ಮಾರ್ಚ್ 'ತಿಂಗಳ ಆಟಗಾರ' ಪ್ರಶಸ್ತಿಗೆ ನಾಮನಿರ್ದೇಶಿತರ ಪಟ್ಟಿ ಪ್ರಕಟ

ದುಬೈ: ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮಾರ್ಚ್ ತಿಂಗಳ ಆಟಗಾರ ಪ್ರಶಸ್ತಿಗೆ ಐಸಿಸಿ ನಾಮ ನಿರ್ದೇಶಿಸಿರುವ ಹೆಸರುಗಳು ಪ್ರಕಟವಾಗಿದೆ. ಮೂರೂ ಮಾದರಿಯ ಕ್ರಿಕೆಟ್‌ಗಳಲ್ಲಿ ಪುರುಷ ಮತ್ತು ಮಹಿಳಾ ಎರಡೂ ವಿಭಾಗಕ್ಕೂ ಐಸಿಸಿ ಹೆಸರುಗಳನ್ನು ಸೂಚಿಸಿದೆ.
ಪುರುಷರ ವಿಭಾಗದ ಮಾರ್ಚ್ ತಿಂಗಳ ಆಟಗಾರ ಪ್ರಶಸ್ತಿಗೆ ಅಫ್ಘಾನಿಸ್ತಾನದ ಸ್ಪಿನ್ನರ್ ರಶೀದ್ ಖಾನ್, ಭಾರತದ ಭುವನೇಶ್ವರ್ ಕುಮಾರ್ ಮತ್ತು ಜಿಂಬಾಬ್ವೆಯ ಸೀನ್ ವಿಲಿಯಮ್ಸನ್ ಹೆಸರುಗಳನ್ನು ಐಸಿಸಿ ಸೂಚಿಸಿದೆ. ಮಹಿಳಾ ವಿಭಾಗದಲ್ಲಿ ಭಾರತದ ರಾಜೇಶ್ವರಿ ಗಾಯಕ್ವಾಡ್, ದಕ್ಷಿಣ ಆಫ್ರಿಕಾದ ಲಿಜೆಲ್ ಲೀ, ಭಾರತದ ಪೂನಮ್ ರಾವತ್ ಹೆಸರಿಸಲ್ಪಟ್ಟಿದ್ದಾರೆ.
ಕ್ರಿಕೆಟ್ ಅಭಿಮಾನಿಗಳಿನ್ನು www.icc-cricket.comಗೆ ಹೋಗಿ, ಮಾರ್ಚ್ ತಿಂಗಳ ತಮ್ಮ ನೆಚ್ಚಿನ ಆಟಗಾರ ಅಥವಾ ಆಟಗಾರ್ತಿಗೆ ಮತದಾನ ಮಾಡಬಹುದಾಗಿದೆ. ನಾಮನಿರ್ದೇಶಿತರಲ್ಲಿ ರಶೀದ್ ಜಿಂಬಾಬ್ವೆ ವಿರುದ್ಧದ ದ್ವಿತೀಯ ಟೆಸ್ಟ್‌ನಲ್ಲಿ ಒಟ್ಟು 11 ವಿಕೆಟ್ ಪಡೆದಿದ್ದರು. ರಶೀದ್ ಬೌಲಿಂಗ್ ನೆರವಿನಿಂದ ಅಫ್ಘಾನ್ ತಂಡ ಪಂದ್ಯದಲ್ಲಿ ಜಯ ದಾಖಲಿಸಿತ್ತು.
ಇನ್ನು ಇಂಗ್ಲೆಂಡ್ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಆಡಿದ್ದ ವೇಗಿ ಭುವನೇಶ್ವರ್ ಕುಮಾರ್, 4.65. ಎಕಾನಮಿಯಂತೆ 6 ವಿಕೆಟ್ ಉರುಳಿಸಿ ತಂಡಕ್ಕೆ ನೆರವಾಗಿದ್ದರು. ಅಂದ್ಹಾಗೆ ಪುರುಷರ ವಿಭಾಗದಲ್ಲಿ ಹೆಸರಿಸಲ್ಪಟ್ಟಿರುವ ಆಟಗಾರರಲ್ಲಿ ಭುವನೇಶ್ವರ್, ರಶೀದ್ ಖಾನ್ ಸದ್ಯ 14ನೇ ಆವೃತ್ತಿಯ ಐಪಿಎಲ್ ನಲ್ಲಿ ಬ್ಯುಸಿಯಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications