For Quick Alerts
ALLOW NOTIFICATIONS  
For Daily Alerts
 

ICC Ranking: ರಶೀದ್ ಖಾನ್ ಹಿಂದಿಕ್ಕಿ ನಂ.1 ಟಿ20 ಬೌಲರ್ ಆದ ರವಿ ಬಿಷ್ಣೋಯ್!

ಭಾರತ ತಂಡದ ಲೆಗ್ ಸ್ಪಿನ್ನರ್ ರವಿ ಬಿಷ್ಣೋಯ್ ಅವರು ಇತ್ತೀಚೆಗೆ ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ತಮ್ಮ ಅತ್ಯದ್ಭುತ ಪ್ರದರ್ಶನ ನೀಡಿದ ಬಳಿಕ, ಐಸಿಸಿ ಟಿ20 ಬೌಲಿಂಗ್ ಶ್ರೇಯಾಂಕದಲ್ಲಿ ನೂತನ ನಂ.1 ಬೌಲರ್ ಆಗಿದ್ದಾರೆ.

ಐಸಿಸಿ ಪುರುಷರ ಟಿ20 ಕ್ರಿಕೆಟ್‌ನ ಬೌಲಿಂಗ್ ಶ್ರೇಯಾಂಕದ ಅಗ್ರಸ್ಥಾನ ತಲುಪಿದ್ದ ಜಸ್ಪ್ರೀತ್ ಬುಮ್ರಾ ಸೇರಿದಂತೆ ಭಾರತೀಯ ಬೌಲರ್‌ಗಳ ಗಣ್ಯ ಪಟ್ಟಿಗೆ ಇದೀಗ ರವಿ ಬಿಷ್ಣೋಯ್ ಸೇರಿದ್ದಾರೆ.

ICC T20 Rankings: Ravi Bishnoi Becomes the #1 T20 Bowler Surpassing Rashid Khan

ಐಸಿಸಿ ಟಿ20 ಕ್ರಿಕೆಟ್‌ನಲ್ಲಿ ಭಾರತದ ಆಟಗಾರರು ಬ್ಯಾಟಿಂಗ್ ಮತ್ತು ಬೌಲಿಂಗ್ ಶ್ರೇಯಾಂಕಗಳೆರಡರಲ್ಲೂ ಅಗ್ರಸ್ಥಾನವನ್ನು ಹೊಂದಿದ್ದಾರೆ. ಬೌಲಿಂಗ್‌ನಲ್ಲಿ ರವಿ ಬಿಷ್ಣೋಯ್, ಬ್ಯಾಟಿಂಗ್‌ನಲ್ಲಿ ಸೂರ್ಯಕುಮಾರ್ ಯಾದವ್ ಟಿ20 ಕ್ರಿಕೆಟ್‌ನಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಈ ಮೂಲಕ ಈವರೆಗೂ ನಂ.ಟಿ20 ಬೌಲರ್ ಆಗಿದ್ದ ಅಫ್ಘಾನಿಸ್ತಾನ ತಂಡದ ಸ್ಟಾರ್ ಸ್ಪಿನ್ನರ್ ರಶೀದ್ ಖಾನ್ ಅವರನ್ನು ಹಿಂದಿಕ್ಕಿ ರವಿ ಬಿಷ್ಣೋಯ್ ಅಗ್ರಸ್ಥಾನವನ್ನು ಪಡೆದಿದ್ದಾರೆ.

ಲಕ್ನೋ ಸೂಪರ್ ಜೈಂಟ್ಸ್ ಬೌಲರ್ ರವಿ ಬಿಷ್ಣೋಯ್ ಕಳೆದ ವಾರ 5ನೇ ಶ್ರೇಯಾಂಕದಲ್ಲಿದ್ದರು ಮತ್ತು ಇದೀಗ ಅಫ್ಘಾನಿಸ್ತಾನ ಸ್ಪಿನ್ ಬೌಲರ್‌ನನ್ನು ಕೆಳಗಿಳಿಸಲು 5 ಸ್ಥಾನಗಳ ಮೇಲೇರಿಕೆ ಕಂಡಿದ್ದಾರೆ.

ಲಕ್ನೋ ಸೂಪರ್ ಜೈಂಟ್ಸ್ ಬೌಲರ್ ರವಿ ಬಿಷ್ಣೋಯ್ ಕಳೆದ ವಾರ 5ನೇ ಶ್ರೇಯಾಂಕದಲ್ಲಿದ್ದರು ಮತ್ತು ಇದೀಗ ಅಫ್ಘಾನಿಸ್ತಾನ ಸ್ಪಿನ್ ಬೌಲರ್‌ನನ್ನು ಕೆಳಗಿಳಿಸಲು 5 ಸ್ಥಾನಗಳ ಮೇಲೇರಿಕೆ ಕಂಡಿದ್ದಾರೆ.

ICC T20 Rankings: Ravi Bishnoi Becomes the #1 T20 Bowler Surpassing Rashid Khan

ಸೂರ್ಯಕುಮಾರ್ ಯಾದವ್ ಅವರು ಟಿ20 ತಂಡದ ನಾಯಕನಾಗಿ ತಮ್ಮ ಚೊಚ್ಚಲ ನಿಯೋಜನೆಯಲ್ಲಿ ಯಶಸ್ಸನ್ನು ಕಂಡುಕೊಂಡರು ಮತ್ತು ಬ್ಯಾಟಿಂಗ್ ಶ್ರೇಯಾಂಕದಲ್ಲಿ ನಂ.1 ಸ್ಥಾನವನ್ನು ಮುಂದುವರೆಸಿದ್ದಾರೆ.

ಸೂರ್ಯಕುಮಾರ್ ನಾಯಕತ್ವದಲ್ಲಿ ಭಾರತದ ಯುವ ತಂಡವು ಟಿ20 ಸರಣಿಯಲ್ಲಿ ಆಸ್ಟ್ರೇಲಿಯಾ ತಂಡವನ್ನು 4-1 ಅಂತರದಿಂದ ಸೋಲಿಸಿತು.

5ನೇ ಸ್ಥಾನದಿಂದ ಅಗ್ರಸ್ಥಾನಕ್ಕೆ ಏರಿದ ರವಿ ಬಿಷ್ಣೋಯ್

ಕಳೆದ ವಾರ 5ನೇ ಶ್ರೇಯಾಂಕದಲ್ಲಿದ್ದಾಗ ರವಿ ಬಿಷ್ಣೋಯ್ 664 ರೇಟಿಂಗ್ ಪಾಯಿಂಟ್‌ಗಳನ್ನು ಹೊಂದಿದ್ದರು. ಆದರೆ ಆಸ್ಟ್ರೇಲಿಯಾ ವಿರುದ್ಧದ ಉತ್ತಮ ಬೌಲಿಂಗ್ ಪ್ರದರ್ಶನ ಅವರು 34 ಪಾಯಿಂಟ್‌ಗಳನ್ನು ಗಳಿಸಿದರು.

ರವಿ ಬಿಷ್ಣೋಯ್ ಇದೀಗ 699 ರೇಟಿಂಗ್ ಪಾಯಿಂಟ್‌ಗಳ ಮೂಲಕ ಮಾರ್ಚ್ 2023ರಿಂದ ಅಗ್ರಸ್ಥಾನದಲ್ಲಿದ್ದ ರಶೀದ್ ಖಾನ್ ಅವರಿಗಿಂತ 7 ಹೆಚ್ಚು ಅಂಕಗಳನ್ನು ಹೊಂದಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ ರವಿ ಬಿಷ್ಣೋಯ್ ಅವರು ಕೇವಲ 5 ಪಂದ್ಯಗಳಲ್ಲಿ 9 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದರು.

2022ರ ಫೆಬ್ರವರಿಯಲ್ಲಿ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ರವಿ ಬಿಷ್ಣೋಯ್‌ಗೆ ಇದು ದೊಡ್ಡ ಸಾಧನೆಯಾಗಿದೆ. ಅವರು ಈವರೆಗೆ 21 ಪಂದ್ಯಗಳನ್ನು ಆಡಿದ್ದಾರೆ ಮತ್ತು 34 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ರವಿ ಬಿಷ್ಣೋಯ್ ತಮ್ಮ ಇತ್ತೀಚಿನ ಪ್ರದರ್ಶನಗಳೊಂದಿಗೆ ತಮ್ಮ ಕೈಯನ್ನು ಮೇಲೆತ್ತಿ ಆಯ್ಕೆದಾರರಿಗೆ 2024ರ ಟಿ20 ವಿಶ್ವಕಪ್‌ಗೆ ಪ್ರಮುಖ ಸ್ಪರ್ಧಿ ಎಂದು ನೆನಪಿಸಿದ್ದಾರೆ.

