ಅಗ್ರಸ್ಥಾನದೊಂದಿಗೆ ಹೊಸ ವರ್ಷ ಪ್ರವೇಶಿಸಿದ ಬುಮ್ರಾ, ರೋಹಿತ್
2026 ವರ್ಷದ ಆರಂಭದಲ್ಲಿ ಟೀಮ್ ಇಂಡಿಯಾ ಆಟಗಾರರು ಐಸಿಸಿ ಶ್ರೇಯಾಂಕದಲ್ಲಿ ತಮ್ಮ ಅಧಿಪತ್ಯ ಸಾಧಿಸಿದ್ದಾರೆ. ಕಳೆದ ವರ್ಷ ಸ್ಥಿರ ಪ್ರದರ್ಶನ ನೀಡಿದ ಆಟಗಾರರು ಈಗ ಐಸಿಸಿ ಶ್ರೇಯಾಂಕದಲ್ಲಿ ನಂಬರ್ 1 ಸ್ಥಾನದೊಂದಿಗೆ, ಹೊಸ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈ ವರ್ಷ ಅಗ್ರಸ್ಥಾನದೊಂದಿಗೆ ಆರಂಭಿಸಿದ ಆಟಗಾರರಲ್ಲಿ ಭಾರತೀಯ ಸ್ಟಾರ್ ಆಟಗಾರರೂ ಸ್ಥಾನ.
ಟೀಮ್ ಇಂಡಿಯಾದ ಸ್ಟಾರ್ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಟೆಸ್ಟ್ ಶ್ರೇಯಾಂಕದಲ್ಲಿ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ತಮ್ಮ ಯಾರ್ಕರ್ ಹಾಗೂ ವೇಗದ ಮಿಶ್ರಣದಿಂದ ಎದುರಾಳಿಗಳನ್ನು ಕಾಡುವ ಬುಮ್ರಾ, ಐಸಿಸಿ ಶ್ರೇಯಾಂಕದಲ್ಲಿ ನಂಬರ್ 1 ಬೌಲರ್. ಇವರು 879 ರೇಟಿಂಗ್ ಪಾಯಿಂಟ್ ಹೊಂದಿದ್ದಾರೆ.

ಆಷಸ್ ಸರಣಿಯಲ್ಲಿ ಸ್ಥಿರ ಬೌಲಿಂಗ್ ಪ್ರದರ್ಶನ ನೀಡಿರುವ ಆಸ್ಟ್ರೇಲಿಯಾದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ 843 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಪಾಕಿಸ್ತಾನದ ಬೌಲರ್ ನೊಮನ್ ಅಲಿ 843 ಅಂಕಗಳೊಂದಿಗೆ ಮೂರನೇ ಸ್ಥಾನ ಹೊಂದಿದ್ದಾರೆ. ನಾಲ್ಕನೇ ಸ್ಥಾನದಲ್ಲಿ ಪ್ಯಾಟ್ ಕಮಿನ್ಸ್, ಐದನೇ ಸ್ಥಾನದಲ್ಲಿ ಮ್ಯಾಟ್ ಹೆನ್ರಿ ಇದ್ದಾರೆ.
ಟೆಸ್ಟ್ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಭಾರತದ ಯಾವೊಬ್ಬ ಬ್ಯಾಟರ್ ಟಾಪ್ 5ನಲ್ಲಿ ಸ್ಥಾನ ಪಡೆದಿಲ್ಲ. ಇಂಗ್ಲೆಂಡ್ ತಂಡದ ಸ್ಟಾರ್ ಆಟಗಾರ ಜೋ ರೂಟ ಮೊದಲ, ಹ್ಯಾರಿ ಬ್ರೂಕ್ ಎರಡನೇ, ನ್ಯೂಜಿಲೆಂಡ್ ತಂಡದ ಕೇನ್ ವಿಲಿಯಮ್ಸನ್ ಮೂರನೇ ಸ್ಥಾನದಲ್ಲಿದ್ದಾರೆ. ಆಸೀಸ್ ತಂಡದ ಟ್ರಾವಿಸ್ ಹೆಡ್, ಸ್ಟೀವನ್ ಸ್ಮಿತ್ ಕ್ರಮವಾಗಿ ನಾಲ್ಕು ಹಾಗೂ ಐದನೇ ಸ್ಥಾನದಲ್ಲಿದ್ದಾರೆ. ಭಾರತದ ಪರ ಯಶಸ್ವಿ ಜೈಸ್ವಾಲ್ ಅತಿ ಹೆಚ್ಚು ರ್ಯಾಂಕಿಂಗ್ ಹೊಂದಿರುವ ಆಟಗಾರ. ಇವರು 750 ಅಂಕಗಳೊಂದಿಗೆ 8ನೇ ಸ್ಥಾನದಲ್ಲಿದ್ದಾರೆ. ಇನ್ನು ಟೀಮ್ ಇಂಡಿಯಾ ನಾಯಕ ಶುಭಮನ್ ಗಿಲ್ 730 ಅಂಕಗಳೊಂದಿಗೆ 10ನೇ ಸ್ಥಾನ ಹೊಂದಿದ್ದಾರೆ.

ರೋಹಿತ್‌ಗೆ ಅಗ್ರ ಸ್ಥಾನ
ಏಕದಿನ ರ್ಯಾಂಕಿಂಗ್‌ನಲ್ಲಿ ಟೀಮ್ ಇಂಡಿಯಾದ ಭರವಸೆಯ ಆಟಗಾರ ರೋಹಿತ್ ಶರ್ಮಾ ನಂಬರ್ 1 ಸ್ಥಾನ ಪಡೆದಿದ್ದಾರೆ. ಇವರು 781 ಅಂಕಗಳೊಂದಿಗೆ ಅಗ್ರಸ್ಥಾನ ಹೊಂದಿದ್ದಾರೆ. ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಇವರು 773 ಅಂಕಗಳನ್ನು ಕಲೆ ಹಾಕಿದ್ದಾರೆ.
ಏಕದಿನ ಶ್ರೇಯಾಂಕದಲ್ಲಿ ಟಾಪ್ 5 ಬ್ಯಾಟರ್ಸ್
1, ರೋಹಿತ್ ಶರ್ಮಾ, ಭಾರತ
2, ವಿರಾಟ್ ಕೊಹ್ಲಿ, ಭಾರತ
3, ಡೇರಿಲ್ ಮಿಚೆಲ್, ನ್ಯೂಜಿಲೆಂಡ್
4, ಇಬ್ರಾಹಿಂ ಜರ್ದಾನ್, ಅಫ್ಘಾನಿಸ್ತಾನ
5, ಶುಭಮನ್ ಗಿಲ್, ಭಾರತ
ಏಕದಿನ ಬೌಲಿಂಗ್‌ನಲ್ಲಿ ಟೀಮ್ ಇಂಡಿಯಾದ ಪರ ಟಾಪ್ 5ನಲ್ಲಿ ಕಾಣಿಸಿಕೊಂಡ ಆಟಗಾರ ಕುಲ್‌ದೀಪ್ ಯಾದವ್. ಇವರು ಸೀಮಿತ ಓವರ್‌ಗಳ ಪಂದ್ಯಗಳಲ್ಲಿ ಅಮೋಘ ಪ್ರದರ್ಶನ ನೀಡುತ್ತಿದ್ದು, ಇವರ ಶ್ರೇಯಾಂಕದಲ್ಲೂ ಮೂರು ಸ್ಥಾನ ಏರಿಕೆ ಕಂಡಿದ್ದು, ಪ್ರಸ್ತುತ ಬೌಲರ್‌ಗಳ ಪಟ್ಟಿಯಲ್ಲಿ ಇವರು ಮೂರನೇ ಸ್ಥಾನದಲ್ಲಿದ್ದಾರೆ. ಅಫ್ಘಾನಿಸ್ತಾನ ತಂಡದ ಸ್ಪಿನ್ ಬೌಲರ್ ರಶೀದ್ ಖಾನ್ ನಂಬರ್ 1 ಸ್ಥಾನವನ್ನು ಪಡೆದಿದ್ದಾರೆ. ಇನ್ನು ಇಂಗ್ಲೆಂಡ್ ತಂಡದ ಜೋಫ್ರಾ ಆರ್ಚರ್ ಎರಡನೇ ಸ್ಥಾನ ಹೊಂದಿದ್ದಾರೆ.
ಅಭಿಷೇಕ್, ತಿಲಕ್ ಆಟ ಬೊಂಬಾಟ
ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಅಭಿಷೇಕ್ ಶರ್ಮಾ ಪ್ರಸಕ್ತ ವರ್ಷ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಅಬ್ಬರಿಸಿದ್ದಾರೆ. ಮೊದಲ ಎಸೆತದಲ್ಲೇ ಆಕ್ರಮಣಕಾರಿ ಮನೋಭಾವದಿಂದ ಬ್ಯಾಟಿಂಗ್ ಮಾಡುವ ಅಭಿಷೇಕ್ ಶರ್ಮಾ ಟಿ20 ಶ್ರೇಯಾಂಕದ ನಂಬರ್ 1 ಬ್ಯಾಟರ್. ಇವರು 908 ರೇಟಿಂಗ್ ಪಾಯಿಂಟ್ ಹೊಂದಿದ್ದಾರೆ. ಇಂಗ್ಲೆಂಡ್ ತಂಡದ ಫಿಲ್ ಸಾಲ್ಟ್ 849 ರೇಟಿಂಗ್ ಪಾಯಿಂಟ್ ಹೊಂದಿದ್ದಾರೆ. ಟೀಮ್ ಇಂಡಿಯಾದ ಭರವಸೆಯ ಆಟಗಾರ ತಿಲಕ್ ವರ್ಮಾ ಈ ಶ್ರೇಯಾಂಕದಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.
ಟಿ20 ಶ್ರೇಯಾಂಕದಲ್ಲಿ ಟಾಪ್ 5 ಬೌಲರ್ಸ್
1, ವರುಣ್ ಚಕ್ರವರ್ತಿ, ಭಾರತ
2, ಜಾಕೋಬ್ ಡಫ್ಫಿ, ನ್ಯೂಜಿಲೆಂಡ್
3, ರಾಶೀದ್ ಖಾನ್, ಅಫ್ಘಾನಿಸ್ತಾನ
4, ಅಬ್ರಾರ್ ಅಹ್ಮದ್, ಪಾಕಿಸ್ತಾನ
5, ವನಿಂದು ಹಸರಂಗ, ಶ್ರೀಲಂಕಾ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications