2022ರಿಂದ 2023ಕ್ಕೆ ಮಹಿಳೆಯರ ಟಿ20 ವಿಶ್ವಕಪ್ ಮುಂದೂಡಿದ ಐಸಿಸಿ

ದುಬೈ: ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿದ್ದ ಮಹಿಳೆಯರ ಟಿ20 ವಿಶ್ವಕಪ್ ಅನ್ನು ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಗುರುವಾರ ಮುಂದೂಡಿದೆ. ದೊಡ್ಡ ಟೂರ್ನಿಯ ಟಿಕೆಟ್‌ಗೆ ತೊಂದರೆಯಾಗುವುದನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರತಿಷ್ಠಿತ ಟೂರ್ನಿ ಮುಂದೂಡಲಾಗಿದೆ ಎನ್ನಲಾಗಿದೆ.
2022ರಲ್ಲಿ ನಡೆಯಬೇಕಿದ್ದ ಮಹಿಳೆಯರ ಟಿ20 ವಿಶ್ವಕಪ್ ಅನ್ನು ಮೂರು ತಿಂಗಳು ಮುಂದಕ್ಕೆ ಅಂದರೆ ಫೆಬ್ರವರಿ 2023ಕ್ಕೆ ಮುಂದೂಡಲಾಗಿದೆ. 2022ರ ನವೆಂಬರ್‌ನಲ್ಲಿ ನಡೆಯಬೇಕಿದ್ದ ವಿಶ್ವಕಪ್, 2023ರ ಫೆಬ್ರವರಿಗೆ ಮುಂದೂಡಲ್ಪಟ್ಟಿದೆ.
ಕೊರೊನಾವೈರಸ್ ಪಿಡುಗಿನ ಕಾರಣ ಐಸಿಸಿಯು ನ್ಯೂಜಿಲೆಂಡ್‌ನಲ್ಲಿ 2021ಕ್ಕೆ ನಡೆಯಬೇಕಿದ್ದ ಮಹಿಳೆಯರ ಏಕದಿನ ಕ್ರಿಕೆಟ್ ವಿಶ್ವಕಪ್ ಅನ್ನು 2022ಕ್ಕೆ ಮುಂದೂಡಿತ್ತು. ಅಂದ್ಹಾಗೆ, ಮಹಿಳಾ ಟಿ20 ಟೂರ್ನಿ 2022ಕ್ಕೆ ಬರ್ಮಿಂಗ್‌ಹ್ಯಾಮ್ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಚೊಚ್ಚಲ ಬಾರಿಗೆ ನಡೆಯುವುದರಲ್ಲಿದೆ.
'ಐಸಿಸಿ ಮಹಿಳೆಯರ ಟಿ20 ವಿಶ್ವಕಪ್ ಅನ್ನು 2022ರಿಂದ 9-26ಕ್ಕೆ ಫೆಬ್ರವರಿ 2023ಕ್ಕೆ ಮುಂದೂಡಿರುವುದನ್ನು ಕ್ರಿಕೆಟ್ ಬೋರ್ಡ್ ಖಾತರಿಪಡಿಸಿದೆ,' ಎಂದು ಐಸಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications