ಟಿ20 ವಿಶ್ವಕಪ್ ಬಹುಮಾನ ಮೊತ್ತ ಘೋಷಣೆ: ಚಾಂಪಿಯನ್ ಭಾರತದ 24.25 ಕೋಟಿ ರೂ
ಟೀಮ್ ಇಂಡಿಯಾ 96 ರನ್‌ಗಳಿಂದ ನ್ಯೂಜಿಲೆಂಡ್ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು. ಈ ಚಾಂಪಿಯನ್ ತಂಡಕ್ಕೆ ಸಿಕ್ಕ ಬಹುಮಾನ ಮೊತ್ತ ಎಷ್ಟು ಎಂಬ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಆದರೆ ಬುಧವಾರ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಈ ಬಗ್ಗೆ ಉತ್ತರ ನೀಡಿದೆ.
2026 ರ ಐಸಿಸಿ ಪುರುಷರ ಟಿ 20 ವಿಶ್ವಕಪ್ ಯಶಸ್ವಿಯಾಗಿ ಮುಕ್ತಾಯಗೊಂಡ ನಂತರ, ಐಸಿಸಿ ಟೂರ್ನಮೆಂಟ್‌ನ ಒಟ್ಟು ಬಹುಮಾನದ ಮೊತ್ತವಾದ $11.25 ಮಿಲಿಯನ್ ಡಾಲರ್ ಮೊತ್ತವನ್ನು ಘೋಷಿಸಿದೆ. ಇದು ಕಳೆದ ಬಾರಿಗೆ ಹೋಲಿಸಿದರೆ ದಾಖಲೆಯ ಪ್ರಮಾಣದ ಹೆಚ್ಚಳವಾಗಿದೆ ಎಂದು ಐಸಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಟೂರ್ನಿಯ ಫೈನಲ್ ಪಂದ್ಯವನ್ನು ಗೆದ್ದ ಭಾರತ ತಂಡ ಸುಮಾರು 24.25 ಕೋಟಿ ರೂ. ಪಡೆಯಲಿದೆ.

ಅಹಮದಾಬಾದ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ನೀರಸ ಪ್ರದರ್ಶನ ನೀಡಿದ ನ್ಯೂಜಿಲೆಂಡ್ ವಿಶ್ವಕಪ್ ಸೋತರೂ ಆಟಗಾರರ ಜೇಬು ಭರ್ತಿಯಾಗಿದೆ. ನ್ಯೂಜಿಲೆಂಡ್ ಸುಮಾರು 13.08 ಕೋಟಿ ರೂ. ಪಡೆದಿದೆ.
ಫೈನಲ್‌ನಲ್ಲಿ ಸೋತ ನ್ಯೂಜಿಲೆಂಡ್‌ಗೆ ಸಿಕ್ಕ ಹಣವೆಷ್ಟು?
ನ್ಯೂಜಿಲೆಂಡ್ ವಿರುದ್ಧ ಸೆಮಿಫೈನಲ್ ಪಂದ್ಯದಲ್ಲಿ ಸೋತ ದಕ್ಷಿಣ ಆಫ್ರಿಕಾ ತಂಡ 9.24 ಕೋಟಿ ರೂ. ಪಡೆಯಲಿದೆ. ಇನ್ನು ಭಾರತದ ವಿರುದ್ಧದ ಉಪಾಂತ್ಯದಲ್ಲಿ ಸೋತ ಇಂಗ್ಲೆಂಡ್ ತಂಡ 8.96 ಕೋಟಿ ರೂ. ಪಡೆದಿದೆ. ಸೂಪರ್ 8 ಹಂತದಲ್ಲಿ ಟೂರ್ನಿಗೆ ಗುಡ್ ಬೈ ಹೇಳಿದ ಪಾಕ್ 4.80 ಕೋಟಿ ರೂ. ಪಡೆಯಲಿದೆ. ಸೂಪರ್ 8 ಹಂತದಲ್ಲೇ ಟೂರ್ನಿಯಿಂದ ಹೊರ ನಡೆದ ಜಿಂಬಾಬ್ವೆ ಹಾಗೂ ಶ್ರೀಲಂಕಾ ತಂಡಗಳಿಗೂ ಸುಮಾರ 4 ಕೋಟಿ ರೂ. ಹಣ ಸಿಗಲಿದೆ.
ಲೀಗ್ ಹಂತದಲ್ಲಿ ಹೊರ ನಡೆದ ಆಸ್ಟ್ರೇಲಿಯಾ, ಯುಎಸ್‌ಎ 309,808 ಡಾಲರ್ ಹಣವನ್ನು ಪಡೆಯಲಿವೆ. ಸ್ಕಾಟ್ಲೆಂಡ್ 278,654 ಡಾಲರ್, ಇಟಲಿ, ನೆದರ್ಲ್ಯಾಂಡ್ಸ್, ಯುಎಇ, ನೇಪಾಳ ತಂಡಗಳು 256,154 ಡಾಲರ್, ಕೆನಡಾ, ನಮೀಬಿಯಾ, ಓಮನ್ ತಂಡಗಳು 225,000 ಡಾಲರ್ ಪಡೆಯಲಿವೆ.
ಟಿ20 ವಿಶ್ವಕಪ್‌ನಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ ಭಾರತ ತಂಡಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣಾ ಮಂಡಳಿ (ಬಿಸಿಸಿಐ) ಬಹುಮಾನ ಘೋಷಿಸಿದೆ. 131 ಕೋಟಿ ರೂ. ನಗದು ಬಹುಮಾನವನ್ನು ಘೋಷಿಸಿದೆ. ಅಲ್ಲದೆ ಭವಿಷ್ಯದಲ್ಲಿ ಆಟಗಾರರಿಗೆ ನಿರಂತರ ಯಶಸ್ಸನ್ನು ಹಾರೈಸುತ್ತದೆ" ಎಂದು ಬಿಸಿಸಿಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications