೆಟ್ ತಂಡ 2016:
1. ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ)
2. ಕ್ವಿಂಟಾನ್ ಡಿ ಕಾಕ್ (ದಕ್ಷಿಣ ಆಫ್ರಿಕಾ) (ವಿಕೆಟ್ ಕೀಪರ್)
3. ರೋಹಿತ್ ಶರ್ಮ (ಭಾರತ)
4. ವಿರಾಟ್ ಕೊಹ್ಲಿ (ಭಾರತ) (ನಾಯಕ)
5. ಎಬಿ ಡಿ ವಿಲಿಯರ್ಸ್ (ದಕ್ಷಿಣ ಆಫ್ರಿಕಾ)
6. ಜೋಸ್ ಬಟ್ಲರ್ (ಇಂಗ್ಲೆಂಡ್)
7. ಮಿಚೆಲ್ ಮಾರ್ಷ್ (ಆಸ್ಟ್ರೇಲಿಯಾ)
8. ರವೀಂದ್ರ ಜಡೇಜ (ಭಾರತ)
9. ಮಿಚೆಲ್ ಸ್ಟಾರ್ಕ್ (ಆಸ್ಟ್ರೇಲಿಯಾ)
10. ಕಂಗೀಸೋ ರಬಾಡಾ (ದಕ್ಷಿಣ ಆಫ್ರಿಕಾ)
11. ಸುನಿಲ್ ನರೇನ್ (ವೆಸ್ಟ್ ಇಂಡೀಸ್)
12. ಇಮ್ರಾನ್ ತಾಹೀರ್ (ದಕ್ಷಿಣ ಆಫ್ರಿಕಾ)
(ಒನ್ಇಂಡಿಯಾ ಸುದ್ದಿ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications