For Quick Alerts
ALLOW NOTIFICATIONS  
For Daily Alerts
 

"ತಿಂಗಳ ಆಟಗಾರ " ಪ್ರಶಸ್ತಿ ಪರಿಚಯಿಸಿದ ಐಸಿಸಿ: ಟೀಮ್ ಇಂಡಿಯಾದ ಯುವ ಆಟಗಾರರ ಪೈಪೋಟಿ

ICC Player of the Month awards: Siraj, Pant, Natarajan, Ashwin, Washington Sundar in contention among others

ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಐಸಿಸಿ ಬುಧವಾರ "ಐಸಿಸಿ ತಿಂಗಳ ಆಟಗಾರ" ಪ್ರಶಸ್ತಿಯನ್ನು ಪರಿಚಯಿಸುವ ನಿರ್ಧಾರವನ್ನು ಘೋಷಿಸಿದೆ. ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲೂ ಪುರುಷ ಹಾಗೂ ಮಹಿಳೆಯರ ಕ್ರಿಕೆಟ್ ವಿಭಾಗದಲ್ಲಿ ವರ್ಷದುದಕ್ಕೂ ಉತ್ತಮ ಪ್ರದರ್ಶನ ನೀಡುವ ಆಟಗಾರರನ್ನು ಗುರುತಿಸುವ ಉದ್ಧೇಶದಿಂದ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.

"ಮಾಜಿ ಆಟಗಾರರು, ಪ್ರಸಾರಕರು ಮತ್ತು ಪತ್ರಕರ್ತರು ಮತ್ತು ಅಭಿಮಾನಿಗಳನ್ನು ಒಳಗೊಂಡ ಆಯ್ದ ಸ್ವತಂತ್ರ ಐಸಿಸಿ ಮತದಾನ ಅಕಾಡೆಮಿ ಐಸಿಸಿ ಪುರುಷರ ಆಟಗಾರ ಮತ್ತು ಐಸಿಸಿ ಮಹಿಳಾ ಆಟಗಾರನನ್ನು ಮತದಾನದ ಮೂಲಕ ಆಯ್ಕೆ ಮಾಡುತ್ತದೆ" ಎಂದು ಐಸಿಸಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಈ ಪ್ರಶಸ್ತಿಯ ಚೊಚ್ಚಲ ಕಿರೀಟವನ್ನು ಮುಡಿಗೇರಿಸಿಕೊಳ್ಳಲು ಸಾಕಷ್ಟು ಪೈಪೋಟಿ ಕಂಡುಬಂದಿದ್ದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಜನವರಿ ತಿಂಗಳಿನಲ್ಲಿ ಅದ್ಭುತ ಕ್ರಿಕೆಟ್ ಪ್ರದರ್ಶನ ಅಭಿಮಾನಿಗಳ ಕುತೂಹಲವನ್ನು ಹೆಚ್ಚುವಂತೆ ಮಾಡಿದೆ. ಭಾರತದಿಂದ ಯುವಾ ಆಟಗಾರರಾದ ಮೊಹಮ್ಮದ್ ಸಿರಾಜ್, ವಾಶಿಂಗ್ಟನ್ ಸುಂದರ್, ಟಿ ನಟರಾಜನ್, ರಿಷಭ್ ಪಂತ್, ಅಫ್ಘಾನಿಸ್ತಾನದಿಂದ ರಹ್ಮನುಲ್ಲಹ್ ಗುರ್ಬಾಜ್ ಅವರಿಂದ ಹಿಡಿದು ಅನುಭವಿ ಆಟಗಾರರಾದ ಭಾರತದ ಆರ್ ಅಶ್ವಿನ್, ಇಂಗ್ಲೆಂಡ್‌ನ ಜೋ ರೂಟ್, ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್, ದ. ಆಫ್ರಿಕಾದ ಮರಿಝನ್ನೆ ಕಪ್, ನಾಡೈನ್ ಡಿ ಕ್ಲಕ್ ಹಾಘೂ ಪಾಕಿಸ್ತಾನ್ ನಿದಾದರ್‌ರಂತಾ ಆಟಗಾರರ ಮಧ್ಯೆ ಈ ಪ್ರಶಸ್ತಿಗೆ ಪೈಪೋಟಿ ನಡೆಯಲಿದೆ.

ಈ ಬಗ್ಗೆ ಐಸಿಸಿ ಜನರಲ್ ಮ್ಯಾನೇಜರ್ ಜೆಫ್ ಅಲ್ಲಾರ್ಡೈಸ್ ಪ್ರತಿಕ್ರಿಯಿಸಿದ್ದು "ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಯ ಮೂಲಕ ಅಭಿಮಾನಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರಲು ಉತ್ತಮ ಅವಕಾಶವಾಗಿದೆ. ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರರ ಪ್ರದರ್ಶನವನ್ನು ವರ್ಷದುದ್ದಕ್ಕೂ ಸಂಭ್ರಮಿಸಲು ಇದು ಉತ್ತಮ ಅವಕಾಶವಾಗಿದೆ. ಪುರುಷ ಮತ್ತು ಮಹಿಳಾ ಆಟಗಾರರಿಗೆ ತಮ್ಮ ಅದ್ಭುತವಾದ ಪ್ರದರ್ಶನವನ್ನು ಅಂಗಳದಲ್ಲಿ ನೀಡಲು ಉತ್ತಮ ವೇದಿಕೆಯನ್ನು ಒದಗಿಸಲಿದೆ" ಎಂದಿದ್ದಾರೆ.

Story first published: Wednesday, January 27, 2021, 17:53 [IST]
Other articles published on Jan 27, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+