Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟಿ20ಐ ರ್‍ಯಾಂಕಿಂಗ್ಸ್: ಬಾಬರ್ ಬೆನ್ನ ಹಿಂದಿದ್ದಾರೆ ಕನ್ನಡಿಗ ಕೆಎಲ್ ರಾಹುಲ್

ICC rankings: KL Rahul in second place in T20s

ಬೆಂಗಳೂರು: ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಪುರುಷರ ವಿಭಾಗದ ನೂತನ ರ್‍ಯಾಂಕ್ ಪಟ್ಟಿ ಪ್ರಕಟಿಸಿದೆ. ಇದರಲ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಭಾರತದ ಪ್ರತಿಭಾನ್ವಿತ ಬ್ಯಾಟ್ಸ್‌ಮನ್, ಕನ್ನಡಿಗ ಕೆಎಲ್ ರಾಹುಲ್ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಏಕದಿನ ರ್‍ಯಾಂಕಿಂಗ್‌ನಲ್ಲಿ ಭಾರತದ ನಾಯಕ ವಿರಾಟ್ ಕೊಹ್ಲಿ ಮತ್ತು ಉಪನಾಯಕ ರೋಹಿತ್ ಶರ್ಮಾ ಕ್ರಮವಾಗಿ ನಂ.1, ನಂ.2 ಶ್ರೇಯಾಂಕದಲ್ಲಿದ್ದಾರೆ.

ಟಿ20ಐ ರ್‍ಯಾಂಕಿಂಗ್‌ನ ಅಗ್ರ ಸ್ಥಾನದಲ್ಲಿ ಪಾಕಿಸ್ತಾನ ಲಿಮಿಟೆಡ್ ಓವರ್‌ಗಳ ತಂಡದ ನಾಯಕ ಬಾಬರ್ ಅಝಾಮ್ ಇದ್ದಾರೆ. ಮುಂಬರಲಿರುವ ಇಂಗ್ಲೆಂಡ್ ವಿರುದ್ಧದ ಟಿ20ಐ ಸರಣಿಯಲ್ಲಿ ಬಾಬರ್ ಉತ್ತಮ ಪ್ರದರ್ಶನ ನೀಡಿದರೆ ಬಾಬರ್ ಇನ್ನಷ್ಟು ಅಂಕಗಳನ್ನು ಕಲೆ ಹಾಕಲಿದ್ದಾರೆ. ರಾಹುಲ್, ಆಸ್ಟ್ರೇಲಿಯಾ ವಿರುದ್ಧದ ಟಿ20ಐ ಸರಣಿಯಲ್ಲಿ ಉತ್ತಮ ಬ್ಯಾಟಿಂಗ್ ನೀಡಬೇಕಿದೆ.

ಟಿ20ಐ ಕ್ರಿಕೆಟ್‌ನಲ್ಲಿ ಆಟಗಾರರ ಸ್ಥಾನಮಾನ, ಪಡೆದ ಪಾಯಿಂಟ್ಸ್‌, ತಂಡಗಳ ಸ್ಥಿತಿಗತಿಗಳ ಚಿತ್ರಣ ಇಲ್ಲಿದೆ.

ಟಿ20ನಲ್ಲಿ ಬ್ಯಾಟಿಂಗ್‌ ಅಗ್ರ ಸ್ಥಾನಿಗಳು

ಟಿ20ನಲ್ಲಿ ಬ್ಯಾಟಿಂಗ್‌ ಅಗ್ರ ಸ್ಥಾನಿಗಳು

1. ಬಾಬರ್ ಅಝಾಮ್ (ಪಾಕಿಸ್ತಾನ, 879 ರೇಟಿಂಗ್ ಪಾಯಿಂಟ್ಸ್‌), 2. ಕೆಎಲ್ ರಾಹುಲ್ (ಭಾರತ, 823), 3. ಆ್ಯರನ್ ಫಿಂಚ್ (ಆಸ್ಟ್ರೇಲಿಯಾ, 820), 4. ಕಾಲಿನ್ ಮುನ್ರೋ (ನ್ಯೂಜಿಲೆಂಡ್), 5. ಗ್ಲೆನ್ ಮ್ಯಾಕ್ಸ್‌ವೆಲ್ (ಆಸ್ಟ್ರೇಲಿಯಾ), 6. ಡೇವಿಡ್ ಮಲನ್ (ಇಂಗ್ಲೆಂಡ್), 7. ಇಯಾನ್ ಮಾರ್ಗನ್ (ಇಂಗ್ಲೆಂಡ್), 8. ಹಝರತುಲ್ಲ (ಅಫ್ಘಾನಿಸ್ತಾನ), 9. ಎವಿನ್ ಲೂಯಿಸ್ (ವೆಸ್ಟ್ ಇಂಡೀಸ್), 10. ವಿರಾಟ್ ಕೊಹ್ಲಿ (ಭಾರತ).

