ಬೆಂಗಳೂರು, ಡಿ. 08 : ವಿಶ್ವದ ಅಗ್ರಸ್ಥಾನದ ಟೆಸ್ಟ್ ತಂಡವಾದ ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ಸರಣಿ ಗೆಲುವು ದಾಖಲಿಸಿ ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಜಿಗಿದಿದೆ. ಇದರ ಬೆನ್ನಲ್ಲೇ ಸರಣಿ ಶ್ರೇಷ್ಠ ಕಿರೀಟ ಧರಿಸಿದ ಅಶ್ವಿನ್ ಅವರು ಈಗ ವಿಶ್ವದ ನಂ.1 ಆಲ್ ರೌಂಡರ್ ಎಂದು ಐಸಿಸಿ ಮಂಗಳವಾರ ಪ್ರಕಟಿಸಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಶ್ರೇಷ್ಠ ಬ್ಯಾಟ್ಸ್ ಮನ್, ಬೌಲರ್ ಹಾಗೂ ಆಲ್ ರೌಂಡರ್ ಗಳ ಪಟ್ಟಿಯನ್ನು ಪ್ರಕಟಿಸಿದ್ದು, ಆಲ್ ರೌಂಡರ್ ಪಟ್ಟಿಯಲ್ಲಿ ಬಾಂಗ್ಲಾದೇಶದ ಶಕೀಬ್ ಅಲ್ ಹಸನ್ ಅವರನ್ನು ಕೆಳಕ್ಕೆ ದೂಡಿ ಭಾರತದ ಆರ್ ಅಶ್ವಿನ್ ಮೇಲಕ್ಕೆ ಬಂದಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯನ್ನು 3-0 ಅಂತರದಿಂದ ಟೀಂ ಇಂಡಿಯಾ ಗೆದ್ದುಕೊಂಡಿದ್ದರ ತಂಡ ಹಾಗೂ ಕೆಲ ಆಟಗಾರರ ಶ್ರೇಯಾಂಕ ಹೆಚ್ಚಿದೆ. ಅಶ್ವಿನ್ ಅಲ್ಲದೆ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಅಜಿಂಕ್ಯ ರಹಾನೆ, ರವೀಂದ್ರ ಜಡೇಜ ಅವರು ಇಲ್ಲಿ ತನಕದ ಶ್ರೇಷ್ಠ ಸ್ಥಾನ ಪಡೆದುಕೊಂಡಿದ್ದಾರೆ.

ಐಸಿಸಿ ಟಾಪ್ 5 ಆಲ್ ರೌಂಡರ್ಸ್
1. ಆರ್ ಅಶ್ವಿನ್ (ಭಾರತ) -406 ಅಂಕಗಳು
2. ಶಕೀಬ್ ಅಲ್ ಹಸನ್ (ಬಾಂಗ್ಲಾದೇಶ) -384 ಅಂಕಗಳು
3. ಸ್ಟುವರ್ಟ್ ಬ್ರಾಡ್ (ಇಂಗ್ಲೆಂಡ್)-315 ಅಂಕಗಳು
4. ವೆರ್ನೊನ್ ಫಿಲ್ಯಾಂಡರ್ (ದಕ್ಷಿಣ ಆಫ್ರಿಕಾ) -298 ಅಂಕಗಳು
5. ಮಿಚೆಲ್ ಸ್ಟಾರ್ಕ್ (ಆಸ್ಟ್ರೇಲಿಯಾ)- 260 ಅಂಕಗಳು
ಟಾಪ್ 20 ಬೌಲರ್ಸ್
1. ಡೇಲ್ ಸ್ಟೈನ್ (ದಕ್ಷಿಣ ಆಫ್ರಿಕಾ) - 875 ಅಂಕಗಳು
2. ಆರ್ ಅಶ್ವಿನ್ (ಭಾರತ) - 871 ಅಂಕಗಳು
3. ಜೇಮ್ಸ್ ಆಂಡರ್ಸನ್ (ಇಂಗ್ಲೆಂಡ್) 846
4. ಯಾಸಿರ್ ಶಾ (ಪಾಕಿಸ್ತಾನ) 846
5. ಸ್ಟುವರ್ಟ್ ಬ್ರಾಡ್ (ಇಂಗ್ಲೆಂಡ್)840
6. ಟ್ರೆಂಟ್ ಬೌಲ್ಟ್ (ನ್ಯೂಜಿಲೆಂಡ್) 809
7. ರವೀಂದ್ರ ಜಡೇಜ (ಭಾರತ) 789
8. ರಂಗಣಾ ಹೇರತ್ (ಶ್ರೀಲಂಕಾ) 751
9. ವೆರ್ನಾನ್ ಫಿಲ್ಯಾಂಡರ್ (ದಕ್ಷಿಣ ಆಫ್ರಿಕಾ) 746
10. ಮಾರ್ನೆ ಮಾರ್ಕೆಲ್ (ದಕ್ಷಿಣ ಆಫ್ರಿಕಾ) 726
11. ಜೋಶ್ ಹೇಜಲ್ ವುಡ್ (ಆಸ್ಟ್ರೇಲಿಯಾ) 708
12. ಮಿಚೆಲ್ ಸ್ಟಾರ್ಕ್ (ಆಸ್ಟ್ರೇಲಿಯಾ) 692
13. ಸಯೀದ್ ಅಜ್ಮಲ್ (ಪಾಕಿಸ್ತಾನ) 669
14. ಟಿಮ್ ಸೌಥಿ (ನ್ಯೂಜಿಲೆಂಡ್) 650
15. ಕೇಮಾರ್ ರೋಚ್ (ವೆಸ್ಟ್ ಇಂಡೀಸ್) 642
16. ಧಮಿಕಾ ಪ್ರಸಾದ್ (ಶ್ರೀಲಂಕಾ) 632
17. ನಾಥನ್ ಲಿಯಾನ್ (ಆಸ್ಟ್ರೇಲಿಯಾ) 628
18. ಪೀಟರ್ ಸಿಡ್ಲ್ (ಆಸ್ಟ್ರೇಲಿಯಾ) 620
19. ಶಕೀಬ್ ಅಲ್ ಹಸನ್ (ಬಾಂಗ್ಲಾದೇಶ) 614
20. ಜೆರೊಮಿ ಟೇಲರ್ (ವೆಸ್ಟ್ ಇಂಡೀಸ್) 583