ರವಿ ಬಿಷ್ಣೋಯ್ ಅವರು ಹೆಚ್ಚು ಸ್ಪರ್ಧಾತ್ಮಕ ಸ್ಪಿನ್ನರ್‌ಗಳ ಸ್ಲಾಟ್‌ಗಳಿಗಾಗಿ ಅಕ್ಷರ್ ಪಟೇಲ್, ರವೀಂದ್ರ ಜಡೇಜಾ ಮತ್ತು ಕುಲದೀಪ್ ಯಾದವ್‌ ಅವರಿಂದ ತೀವ್ರ ಪೈಪೋಟಿ ಎದುರಿಸುತ್ತಾರೆ.

ಇದೇ ವೇಳೆ, ರುತುರಾಜ್ ಗಾಯಕ್ವಾಡ್ ಐಸಿಸಿ ಟಿ20 ಬ್ಯಾಟಿಂಗ್ ಶ್ರೇಯಾಂಕದಲ್ಲಿ 7ನೇ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ರುತುರಾಜ್ ಗಾಯಕ್ವಾಡ್ ಇತ್ತೀಚೆಗೆ ಮುಕ್ತಾಯಗೊಂಡ ಟಿ20 ಸರಣಿಯಲ್ಲಿ 5 ಪಂದ್ಯಗಳಲ್ಲಿ 223 ರನ್ ಗಳಿಸಿದ್ದರು.

ಗುವಾಹಟಿಯಲ್ಲಿ ನಡೆದ 3ನೇ ಟಿ20 ಪಂದ್ಯದಲ್ಲಿ ಅವರು ಶತಕ ಬಾರಿಸಿದರು. ಆದರೆ ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಸ್ಫೋಟಕ ಶತಕದ ಮುಂದೆ ಅದು ವ್ಯರ್ಥವಾಯಿತು.

2023ರಲ್ಲಿ 11 ಟಿ20 ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದ್ದ ಹಾರ್ದಿಕ್ ಪಾಂಡ್ಯ ಐಸಿಸಿ ಟಿ20 ಆಲ್‌ರೌಂಡರ್‌ಗಳ ಶ್ರೇಯಾಂಕದಲ್ಲಿ 3ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ವಿಶ್ವಕಪ್ 2023ರ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಅವರು ಅನುಭವಿಸಿದ ಪಾದದ ಗಾಯದಿಂದ ಕ್ರಿಕೆಟ್‌ನಿಂದದ ಹೊರಗುಳಿದಿದ್ದಾರೆ.

ಸೂರ್ಯಕುಮಾರ್ ಯಾದವ್ ಅವರು ಕೇವಲ 42 ಎಸೆತಗಳಲ್ಲಿ 80 ರನ್ ಗಳಿಸಿ ಪಂದ್ಯ ವಿಜೇತದೊಂದಿಗೆ ಸರಣಿ ಪ್ರಾರಂಭಿಸಿದರೂ, ಬ್ಯಾಟ್‌ನೊಂದಿಗೆ ಟಿ20 ಸರಣಿಯಲ್ಲಿ ಏರಿಳಿತ ಕಂಡರು. ಆಡಿದ 5 ಇನ್ನಿಂಗ್ಸ್‌ಗಳಲ್ಲಿ 133 ರನ್ ಗಳಿಸಿದರು.

ಆದರೆ, ಸೂರ್ಯಕುಮಾರ್ ಯಾದವ್ ನಂ.1 ಸ್ಥಾನದಲ್ಲಿ ಮುಂದುವರಿದಿದ್ದಾರೆ. ಅವರು 2ನೇ ಸ್ಥಾನದಲ್ಲಿರುವ ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್‌ಗಿಂತ ಉತ್ತಮ ಮುನ್ನಡೆ ಹೊಂದಿದ್ದಾರೆ.

Story first published: Wednesday, December 6, 2023, 15:44 [IST]
Other articles published on Dec 6, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+