ಟಿ20ಐ ಬೌಲರ್‌ಗಳು

ಟಿ20ಐ ಬೌಲರ್‌ಗಳು

1. ರಶೀದ್ ಖಾನ್ (ಅಫ್ಘಾನಿಸ್ತಾನ, 736), 2. ಮುಜೀಬ್ ಉರ್ ರಹ್ಮಾನ್ (ಅಫ್ಘಾನಿಸ್ತಾನ, 730), 3. ಆ್ಯಡಮ್ ಜಂಪಾ (ಆಸ್ಟ್ರೇಲಿಯಾ), 4. ಆ್ಯಷ್ಟನ್ ಅಗರ್ (ಆಸ್ಟ್ರೇಲಿಯಾ), 5. ತಬ್ರೇಜ್ ಶಮ್ಸಿ (ದಕ್ಷಿಣ ಆಫ್ರಿಕಾ), 6. ಮಿಚೆಲ್ ಸ್ಯಾಂಡ್ನರ್ (ನ್ಯೂಜಿಲೆಂಡ್), 7. ಇಮಾದ್ ವಾಸಿಮ್ (ಪಾಕಿಸ್ತಾನ), 8. ಆದಿಲ್ ರಶೀದ್ (ಇಂಗ್ಲೆಂಡ್), 9. ಶದಾಬ್ ಖಾನ್ (ಪಾಕಿಸ್ತಾನ), 10. ಕ್ರಿಸ್ ಜೋರ್ಡನ್ (ಇಂಗ್ಲೆಂಡ್).

ಸರ್ವಾಂಗಿಣ ಆಟಗಾರರು

ಸರ್ವಾಂಗಿಣ ಆಟಗಾರರು

1. ಮೊಹಮ್ಮದ್ ನಬಿ (ಅಫ್ಘಾನಿಸ್ತಾನ), 2. ಸೀನ್ ವಿಲಿಯಮ್ಸ್ (ಜಿಂಬಾಬ್ವೆ), 3. ಗ್ಲೆನ್ ಮ್ಯಾಕ್ಸ್‌ವೆಲ್ (ಆಸ್ಟ್ರೇಲಿಯಾ), 4. ರಿಚರ್ಡ್ ಬೇರಿಂಗ್ಟನ್ (ಸ್ಕಾಟ್ಲೆಂಡ್), 5. ಗರೆಥ್ ಡೆಲಾನಿ (ಐರ್ಲೆಂಡ್), 6. ಖವಾರ್ ಅಲಿ (ಓಮನ್), 7. ಕಾಲಿನ್ಸ್ ಒಬುಯಾ (ಕೀನ್ಯಾ), 8. ರೋಹನ್ ಮುಸ್ತಫಾ (ಯುಎಇ), 9. ಝೀಶನ್ ಮಸೂದ್ (ಓಮನ್), 10. ಮೊಹಮದುಲ್ಲ (ಬಾಂಗ್ಲಾದೇಶ)

ಟಿ20ಐ ಟಾಪ್ 10 ತಂಡಗಳು

ಟಿ20ಐ ಟಾಪ್ 10 ತಂಡಗಳು

1. ಆಸ್ಟ್ರೇಲಿಯಾ (278), 2. ಇಂಗ್ಲೆಂಡ್ (268), 3. ಭಾರತ (266), 4. ಪಾಕಿಸ್ತಾನ, 5. ದಕ್ಷಿಣ ಆಫ್ರಿಕಾ , 6. ನ್ಯೂಜಿಲೆಂಡ್, 7. ಶ್ರೀಲಂಕಾ, 8. ಬಾಂಗ್ಲಾದೇಶ, 9. ವೆಸ್ಟ್ ಇಂಡೀಸ್, 10. ಅಫ್ಘಾನಿಸ್ತಾನ.

Story first published: Friday, August 28, 2020, 10:02 [IST]
Other articles published on Aug 28, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+