ICC Ranking: ಮಹಿಳಾ ಏಕದಿನ ಶ್ರೇಯಾಂಕದಲ್ಲಿ 4ನೇ ಸ್ಥಾನಕ್ಕೆ ಜಿಗಿದ ಸ್ಮೃತಿ ಮಂಧಾನ
ಭಾರತ ಮಹಿಳಾ ಕ್ರಿಕೆಟ್ ತಂಡದ ಉಪನಾಯಕಿ ಹಾಗೂ ಆರಂಭಿಕ ಬ್ಯಾಟರ್ ಸ್ಮೃತಿ ಮಂಧಾನ ಅವರು ಇತ್ತೀಚಿನ ಐಸಿಸಿ ಮಹಿಳಾ ಏಕದಿನ ಬ್ಯಾಟರ್‌ಗಳ ಶ್ರೇಯಾಂಕದ ನವೀಕರಣದಲ್ಲಿ 2 ಸ್ಥಾನಗಳ ಮೇಲೇರಿ 4ನೇ ಸ್ಥಾನಕ್ಕೆ ಜಿಗಿದಿದ್ದಾರೆ.
ಇಂಗ್ಲೆಂಡ್‌ನ ನ್ಯಾಟ್ ಸಿವರ್-ಬ್ರಂಟ್, ಶ್ರೀಲಂಕಾದ ಚಾಮರಿ ಅಥಾಪತ್ತು ಮತ್ತು ಆಸ್ಟ್ರೇಲಿಯಾದ ಬೆತ್ ಮೂನಿ ಅವರು ಮಹಿಳಾ ಏಕದಿನ ಶ್ರೇಯಾಂಕದಲ್ಲಿ ಅಗ್ರ 3 ಬ್ಯಾಟರ್‌ಗಳಾಗಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದ ನಂತರ ಐಸಿಸಿ ಶ್ರೇಯಾಂಕದಲ್ಲಿ ಐದನೇ ಸ್ಥಾನಕ್ಕೆ ಕುಸಿದ ದಕ್ಷಿಣ ಆಫ್ರಿಕಾ ಮಹಿಳಾ ಆಟಗಾರ್ತಿ ಲಾರಾ ವೊಲ್ವಾರ್ಡ್ ಬದಲಿಗೆ ಸ್ಮೃತಿ ಮಂಧಾನಾ ನಾಲ್ಕನೇ ಸ್ಥಾನ ಪಡೆದಿದ್ದಾರೆ.
ಅಲಿಸ್ಸಾ ಹೀಲಿ ನಾಯಕತ್ವದ ಆಸ್ಟ್ರೇಲಿಯಾ ವನಿತಾ ತಂಡದ ವಿರುದ್ಧ ಬ್ಯಾಟಿಂಗ್ ಆರಂಭಿಸಿದ ಲಾರಾ ವೊಲ್ವಾರ್ಡ್ 2.33ರ ಸರಾಸರಿಯಲ್ಲಿ ಕೇವಲ 7 ರನ್ ಗಳಿಸಿದರು.
ಆಶ್ಲೇಗ್ ಗಾರ್ಡ್ನರ್ 3 ಸ್ಥಾನ ಕುಸಿದು 22ನೇ ಸ್ಥಾನ ತಲುಪಿದರೆ, ಫೋಬೆ ಲಿಚ್ಫೀಲ್ಡ್ ಕೂಡ 2 ಸ್ಥಾನ ಕುಸಿತ ಕಂಡಿದ್ದಾರೆ. ಆಸೀಸ್‌ನ ತಹ್ಲಿಯಾ ಮೆಕ್‌ಗ್ರಾತ್ ಬ್ಯಾಟಿಂಗ್ ಶ್ರೇಯಾಂಕದಲ್ಲಿ 4 ಸ್ಥಾನಗಳ ಜಿಗಿತ ಕಂಡು 30ನೇ ಸ್ಥಾನ ತಲುಪಿದ್ದಾರೆ.
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ವಿರುದ್ಧದ ದ್ವಿಪಕ್ಷೀಯ ಸರಣಿಯಲ್ಲಿ 34 ಮತ್ತು 29 ರನ್‌ಗಳೊಂದಿಗೆ 31.50ರ ಸರಾಸರಿಯಲ್ಲಿ 63 ರನ್ ಗಳಿಸಿದ ಸ್ಮೃತಿ ಮಂಧಾನ ಕೊನೆಯ ಬಾರಿಗೆ ಏಕದಿನ ಪಂದ್ಯದಲ್ಲಿ ಆಡಿದ್ದರು.
ಸ್ಮೃತಿ ಮಂಧಾನ ಇದೀಗ ಮಹಿಳಾ ಪ್ರೀಮಿಯರ್ ಲೀಗ್ (WPL) 2024ರಲ್ಲಿ ಭಾಗವಹಿಸಲು ಸಿದ್ಧರಾಗಿದ್ದಾರೆ. ಅಲ್ಲಿ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ಮುನ್ನಡೆಸಲಿದ್ದಾರೆ.
8 ಸ್ಥಾನಗಳ ಮೇಲೇರಿದ ಕಿಮ್ ಗಾರ್ತ್
ಮಹಿಳಾ ಏಕದಿನ ಕ್ರಿಕೆಟ್‌ನ ಆಲ್‌ರೌಂಡರ್‌ಗಳ ಐಸಿಸಿ ಶ್ರೇಯಾಂಕದಲ್ಲಿ ದಕ್ಷಿಣ ಆಫ್ರಿಕಾದ ಎಲಿಜ್-ಮಾರಿ ಮಾರ್ಕ್ಸ್ 34 ಸ್ಥಾನಗಳನ್ನು ಏರಿಕೆ ಕಂಡು 75ನೇ ಸ್ಥಾನ ತಲುಪಿದ್ದಾರೆ. ಇನ್ನು ಆಸ್ಟ್ರೇಲಿಯಾದ ಕಿಮ್ ಗಾರ್ತ್ ಕೂಡ ಶ್ರೇಯಾಂಕದಲ್ಲಿ 8 ಸ್ಥಾನಗಳ ಏರಿಕೆ ಕಂಡು 36ನೇ ಸ್ಥಾನಕ್ಕೆ ಏರಿದ್ದಾರೆ.
ಅಲಾನಾ ಕಿಂಗ್ ಮತ್ತು ಕಿಮ್ ಗಾರ್ತ್ ಸಹ ಕ್ರಮವಾಗಿ 4 ಮತ್ತು 5 ಸ್ಥಾನಗಳ ಏರಿಕೆ ಕಂಡು 19 ಮತ್ತು 21ನೇ ಸ್ಥಾನ ತಲುಪಿದ್ದಾರೆ. ದಕ್ಷಿಣ ಆಫ್ರಿಕಾದ ಮರಿಜಾನ್ನೆ ಕಾಪ್ ವಿಶ್ವ ನಂ.1 ಆಲ್‌ರೌಂಡರ್ ಆಗಿ ಉಳಿದಿದ್ದಾರೆ.
ಭಾರತದ ದೀಪ್ತಿ ಶರ್ಮಾ ಆಲ್‌ರೌಂಡರ್ ಶ್ರೇಯಾಂಕದಲ್ಲಿ 5ನೇ ಸ್ಥಾನಕ್ಕೇರಿದ್ದಾರೆ. ಶ್ಲೇಗ್ ಗಾರ್ಡ್ನರ್ 4 ಸ್ಥಾನ ಕಳೆದುಕೊಂಡು 6ನೇ ಸ್ಥಾನಕ್ಕೆ ಕುಸಿದರು.
ಈ ಮಧ್ಯೆ ಏಕದಿನ ಬೌಲಿಂಗ್ ಶ್ರೇಯಾಂಕದಲ್ಲಿ ಮರಿಜಾನ್ನೆ ಕಾಪ್ 7 ಸ್ಥಾನಗಳನ್ನು ಜಿಗಿದು 2ನೇ ಸ್ಥಾನಕ್ಕೆ ತಲುಪಿದ್ದಾರೆ ಮತ್ತು ಇಂಗ್ಲೆಂಡ್‌ನ ಸೋಫಿ ಎಕ್ಲೆಸ್ಟೋನ್‌ಗಿಂತ ಹಿಂದಿದ್ದಾರೆ. ಕಿಮ್ ಗಾರ್ತ್ ಶ್ರೇಯಾಂಕದಲ್ಲಿ 10 ಸ್ಥಾನಗಳನ್ನು ಗಳಿಸಿ 29ನೇ ಸ್ಥಾನ ತಲುಪಿದ್ದಾರೆ.
ಭಾರತದ ದೀಪ್ತಿ ಶರ್ಮಾ ಬೌಲಿಂಗ್ ಶ್ರೇಯಾಂಕದಲ್ಲಿ 1 ಸ್ಥಾನ ಕಳೆದುಕೊಂಡ ನಂತರ 4ನೇ ಸ್ಥಾನಕ್ಕೆ ಕುಸಿದಿದ್ದಾರೆ. ಕೇಟ್ ಕ್ರಾಸ್ ಮತ್ತು ಹೇಲಿ ಮ್ಯಾಥ್ಯೂಸ್ ಕೂಡ 2 ಸ್ಥಾನಗಳ ಏರಿಕೆ ಕಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications