Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್‌ ದಾರಿಯಿನ್ನು ಸುಲಭ, ಐಸಿಸಿ ಟಿ20 ವಿಶ್ವಕಪ್ ಮುಂದೂಡಿಕೆ

ICC postpones T20 World Cup due to Covid-19 pandemic

ಬೆಂಗಳೂರು, ಜುಲೈ 20: ಈ ವರ್ಷ ನಡೆಸಲು ಉದ್ದೇಶಿಸಲಾಗಿದ್ದ ಪ್ರತಿಷ್ಠಿತ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಪುರುಷರ ಟಿ20 ವಿಶ್ವಕಪ್ ಟೂರ್ನಿ ಮುಂದೂಡಲ್ಪಟ್ಟಿದೆ. ಕೊರೊನಾವೈರಸ್ ಸೋಂಕಿನ ಕಾರಣದಿಂದಾಗಿ ಟಿ20 ವಿಶ್ವ ಮುಂದಕ್ಕೆ ಹೋಗಿದೆ.

2020ರ ಟಿ20 ವಿಶ್ವಕಪ್ ಟೂರ್ನಿಯನ್ನು ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್ 18ರಿಂದ ನವೆಂಬರ್ 15ರ ವರೆಗೆ ನಡೆಸಲು ವೇಳಾಪಟ್ಟಿ ನಿಗದಿಯಾಗಿತ್ತು. ಆದರೆ ಕೋವಿಡ್-19 ಆತಂಕ ಹೆಚ್ಚುತ್ತಲೇ ಇರುವುದರಿಂದ ಟೂರ್ನಿಯನ್ನು ಮುಂದೂಡುವ ನಿರ್ಧಾರವನ್ನು ಐಸಿಸಿ ಬೋರ್ಡ್ ಸೋಮವಾರ (ಜುಲೈ 20) ಪ್ರಕಟಿಸಿದೆ.

ಟಿ20 ವಿಶ್ವಕಪ್ ಅನ್ನು ಈ ವರ್ಷ ನಡೆಸಬೇಕೋ ಬೇಡವೋ ಎಂಬ ಬಗ್ಗೆ ಐಸಿಸಿ ಅಂತಿಮ ನಿರ್ಧಾರವನ್ನು ಪ್ರಕಟಿಸಿರಲಿಲ್ಲ. ಇದು ಇಂಡಿಯನ್ ಪ್ರೀಮಿಯರ್ ಲೀಗ್‌ ನಡೆಸುವ ಬಗ್ಗೆ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾಕ್ಕೆ ತಲೆನೋವು ತಂದಿತ್ತು. ಯಾಕೆಂದರೆ ಟಿ20 ವಿಶ್ವಕಪ್ ವೇಳಾಪಟ್ಟಿಯಂದೇ ಐಪಿಎಲ್ ನಡೆಸಲು ಬಿಸಿಸಿಐ ಯೋಚಿಸಿತ್ತು. ಈಗ ಐಪಿಎಲ್ ಆಯೋಜನೆಯೆಡೆಗಿನ ದಾರಿ ಸುಲಭವೆನಿಸಿದೆ.

ಹಾಗಾದರೆ ಮುಂದೂಡಲ್ಪಟ್ಟ ಟಿ20 ವಿಶ್ವಕಪ್ ನಡೆಯೋದು ಯಾವಾಗ?
ಕೊರೊನಾವೈರಸ್‌ನಿಂದಾಗಿ ಮುಂದೂಡಲ್ಪಟ್ಟಿರುವ ಟಿ20ಐ ವಿಶ್ವಕಪ್‌ ಅನ್ನು ಮುಂದಿನ ವರ್ಷ ನಡೆಸಲು ನಿರ್ಧರಿಸಲಾಗಿದೆ. ಹೀಗಾಗಿ ಮುಂದಿನ ಮೂರು ವರ್ಷಗಳಲ್ಲಿ ಮೂರು ವಿಶ್ವಕಪ್ ಟೂರ್ನಿಗಳನ್ನು ನಾವು ನೋಡುವ ಸಾಧ್ಯತೆಯಿದೆ. ಆ ಮೂರು ಪ್ರತಿಷ್ಠಿತ ಟೂರ್ನಿಗಳೆಂದರೆ.
A. 2021ರ ಐಸಿಸಿ ಪುರುಷರ ಟಿ20 ವಿಶ್ವಕಪ್ ಟೂರ್ನಿ 2021ರ ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿದೆ. ಫೈನಲ್ ಪಂದ್ಯ 2021ರ ನವೆಂಬರ್ 14ರಂದು ನಡೆಯಲಿದೆ.
B. 2022ರ ಐಸಿಸಿ ಪುರುಷರ ಟಿ20 ವಿಶ್ವಕಪ್ ಟೂರ್ನಿ 2022ರ ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿದೆ. ಫೈನಲ್ ಪಂದ್ಯ 2022ರ ನವೆಂಬರ್ 13ರಂದು ನಡೆಯಲಿದೆ.
C. ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023ರ ಅಕ್ಟೋಬರ್-ನವೆಂಬರ್‌ನಲ್ಲಿ ಭಾರತದಲ್ಲಿ ನಡೆಯಲಿದೆ. ಫೈನಲ್ ಪಂದ್ಯ 2023ರ ನವೆಂಬರ್ 26ರಂದು ನಡೆಯಲಿದೆ.

Story first published: Tuesday, July 21, 2020, 9:38 [IST]
Other articles published on Jul 21, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+