For Quick Alerts
ALLOW NOTIFICATIONS  
For Daily Alerts
 

ಐಸಿಸಿ ತಿಂಗಳ ಪ್ರಶಸ್ತಗೆ 3 ಆಟಗಾರರ ನಾಮನಿರ್ದೇಶನ: ಭಾರತೀಯ ಪ್ಲೇಯರ್ಸ್‌ಗೆ ಇಲ್ಲ ಸ್ಥಾನ

ಟಿ20 ವಿಶ್ವಕಪ್‌ ಮುಗಿದಿದೆ. ಹಲವು ಆಟಗಾರರು ತಮ್ಮ ತಮ್ಮ ತವರಿನತ್ತ ಮುಖಮಾಡಿದ್ದಾರೆ. ಇನ್ನು ಕೆಲವರು ಐಪಿಎಲ್‌ನಲ್ಲಿ ಆಡಲು ಸಜ್ಜಾಗುತ್ತಿದ್ದಾರೆ. ಈ ನಡುವೆ ಐಸಿಸಿ ಮತ್ತೊಂದು ಘೋಷಣೆ ಮಾಡಿದೆ. ಫೆಬ್ರವರಿ ತಿಂಗಳ ಆಟಗಾರ ಪ್ರಶಸ್ತಿಗೆ ನಾಮನಿರ್ದೇಶನವನ್ನು ಮಾಡಿದ್ದು, ಈ ಪಟ್ಟಿಯಲ್ಲಿ ಭಾರತೀಯ ಆಟಗರರಿಗೆ ಸ್ಥಾನ ಇಲ್ಲ.

ತಿಂಗಳು ಆಟಗಾರ ಪ್ರಶಸ್ತಿಗೆ ಮೂವರು ಆಟಗಾರರನ್ನು ಐಸಿಸಿ ನಾಮ ನಿರ್ದೇಶನ ಮಾಡಿದೆ. ಇದರಲ್ಲಿ ಪಾಕ್‌, ಯುಎಸ್‌ಎ, ಇಂಗ್ಲೆಂಡ್ ತಂಡದ ಪ್ಲೇಯರ್ ಇದ್ದಾರೆ. ಈ ಮೂವರಲ್ಲಿ ಈ ಪ್ರಶಸ್ತಿ ಯಾರ ಪಾಲಾಗಿದೆ ಎಂದು ಐಸಿಸಿ ಕೆಲವೇ ದಿನಗಳಲ್ಲಿ ಘೋಷಿಸಲಿದೆ.

ICC Player of the Month

ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡದ ಆರಂಭಿಕ ಆಟಗಾರ ಸಾಹಿಬ್‌ಜಾದ ಫರ್ಹಾನ್‌ ಅವರು ಐಸಿಸಿ ಫೆಬ್ರವರಿ ತಿಂಗಳ ಆಟಗಾರ ಪಟ್ಟಿಯಲ್ಲಿ ನಾಮ ನಿರ್ದೇಶನಗೊಂಡಿದ್ದಾರೆ. ಪಾಕ್‌ ಸೂಪರ್ ಸ್ಟಾರ್ ಆಟಗಾರ ಟಿ20 ವಿಶ್ವಕಪ್‌ನಲ್ಲಿ ಅಬ್ಬರದ ಪ್ರದರ್ಶನ ನೀಡಿದ್ದಾರೆ. ಅಲ್ಲದೆ ಒಂದೇ ಆವೃತ್ತಿಯ ಟಿ20 ವಿಶ್ವಕಪ್‌ನಲ್ಲಿ 2 ತತಕ ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡಿದ್ದಾರೆ. ಇವರು ಟೂರ್ನಿಯಲ್ಲಿ ಗರಿಷ್ಠ ರನ್‌ ಕಲೆ ಹಾಕಿದ ಬ್ಯಾಟರ್‌. ಇವರು ಈ ವಿಶ್ವಕಪ್‌ನಲ್ಲಿ 319 ರನ್‌ ಸಿಡಿಸಿದ್ದಾರೆ.ಇವರು ನಮೀಬಿಯಾ ಹಾಗೂ ಶ್ರೀಲಂಕಾ ವಿರುದ್ಧ ಶತಕ ಬಾರಿಸಿ ಅಬ್ಬರಿಸಿದ್ದರು. ಪರಿಣಾಮ ಅವರನ್ನು ಈ ಪ್ರಶಸ್ತಿಗೆ ನಾಮ ನಿರ್ದೇಶನ ಮಾಡಲಾಗಿದೆ.

ವಿಲ್ ಜಾಕ್ಸ್‌

ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಗೆ ವಿಲ್ ಜಾಕ್ಸ್‌ ಅವರ ಹೆಸರನ್ನು ಸಹ ನಾಮನಿರ್ದೇಶನ ಮಾಡಿದೆ. ಈ ಟೂರ್ನಿಯಲ್ಲಿ ಇಂಗ್ಲೆಂಡ್‌ ಸೆಮಿಫೈನಲ್‌ ಹಂತ ತಲುಪುವಲ್ಲಿ ವಿಲ್ ಜಾಕ್ಸ್ ಅವರ ಕೊಡುಗೆ ಅಪಾರ. ಇವರು ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಮಿಂಚು ಹರಿಸಿದ್ದ ಪ್ಲೇಯರ್. ಟೂರ್ನಿಯಲ್ಲಿ ಜಾಕ್ಸ್‌ 194 ರನ್ ಗಳಿಸಿದ್ದಲ್ಲದೆ 11 ವಿಕೆಟ್‌ಗಳನ್ನು ಸಹ ಪಡೆದಿದ್ದಾರೆ. ಬಿಗ್ ಈವೆಂಟ್‌ನಲ್ಲಿ ಇವರಿಗೆ ನಾಲ್ಕು ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಲಭಿಸಿದೆ.

ಶಾಡ್ಲಿ ವ್ಯಾನ್

ಯುಎಸ್‌ಎ ಬೌಲರ್ ಶಾಡ್ಲಿ ವ್ಯಾನ್ ಶಾಲ್ಕ್‌ವೈಕ್ ಅವರನ್ನು ಐಸಿಸಿ ನಾಮನಿರ್ದೇಶನ ಮಾಡಿದೆ. ಯುಎಸ್‌ಎ ಎಡಗೈ ವೇಗದ ಬೌಲರ್ ಲೀಗ್‌ ಹಂತದಲ್ಲಿ ಬಿಗುವಿನ ದಾಳಿ ನಡೆಸಿ 13 ವಿಕೆಟ್‌ ಕಬಳಿಸಿದ್ದರು. ಇವರು ಮೊದಲ ಪಂದ್ಯದಲ್ಲಿ ಭಾರತದ ವಿರುದ್ಧ 4 ವಿಕೆಟ್‌ ಕಬಳಿಸಿದ್ದರು. ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಯಾರು ಗೆಲ್ಲುತ್ತಾರೆ ಎಂಬ ಪ್ರಶ್ನೆಗಳು ಉದ್ಭವಿಸಿವೆ.

ಐಸಿಸಿ ನೀಡುವ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಭಾರತದ ಯಾವೊಬ್ಬ ಪ್ಲೇಯರ್ ಸ್ಥಾನ ಪಡೆಯದೇ ಇರುವುದು ವಿಶೇಷ. ಆರಂಭಿಕ ಪಂದ್ಯಗಳಲ್ಲಿ ಇಶಾನ್‌ ಕಿಶನ್‌, ಹಾರ್ದಿಕ್ ಪಾಂಡ್ಯ ಸ್ಥಿರ ಪ್ರದರ್ಶನ ನೀಡಿದ್ದರು. ಆದರೂ ಟೀಮ್ ಇಂಡಿಯಾ ಆಟಗಾರರಿಗೆ ಈ ಪಟ್ಟಿಯಲ್ಲಿ ಸ್ಥಾನ ನೀಡಲಾಗಿಲ್ಲ.

Story first published: Monday, March 16, 2026, 20:24 [IST]
Other articles published on Mar 16, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+