Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ICC T20I Rankings: ಕೆಎಲ್ ರಾಹುಲ್ ಭಾರೀ ಜಿಗಿತ, 10ಲ್ಲಿ ರೋಹಿತ್

ICC Rankings: KL Rahul climbs to No 2, Rohit Sharma enters top 10

ಬೆಂಗಳೂರು, ಫೆಬ್ರವರಿ 3: ನ್ಯೂಜಿಲೆಂಡ್‌ ಪ್ರವಾಸದಲ್ಲಿರುವ ಟೀಮ್ ಇಂಡಿಯಾ ಐದು ಪಂದ್ಯಗಳ ಟಿ20ಐ ಸರಣಿಯಲ್ಲಿ ಪಾರಮ್ಯ ಮೆರೆದಿದೆ. ಐದಕ್ಕೆ ಐದೂ ಪಂದ್ಯಗಳನ್ನು ಗೆದ್ದು ನ್ಯೂಜಿಲೆಂಡ್‌ ನೆಲದಲ್ಲಿ ಚೊಚ್ಚಲ ಟಿ20 ಸರಣಿ ಗೆದ್ದ ದಾಖಲೆಗೂ ಕಾರಣವಾಗಿದೆ. ನ್ಯೂಜಿಲೆಂಡ್ ಟಿ20 ಸರಣಿಯ ಬಳಿಕ ಐಸಿಸಿ ರ್ಯಾಂಕಿಂಗ್‌ನಲ್ಲೂ ಪ್ರಮುಖ ಏರಿಳಿತಗಳಾಗಿವೆ.

ಸೋಮವಾರ (ಫೆಬ್ರವರಿ 3) ಪ್ರಕಟಗೊಂಡಿರುವ ಐಸಿಸಿ ಟಿ20ಐ ನೂತನ ರ್ಯಾಕಿಂಗ್‌ನಲ್ಲಿ ಭಾರತದ ಮೂವರು ಆಟಗಾರರು ಸ್ಥಾನ ಪಡೆದಿದ್ದಾರೆ. ಅದರಲ್ಲೂ ಕನ್ನಡಿಗ ಕೆಎಲ್ ರಾಹುಲ್ ಸದ್ಯ ದ್ವಿತೀಯ ಸ್ಥಾನದಲ್ಲಿದ್ದಾರೆ. ನ್ಯೂಜಿಲೆಂಡ್‌ ಟಿ20ಐ ಸರಣಿಯಲ್ಲು ಭರ್ಜರಿ ಫಾರ್ಮ್ ತೋರಿಸಿದ್ದ ರಾಹುಲ್‌ ಉತ್ತಮ ಜಿಗಿತ ಕಂಡಿದ್ದಾರೆ.

ಸದ್ಯ ಟಿ20 ರ್ಯಾಂಕಿಂಗ್‌ನಲ್ಲಿ ಪಾಕಿಸ್ತಾನ ಬ್ಯಾಟ್ಸ್‌ಮನ್ ಬಾಬರ್ ಅಝಮ್ ಮೊದಲ ಸ್ಥಾನದಲ್ಲಿದ್ದರೆ, ಕೆಎಲ್ ರಾಹುಲ್ ದ್ವಿತೀಯ, ಆಸ್ಟ್ರೇಲಿಯಾದ ಆ್ಯರನ್ ಫಿಂಚ್ ತೃತೀಯ, ನ್ಯೂಜಿಲೆಂಡ್‌ ಕಾಲಿನ್ ಮನ್ರೋ 4ನೇ, ಇಂಗ್ಲೆಂಡ್‌ನ ಡೇವಿಡ್ ಮಲಾನ್ 5ನೇ ಶ್ರೇಯಾಂಕದಲ್ಲಿದ್ದಾರೆ.

ಇನ್ನು 6ರಿಂದ 10ನೇ ಸ್ಥಾನದೊಳಗೆ ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್, ವೆಸ್ಟ್ ಇಂಡೀಸ್‌ನ ಎವಿನ್ ಲೂಯಿಸ್, ಅಫ್ಘಾನಿಸ್ತಾನದ ಹಝ್ರತುಲ್ಲ ಝಝಾಯ್, ಭಾರತದ ನಾಯಕ ವಿರಾಟ್ ಕೊಹ್ಲಿ ಮತ್ತು ಉಪನಾಯಕ ರೋಹಿತ್ ಶರ್ಮಾ ಸ್ಥಾನ ಪಡೆದುಕೊಂಡಿದ್ದಾರೆ. ಇದು ಬಿಟ್ಟರೆ ಭಾರತದವರಲ್ಲಿ ಶಿಖರ್ ಧವನ್ 24ನೇ ಸ್ಥಾನದಲ್ಲಿದ್ದಾರೆ.

ಟಿ20 ಬೌಲಿಂಗ್‌ನಲ್ಲಿ ರಶೀದ್ ಖಾನ್ (ಅಫ್ಘಾನ್), ಮುಜೀಬ್ ಉರ್ ರಹ್ಮಾನ್ (ಅಫ್ಘಾನ್), ಮಿಚೆಲ್ ಸ್ಯಾಂಟ್ನರ್ (ನ್ಯೂಜಿಲೆಂಡ್), ಆ್ಯಡಂ ಝಂಪಾ (ಆಸ್ಟ್ರೇಲಿಯಾ), ಇಮಾದ್ ವಾಸಿಮ್ (ಪಾಕಿಸ್ತಾನ) ಮೊದಲ ಐದರಲ್ಲಿದ್ದಾರೆ. ಆಲ್ ರೌಂಡರ್‌ಗಳಲ್ಲಿ ಮೊಹಮ್ಮದ್ ಜಬಿ (ಅಫ್ಘಾನ್), ಗ್ಲೆನ್ ಮ್ಯಾಕ್ಸ್‌ವೆಲ್ (ಆಸೀಸ್) ಸೀನ್ ವಿಲಿಯಮ್ಸ್ (ಜಿಂಬಾಬ್ವೆ) ಮೊದಲ ಮೂರರಲ್ಲಿದ್ದಾರೆ. ಬೌಲಿಂಗ್ ಮತ್ತು ಆಲ್ ರೌಂಡರ್ ವಿಭಾಗದಲ್ಲಿ ಭಾರತದ ಯಾವೊಬ್ಬರೂ 10ರೊಳಗೂ ಸ್ಥಾನ ಪಡೆದಿಲ್ಲ.

Story first published: Monday, February 3, 2020, 16:55 [IST]
Other articles published on Feb 3, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+