Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ICC Test rankings: ಆಸ್ಟ್ರೇಲಿಯಾ ಪಾರಮ್ಯ, ಭಾರತೀಯರಲ್ಲಿ ಏರಿಳಿತ

ICC rankings: Jasprit Bumrah slips to 9th in Tests, Virat Kohli retains 2nd spot

ನವದೆಹಲಿ: ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಮಂಗಳವಾರ (ಆಗಸ್ಟ್ 18) ಟೆಸ್ಟ್ ರ್‍ಯಾಂಕಿಂಗ್ ನೂತನ ಪಟ್ಟಿ ಪ್ರಕಟಿಸಿದೆ. ಇದರಲ್ಲಿ ಬ್ಯಾಟಿಂಗ್ ರ್‍ಯಾಂಕಿಂಗ್‌ನಲ್ಲಿ ಇಬ್ಬರು ಹೆಚ್ಚುವರಿ ಭಾರತೀಯ ಆಟಗಾರರು ಕಾಣಿಸಿಕೊಂಡಿದ್ದಾರೆ. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೊದಲಿದ್ದ ಅದೇ 2ನೇ ಸ್ಥಾನದಲ್ಲಿದ್ದರೆ, ಬೌಲಿಂಗ್ ರ್‍ಯಾಂಕಿಂಗ್‌ನಲ್ಲಿ ವೇಗಿ ಜಸ್‌ಪ್ರೀತ್ ಬೂಮ್ರಾ 9ನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ.

ಬ್ಯಾಟಿಂಗ್ ರ್‍ಯಾಂಕಿಂಗ್‌ನಲ್ಲಿ 10ರೊಳಗೆ ಇರುವ ಇನ್ನಿಬ್ಬರು ಭಾರತೀಯರೆಂದರೆ ಚೇತೇಶ್ವರ್ ಪೂಜಾರ (8ನೇ ರ್‍ಯಾಂಕ್) ಮತ್ತು ಅಜಿಂಕ್ಯ ರಹಾನೆ (10ನೇ ರ್‍ಯಾಂಕ್). ವಿಶೇಷವೆಂದರೆ ಆಲ್ ರೌಂಡರ್‌ಗಳ ಸಾಲಿನಲ್ಲಿನಲ್ಲಿ ಭಾರತದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 5ನೇ ಸ್ಥಾನದಲ್ಲಿದ್ದಾರೆ.

ಟೆಸ್ಟ್‌ ನೂತನ ರ್‍ಯಾಂಕಿಂಗ್‌ನಲ್ಲಿ ಆಟಗಾರರ, ತಂಡಗಳ ಸ್ಥಾನಗಳಲ್ಲಿನ ಏರಿಳಿತಗಳ ಮಾಹಿತಿ ಇಲ್ಲಿದೆ.

ಬ್ಯಾಟಿಂಗ್ ರ್‍ಯಾಂಕಿಂಗ್

ಬ್ಯಾಟಿಂಗ್ ರ್‍ಯಾಂಕಿಂಗ್

1. ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ, 911 ರೇಟಿಂಗ್ ಪಾಯಿಂಟ್), 2. ವಿರಾಟ್ ಕೊಹ್ಲಿ (ಭಾರತ, 886), 3. ಮಾರ್ನಸ್ ಲ್ಯಬುಶೇನ್ (ಆಸ್ಟ್ರೇಲಿಯಾ, 827), 4. ಕೇನ್ ವಿಲಿಯಮ್ಸನ್ (ನ್ಯೂಜಿಲೆಂಡ್), 5. ಬಾಬರ್ ಅಝಾಮ್ (ಪಾಕಿಸ್ತಾನ), 6. ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ), 7. ಬೆನ್ ಸ್ಟೋಕ್ಸ್ (ಇಂಗ್ಲೆಂಡ್), 8. ಚೇತೇಶ್ವರ್ ಪೂಜಾರ (ಭಾರತ), 9. ಜೋ ರೂಟ್ (ಇಂಗ್ಲೆಂಡ್), 10. ಅಜಿಂಕ್ಯ ರಹಾನೆ (ಭಾರತ).

ಬೌಲಿಂಗ್ ಶ್ರೇಯಾಂಕ

ಬೌಲಿಂಗ್ ಶ್ರೇಯಾಂಕ

1. ಪ್ಯಾಟ್ ಕಮಿನ್ಸ್ (ಆಸ್ಟ್ರೇಲಿಯಾ, 904 ರೇಟಿಂಗ್ ಪಾಯಿಂಟ್), 2. ಸ್ಟುವರ್ಟ್ ಬ್ರಾಡ್ (ಇಂಗ್ಲೆಂಡ್, 846), 3. ನೀಲ್ ವ್ಯಾಗ್ನರ್, (ನ್ಯೂಜಿಲೆಂಡ್, 843), 4. ಟಿಮ್ ಸೌಥೀ (ನ್ಯೂಜಿಲೆಂಡ್), 5. ಜೇಸನ್ ಹೋಲ್ಡರ್ (ವೆಸ್ಟ್ ಇಂಡೀಸ್), 6. ಕಾಗಿಸೊ ರಬಾಡ (ದಕ್ಷಿಣ ಆಫ್ರಿಕಾ), 7. ಮಿಚೆಲ್ ಸ್ಟಾರ್ಕ್ (ಆಸ್ಟ್ರೇಲಿಯಾ), 8. ಮೊಹಮ್ಮದ್ ಅಬ್ಬಾಸ್ (ಪಾಕಿಸ್ತಾನ), 9. ಜಸ್‌ಪ್ರೀತ್ ಬೂಮ್ರಾ (ಭಾರತ), 10. ಟ್ರೆಂಟ್ ಬೌಲ್ಟ್ (ನ್ಯೂಜಿಲೆಂಡ್).

ಆಲ್‌ ರೌಂಡರ್‌ಗಳು

ಆಲ್‌ ರೌಂಡರ್‌ಗಳು

1. ಬೆನ್ ಸ್ಕೋಕ್ಸ್ (ಇಂಗ್ಲೆಂಡ್, 454 ರೇಟಿಂಗ್ ಪಾಯಿಂಟ್), 2. ಜೇಸನ್ ಹೋಲ್ಡರ್ (ವೆಸ್ಟ್ ಇಂಡೀಸ್, 447), 3. ರವೀಂದ್ರ ಜಡೇಜಾ (ಭಾರತ, 397), 4. ಮಿಚೆಲ್ ಸ್ಟಾರ್ಕ್ (ಆಸ್ಟ್ರೇಲಿಯಾ), 5. ಆರ್ ಅಶ್ವಿನ್ (ಭಾರತ), 6. ಕಾಲಿನ್ ಡಿ ಗ್ರ್ಯಾಂಡ್‌ಹೋಮ್ (ನ್ಯೂಜಿಲೆಂಡ್), 7. ಪ್ಯಾಟ್ ಕಮಿನ್ಸ್ (ಆಸ್ಟ್ರೇಲಿಯಾ), 8. ಕ್ರಿಸ್ ವೋಕ್ಸ್ (ಇಂಗ್ಲೆಂಡ್), 9. ರೋಸ್ಟನ್ ಚೇಸ್ (ವೆಸ್ಟ್ ಇಂಡೀಸ್), 10. ಸ್ಟುವರ್ಟ್ ಬ್ರಾಡ್ (ಇಂಗ್ಲೆಂಡ್).

ತಂಡಗಳ ರ್‍ಯಾಂಕಿಂಗ್

ತಂಡಗಳ ರ್‍ಯಾಂಕಿಂಗ್

1. ಆಸ್ಟ್ರೇಲಿಯಾ (116 ರೇಟಿಂಗ್ ಪಾಯಿಂಟ್), 2. ನ್ಯೂಜಿಲೆಂಡ್ (115), 3. ಭಾರತ (114), 4. ಇಂಗ್ಲೆಂಡ್, 5. ಶ್ರೀಲಂಕಾ, 6. ದಕ್ಷಿಣ ಆಫ್ರಿಕಾ, 7. ಪಾಕಿಸ್ತಾನ, 8. ವೆಸ್ಟ್ ಇಂಡೀಸ್, 9. ಬಾಂಗ್ಲಾದೇಶ, 10. ಜಿಂಬಾಬ್ವೆ.

Story first published: Tuesday, August 18, 2020, 20:43 [IST]
Other articles published on Aug 18, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+