ಪುರುಷರ ಕ್ರಿಕೆಟ್ ವರ್ಲ್ಡ್‌ಕಪ್ ಚಾಲೆಂಜ್ ಲೀಗ್ ಎ ಮುಂದೂಡಿದ ಐಸಿಸಿ

ಕೌಲಾಲಂಪುರ್: ಐಸಿಸಿ ಪುರುಷರ ಕ್ರಿಕೆಟ್ ವರ್ಲ್ಡ್‌ಕಪ್ ಚಾಲೆಂಜ್ ಲೀಗ್ ಎ ಟೂರ್ನಿಯನ್ನು ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮುಂದೂಡಿದೆ. ಕೊರೊನಾವೈರಸ್ ಕಾರಣ ಉದ್ದೇಶಿತ ಕ್ರಿಕೆಟ್ ಟೂರ್ನಿ ಮುಂದೂಡಿರುವುದಾಗಿ ಐಸಿಸಿ ಮಂಗಳವಾರ (ಆಗಸ್ಟ್ 25) ತಿಳಿಸಿದೆ.
ಐಸಿಸಿ ಪುರುಷರ ವಿಶ್ವಕಪ್ 2023ಕ್ಕೆ ಅರ್ಹ ತಂಡವನ್ನು ಹೆಕ್ಕುವ ಸಲುವಾಗಿ ನಡೆಯಲಿದ್ದ ಮೂರು ಚಾಲೆಂಜ್ ಲೀಗ್ ಎ' ಸ್ಪರ್ಧೆಗಳಲ್ಲಿ ಎರಡನೆಯದನ್ನು ಮಲೇಷ್ಯಾದಲ್ಲಿ ಸೆಪ್ಟೆಂಬರ್ 30ರಿಂದ ಅಕ್ಟೋಬರ್ 10ರ ವರೆಗೆ ನಡೆಸಲು ನಿರ್ಧರಿಸಲಾಗಿತ್ತು. ಈ ಟೂರ್ನಿ ಈಗ ಮುಂದೂಡಲ್ಪಟ್ಟಿದೆ.
ಕೆನಡಾ, ಡೆನ್ಮಾರ್ಕ್, ಮಲೇಷ್ಯಾ, ಕತಾರ್, ಸಿಂಗಾಪೂರ್, ವನವಾಟು ಈ ತಂಡಗಳು 15 ಲಿಸ್ಟ್ ಎ ಪಂದ್ಯಗಳನ್ನು ಆಡುವುದರಲ್ಲಿದ್ದವು. ಪಂದ್ಯಗಳಲ್ಲಿ ಹೆಚ್ಚು ಅಂಕ ಸಂಪಾದಿಸಿ ಲೀಗ್ ಚಾಲೆಂಜ್ ಎ ಪಾಯಿಂಟ್ ಟೇಬಲ್‌ನಲ್ಲಿ ಅಗ್ರ ಸ್ಥಾನ ಪಡೆಯಲು ಪೈಪೋಟಿ ನಡೆಸುವುದರಿಲ್ಲಿದ್ದವು.
ಸದ್ಯ ಪಾಯಿಂಟ್ ಟೇಬಲ್‌ನಲ್ಲಿ ಕೆನಡಾ ಅಗ್ರಸ್ಥಾನದಲ್ಲಿದೆ. ನೆಟ್ ರನ್ ರೇಟ್ ಆಧಾರದಲ್ಲಿ ಕೆನಡಾ ತಂಡ ಸಿಂಗಾಪೂರ್‌ಗಿಂತ ಉತ್ತಮ ಸ್ಥಾನ ಪಡೆದುಕೊಂಡಿದೆ. ಸಿಂಗಾಪೂರ್ ಮತ್ತು ಕೆನಡಾ ಎರಡರ ಖಾತೆಯಲ್ಲೂ 8 ಅಂಕಗಳಿವೆ. ಇದರಲ್ಲಿ ಅಗ್ರಸ್ಥಾನದಲ್ಲಿ ಟೂರ್ನಿ ಮುಗಿಸುವ ತಂಡ ಕ್ರಿಕೆಟ್ ವಿಶ್ವಕಪ್ ಕ್ವಾಲಿಫೈಯರ್ ಪ್ಲೇ ಆಫ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications