ICC World Cup 2023: ಟೀಮ್ ಇಂಡಿಯಾದ ವಿಶ್ವಕಪ್ ಆರಂಭಿಕ ಪಂದ್ಯಕ್ಕೂ ಮುನ್ನ ಮಹತ್ವದ ಅಪ್ಡೇಟ್ಸ್
ಭಾರತದ ನಾಯಕ ರೋಹಿತ್ ಶರ್ಮಾ ಅವರು ಭಾನುವಾರ ( ಅ 8) ಆಸ್ಟ್ರೇಲಿಯಾ ವಿರುದ್ಧದ ಮೊದಲ ಪಂದ್ಯದಲ್ಲಿ ಯಾವೆಲ್ಲಾ ಲೆಕ್ಕಾಚಾರದಿಂದ ಕಣಕ್ಕೆ ಇಳಿಯಲಿದೆ ಎಂಬ ಬಗ್ಗೆ ಚರ್ಚೆ ಆರಂಭವಾಗಿದೆ. ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳುವುದು ಫಿಕ್ಸ್.
ಭಾರತದ ಪಿಚ್ ಮರ್ಮ ಅರಿತುಕೊಂಡು ಮೂರು ಸ್ಪಿನ್ ಬೌಲರ್ ಗಳೊಂದಿಗೆ ಆಸೀಸ್ ಬ್ಯಾಟರ್ ಗಳನ್ನು ಕಟ್ಟಿ ಹಾಕಲು ಪ್ಲ್ಯಾನ್ ಮಾಡಿಕೊಂಡಿದೆ. ಎಡಗೈ ರಿಸ್ಟ್ ಸ್ಪಿನ್ನರ್ ಕುಲದೀಪ್ ಯಾದವ್, ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮತ್ತು ಎಡಗೈ ಸ್ಪಿನ್ನರ್ ರವೀಂದ್ರ ಜಡೇಜಾ ಚೆನ್ನೈನಲ್ಲಿ ಬ್ಲ್ಯೂ ಜೆರ್ಸಿ ತೊಟ್ಟು ಮೈದಾನಕ್ಕೆ ಇಳಿಯುವ ಸಾಧ್ಯತೆ ದಟ್ಟವಾಗಿದೆ.

ಚಿಪಾಕ್ ನಲ್ಲಿ ಆಡುವ ಇಲೆವೆನ್ ನಲ್ಲಿ ಮೂವರು ಸ್ಪಿನ್ ಬೌಲರ್ ಗಳನ್ನು ಸೇರಿಸಿಕೊಳ್ಳಬಹುದು ಎಂದು ರೋಹಿತ್ ಶರ್ಮಾ ಸುಳಿವನ್ನು ನೀಡಿದ್ದಾರೆ. ಚೆನ್ನೈ ಮೈದಾನದ ಪಿಚ್ ಸ್ಪಿನ್ನರ್ ಗಳಿಗೆ ಸಹಾಯಕವಾಗಲಿದೆ ಎಂದು ಪರಿಗಣಿಸಲಾಗಿದೆ.
ಮೂರು ಸ್ಪಿನ್ನರ್ ಗಳನ್ನು ತಂಡದಲ್ಲಿ ಸೇರಿಸಲು ನೀವು ಯೋಚಿಸುತ್ತಿದ್ದೀರಾ ಎಂದು ಕೇಳಿದ ಪ್ರಶ್ನೆಗೆ ರೋಹಿತ್, "ಹೌದು, ನಮ್ಮ ತಂಡದಲ್ಲಿ ನಮಗೆ ಆಯ್ಕೆಯಿದೆ. ಅಲ್ಲಿ ನಾವು ಮೂವರು ಸ್ಪಿನ್ನರ್ ಗಳಿಗೆ ತಂಡಕ್ಕೆ ಸೇರಿಸಿಕೊಳ್ಳಬಹುದು. ಏಕೆಂದರೆ ನಾನು ಹಾರ್ದಿಕ್ ಪಾಂಡ್ಯವನ್ನು ವೇಗದ ಬೌಲರ್ ಎಂದು ಪರಿಗಣಿಸುವುದಿಲ್ಲ".
ಅಶ್ವಿನ್ ಆಗಮನ ತಂಡಕ್ಕೆ ಸಮತೋಲನವನ್ನು ನೀಡಿದೆ
"ಅವರು ಬೌಲಿಂಗ್ ನಲ್ಲೂ ತಂಡಕ್ಕೆ ನೆರವಾಗಬಲ್ಲರು. ಇದು ನಮಗೆ ಮೂರು ಸ್ಪಿನ್ನರ್ ಗಳೊಂದಿಗೆ ಆಡುವ ಆಯ್ಕೆಯನ್ನು ನೀಡುತ್ತದೆ. ಮತ್ತು ಮೂವರು ವೇಗದ ಬೌಲರ್ ಗಳು ತಂಡಕ್ಕೆ ಬಲ ತುಂಬಲಿದ್ದಾರೆ" ಎಂದು ರೋಹಿತ್ ಶರ್ಮಾ ಹೇಳಿದ್ದಾರೆ. ನಿಸ್ಸಂಶಯವಾಗಿ, ಅಶ್ವಿನ್ ತಂಡದಲ್ಲಿ ಉಪಸ್ಥಿತಿಯು ಬ್ಯಾಟಿಂಗ್ ನಲ್ಲಿಯೂ ತಂಡಕ್ಕೆ ಆಳವನ್ನು ನೀಡುತ್ತದೆ.
ಅಶ್ವಿನ್ ಆಗಮನ ತಂಡಕ್ಕೆ ಸಮತೋಲನವನ್ನು ನೀಡಿದೆ. ಇದು ನಮಗೆ ಎಂಟನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಆಯ್ಕೆಯನ್ನು ಸಹ ನೀಡುತ್ತದೆ. ಪಿಚ್ ವರ್ತನೆಯನ್ನು ನೋಡಿ ನಾವು ಮೂವರು ಸ್ಪಿನ್ ಬೌಲರ್ ಗಳೊಂದಿಗೆ ಇಳಿಯಬಹುದು ಎಂದಿದ್ದಾರೆ.
ವಿಶ್ವಕಪ್ ಸಮಯದಲ್ಲಿ ಯಾವುದೇ ಫಿಟ್ನೆಸ್ ಸಮಸ್ಯೆ ಬೇಡ
ರೋಹಿತ್ ಆಡುವ ಹನ್ನೊಂದರಲ್ಲಿ ಹೆಚ್ಚಿನ ಬದಲಾವಣೆಗಳನ್ನು ಮಾಡುವಲ್ಲಿ ಹೆಸರುವಾಸಿ. ಈ ಪರಿಸ್ಥಿತಿಯಲ್ಲಿ, ವಿಶ್ವಕಪ್ ಸಮಯದಲ್ಲಿ ಯಾವುದೇ ಫಿಟ್ನೆಸ್ ಸಮಸ್ಯೆ ಇಲ್ಲದಿದ್ದರೆ, ತಂಡದ ಒಂಬತ್ತು ಅಥವಾ 10 ಆಟಗಾರರು ಹೆಚ್ಚಿನ ಪಂದ್ಯಗಳನ್ನು ಆಡುತ್ತಾರೆ ಎಂದು ಅವರು ಸೂಚಿಸಿದರು. ಸಂದರ್ಭಕ್ಕೆ ಅನುಗುಣವಾಗಿ ಅಂತಿಮ ಹನ್ನೊಂದರಲ್ಲಿ ಒಂದು ಅಥವಾ ಎರಡು ಬದಲಾವಣೆ ಕಾಣಬಹುದು.
"ನಾವು ಖಂಡಿತವಾಗಿಯೂ ಅತ್ಯುತ್ತಮ ಇಲೆವೆನ್ ಮೈದಾನಕ್ಕೆ ಇಳಿಸಲು ಬಯಸುತ್ತೇವೆ. ಆದರೆ ನಿಮ್ಮ ಮುಂದೆ ಇರುವ ಪರಿಸ್ಥಿತಿಗಳ ಆಧಾರದ ಮೇಲೆ ತಂಡವನ್ನು ರಚಿಸಬೇಕು. ಚೆನ್ನೈನಲ್ಲಿ ನಿಧಾನಗತಿಯ ಬೌಲರ್ ಗಳಿಗೆ ಪಿಚ್ ಸ್ವಲ್ಪ ಸಹಾಯವನ್ನು ನೀಡುತ್ತದೆ. ಪಿಚ್ ಮರ್ಮ ಹಾಗೂ ಪರಿಸ್ಥಿತಿಗೆ ಅನುಗುಣವಾಗಿ ತಂಡವನ್ನು ರಚಿಸುತ್ತೇವೆ".
ತಂಡದಲ್ಲಿ ಹೆಚ್ಚಿನ ಬದಲಾವಣೆ ಕಾಣುವುದು ಕೊಂಚ ವಿರಳ
"ಮುಂದಿನ ಪಂದ್ಯಗಳಲ್ಲೂ ತಂಡದಲ್ಲಿ ಹೆಚ್ಚಿನ ಬದಲಾವಣೆ ಕಾಣುವುದು ಕೊಂಚ ವಿರಳ ಎಂದಿದ್ದಾರೆ. ಡೆಂಗ್ಯೂನಿಂದ ಬಳಲುತ್ತಿದ್ದ ಶುಭಮನ್ ಗಿಲ್ ಪಂದ್ಯದಿಂದ ಹೊರಗುಳಿಯುವುದಿಲ್ಲ" ಎಂದು ರೋಹಿತ್ ಹೇಳಿದ್ದಾರೆ. "ಇಲ್ಲ, ಚಿಂತೆ ಮಾಡುವ ಪ್ರಶ್ನೆ ಇಲ್ಲವೇ ಇಲ್ಲ. ಗಿಲ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಹ್ಯೂಮನ್ ಬೀಯಿಂಗ್ ಆಗಿ , ಅವರು ಸರಿಯಾಗಬೇಕೆಂದು ನಾನು ಬಯಸುತ್ತೇನೆ" ಎಂದು ರೋಹಿತ್ ಶರ್ಮ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications