For Quick Alerts
ALLOW NOTIFICATIONS  
For Daily Alerts
 

ICC Player of the Month: ಫೆಬ್ರವರಿ ತಿಂಗಳ ಪ್ರಶಸ್ತಿ ಮುಡಿಗೇರಿಸಿಕೊಂಡ ಹ್ಯಾರಿ ಬ್ರೂಕ್ ಹಾಗೂ ಆಶ್ಲೇ ಗಾರ್ಡ್ನರ್

ICC Player of the Month: Engaland cricketer Harry Brook and Aussis player Ashleigh Gardner win February Month Award

ಐಸಿಸಿ ಪ್ಲೇಯರ್ ಆಪ್‌ದಿ ಮಂತ್ ಪ್ರಶಸ್ತಿಯನ್ನು ಐಸಿಸಿ ಪ್ರಕಟಿಸಿದೆ. ಪುರುಷರ ವಿಭಾಗದಲ್ಲಿ ಇಂಗ್ಲೆಂಡ್ ತಂಡದ ಯುವ ಆಟಗಾರ ಹ್ಯಾರಿ ಬ್ರೂಕ್ ಈ ಪ್ರಶಸ್ತಿ ಗೆದ್ದುಕೊಂಡಿದ್ದರೆ ಮಹಿಳೆಯರ ವಿಭಾಗದಲ್ಲಿ ಆಸ್ಟ್ರೇಲಿಯಾದ ಸ್ಟಾರ್ ಆಟಗಾರ್ತಿ ಆಸ್ಲೆ ಗಾರ್ಡ್ನರ್ ಈ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.

ಈ ಇಬ್ಬರು ಆಗಾರರು ಕೂಡ ಫೆಬ್ರವರಿ ತಿಂಗಳಿನಲ್ಲಿ ಅದ್ಭುತ ಪ್ರದರ್ಶನ ನೀಡಿ ಮಿಂಚಿದ್ದರು. ಗಾರ್ಡ್ನರ್ ದಕ್ಷಿಣ ಆಫ್ರಿಕಾದಲ್ಲಿ ನಡೆದ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ಪರವಾಗಿ ಅಮೋಘ ಪ್ರದರ್ಶನ ನೀಡಿದ್ದರು. ಇದರ ಪರಿಣಾಮವಾಗಿ ಆಸ್ಟ್ರೇಲಿಯಾ ಮಹಿಳಾ ತಂಡ ವಿಶ್ವಕಪ್ ಟ್ರೋಫಿ ಎತ್ತಿ ಹಿಡಿದಿತ್ತು. ಆ ಟೂರ್ನಿಯಲ್ಲಿ ಗಾರ್ಡ್ನರ್ ಐದು ಇನ್ನಿಂಗ್ಸ್‌ಗಳಲ್ಲಿ 110 ರನ್‌ಗಳಿಸಿದ್ದು 12.50ಯಷ್ಟು ಅಮೋಘ ಸರಾಸರಿಯಲ್ಲಿ 10 ವಿಎಕಟ್ ಕಬಳಿಸಿದ್ದರು.

ಈ ಪ್ರಶಸ್ತಿ ಪಡೆದುಕೊಂಡ ಬಳಿಕ ಪ್ರತಿಕ್ರಿಯೆ ನೀಡಿರುವ ಗಾರ್ಡ್ನರ್ ದಕ್ಷಿಣ ಆಫ್ರಿಕಾದಲ್ಲಿ ನಡೆದ ಈ ಮೆಗಾ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿ ತಂಡದ ಯಶಸ್ಸಿಗೆ ಕಾರಣವಾದ ಬಗ್ಗೆ ಸಂತಸವಿದೆ ಎಂದಿದ್ದಾರೆ. "ಐಸಿಸಿ ಪ್ಲೇಯರ್ ಆಫ್‌ ದಿ ಮಂತ್ ಪ್ರಶಸ್ತಿಗೆ ನನ್ನನ್ನು ಆಯ್ಕೆ ಮಾಡಿರುವ ಎಲ್ಲರಿಗೂ ಧನ್ಯವಾದಗಳು. ಕಳೆದ ತಿಂಗಳು ಮಹಿಳಾ ಕ್ರಿಕೆಟ್‌ಗೆ ಅದ್ಭುಯತ ಸಮಯವಾಗಿತ್ತು. ನಮ್ಮೆಲ್ಲರಿಗೂ ಸಾಕಷ್ಟು ಹುರುಪು ಮೂಡಿಸಿತ್ತು. ಟಿ20 ವಿಶ್ವಕಪ್ ಅದ್ಭುತ ಟೂರ್ನಿಯಾಗಿದ್ದು ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ತುಂಬಿದ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯವನ್ನು ಆಡಿದ್ದು ಅದ್ಭುತ ಅನುಭವ" ಎಂದಿದ್ದಾರೆ ಗಾರ್ಡ್ನರ್.

"ನಮ್ಮ ತಂಡ ಸಾಕಷ್ಟು ಪ್ರಮಾಣದಲ್ಲಿ ವಿಶ್ವದರ್ಜೆಯ ಆಟಗಾರ್ತಿಯರನ್ನು ಹೊಂದಿರುವುದು ನಮ್ಮ ಅದೃಷ್ಟ. ವಿಶ್ವಕಪ್‌ನಂತಾ ಟೂರ್ನಿಯಲ್ಲಿ ತಂಡದ ಪರವಾಗಿ ಉತ್ತ ಪ್ರದರ್ಶನ ನೀಡಲು ಸಾಧ್ಯವಾಗಿರುವುದಕ್ಕೆ ಸಂತಸವಾಗುತ್ತದೆ ಎಂದಿದ್ದಾರೆ ಆಶ್ಲೆ ಗಾರ್ಡ್ನರ್.

ಇನ್ನು ಇಂಗ್ಲೆಂಡ್ ತಂಡದ ಹ್ಯಾರಿ ಬ್ರೂಕ್ ಕಳೆದ ತಿಂಗಳು ನ್ಯೂಜಿಲೆಂಡ್ ಪ್ರವಾಸದಲ್ಲಿ ಅಮೋಘ ಪ್ರದರ್ಶನ ನೀಡಿ ಅಬ್ಬರಿಸಿದ್ದರು. ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 186 ರನ್‌ಗಳ ಮಹತ್ವದ ಕೊಡುಗೆ ನೀಡಿದ್ದ ಬ್ರೂಕ್, ತಂಡ ಸರಣಿ ಗೆಲ್ಲಲು ಪ್ರಮುಖ ಪಾತ್ರವಹಿಸಿದರು. ಇದಕ್ಕೂ ಮುನ್ನ ಕಳೆದ ವರ್ಷದ ಡಿಸೆಂಬರ್‌ನಲ್ಲಿಯೂ ಐಸಿಸಿಯ ಈ ಪ್ರಶಸ್ತಿ ಗೆದ್ದಿದ್ದು ಇದು ಅವರ ಎರಡನೇ ಪ್ರಶಸ್ತಿಯಾಗಿದೆ.

"ಕೆಲವೇ ತಿಂಗಳ ಅಂತರದಲ್ಲಿ ಎರಡನೇ ಬಾರಿಗೆ ಈ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿರುವುದು ನನಗೆ ದೊರೆತ ವಿಶೇಷ ಗೌರವವಾಗಿದೆ. ಇದಕ್ಕಾಗಿ ನಾನು ತಂಡದ ಸಹ ಆಟಗಾರರಿಗೆ ಹಾಗೂ ಇಂಗ್ಲೆಂಡ್ ತಂಡದ ಮ್ಯಾನೇಜ್‌ಮೆಂಟ್‌ಗೆ ಧನ್ಯವಾದ ಹೇಳುತ್ತೇನೆ. ಅವರು ನನಗೆ ಬೆಂಬಲವಾಗಿ ನಿಂತಿದ್ದು ಇದರಿಂದಾಗಿ ನನ್ನ ಸಾಮರ್ಥ್ಯವನ್ನು ಪ್ರದರ್ಶಿಸಲು ಸಾಧ್ಯವಾಗಿದೆ. ಇದು ಈ ವರ್ಷಕ್ಕೆ ಉತ್ತಮವಾದ ಆರಂಭವಾಗಿದ್ದು ಈ ಪ್ರದರ್ಶನವನನ್ಉ ಮುಂದೆಯೂ ನೀಡುವ ಪ್ರಯತ್ನ ಮಾಡಲಿದ್ದೇನೆ. ಮುಂದೆ ಆಶಸ್ ಹಾಗೂ ಭಾರತದಲ್ಲಿ ಏಕದಿನ ವಿಶ್ವಕಪ್ ಟೂರ್ನಿ ನಡೆಯಲಿದ್ದು ಈ ಎರಡು ತಂಡದಲ್ಲಿಯೂ ಸ್ಥಾನ ಪಡೆಯಲು ದೃಷ್ಟಿ ನೆಟ್ಟಿದ್ದೇನೆ" ಎಂದಿದ್ದಾರೆ ಹ್ಯಾರಿ ಬ್ರೂಕ್.

Story first published: Monday, March 13, 2023, 17:19 [IST]
Other articles published on Mar 13, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+