ಏಕದಿನ ರ‍್ಯಾಂಕಿಂಗ್: 4ನೇ ಸ್ಥಾನಕ್ಕೇರಿದ ಯುವ ಆರಂಭಿಕ ಆಟಗಾರ ಶುಬ್ಮನ್ ಗಿಲ್
ಐಸಿಸಿ ಏಕದಿನ ಶ್ರೇಯಾಂಕಪಟ್ಟಿಯಲ್ಲಿ ಭಾರತದ ಯುವ ಆರಂಭಿಕ ಆಟಗಾರ ಶುಬ್ಮನ್ ಗಿಲ್ ಮತ್ತೊಂದು ಸ್ಥಾನ ಮೇಲಕ್ಕೇರಿದ್ದಾರೆ. ಈ ಮೂಲಕ ಶುಬ್ಮನ್ ಗಿಲ್ ಶ್ರೇಯಾಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದ್ದಾರೆ. ವೇಗಿ ಜಸ್ಪ್ರೀತ್ ಬುಮ್ರಾ ಮತ್ತು ಸ್ಪಿನ್ನರ್ ರವಿ ಬಿಷ್ಣೋಯ್ ಟಿ20 ಮಾದರಿಯಲ್ಲಿ ಉತ್ತಮ ಏರಿಕೆ ಕಂಡು ಗಮನಸೆಳೆದಿದ್ದಾರೆ. ಇನ್ನು ಐರ್ಲೆಂಡ್ ಸರಣಿಯ ಮೂಲಕ ಕಮ್‌ಬ್ಯಾಕ್ ಮಾಡಿ ನಾಯಕನಾಗಿ ಮುನ್ನಡೆಸುತ್ತಿರುವ ಬೂಮ್ರಾ ಏಳು ಸ್ಥಾನಗಳ ಏರಿಕೆ ಕಂಡಿದ್ದು 84ನೇ ಸ್ಥಾನಕ್ಕೆ ತಲುಪಿದ್ದರೆ, ಬಿಷ್ಣೋಯ್ 17 ಸ್ಥಾನ ಮೇಲೇರಿ 65ನೇ ಸ್ಥಾನಕ್ಕೆ ತಲುಪಿದ್ದಾರೆ.
ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಮೊದಲ ಏಕದಿನ ಪಂದ್ಯದ ಬಳಿಕ ಐಸಿಸಿ ತನ್ನ ಇತ್ತೀಚಿನ ಶ್ರೇಯಾಂಕ ಬಿಡುಗಡೆಗೊಳಿಸಿದೆ. ಈ ಶ್ರೇಯಾಂಕಪಟ್ಟಿಯಲ್ಲಿ ಶುಬ್ಮನ್ ಗಿಲ್ ಈಗ 743 ರೇಟಿಂಗ್ ಅಂಕಗಳನ್ನು ಪಡೆದುಕೊಂಡಿದ್ದು ಭಾರತದ ಅಗ್ರ ಶ್ರೇಯಾಂಕದ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಇನ್ನು ಐರ್ಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಋತುರಾಜ್ 58 ರನ್ ಗಳಿಸಿದ್ದು ಈ ಪ್ರದರ್ಶನದ ಬಳಿಕ ಋತುರಾಜ್ ಗಾಯಕ್ವಾಡ್ 143 ಸ್ಥಾನಗಳನ್ನು ಮೇಲಕ್ಕೇರಿದ್ದು 87 ನೇ ಸ್ಥಾನಕ್ಕೆ ತಲುಪಿದ್ದಾರೆ. ಇನ್ನು ಐರ್ಲೆಂಡ್ ಸರಣಿಯಿಂದ ಹೊರಗುಳಿದಿದ್ದರೂ ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್‌ನಲ್ಲಿ ಟಿ20ಐ ಮಾದರಿಯ ಅಗ್ರ ಬ್ಯಾಟರ್ ಎನಿಸಿಕೊಂಡಿದ್ದಾರೆ.
ಏಕದಿನ ಮಾದರಿಯಲ್ಲಿ ಪಾಕಿಸ್ತಾನದ ಬಾಬರ್ ಅಜಮ್ ಮತ್ತು ಇಮಾಮ್ ಉಲ್ ಹಕ್ ಕ್ರಮವಾಗಿ ಮೊದಲ ಮತ್ತು ಮೂರನೇ ಸ್ಥಾನಗಳನ್ನು ಆಕ್ರಮಿಸಿಕೊಂಡಿದ್ದಾರೆ. ಇನ್ನು ಭಾರತದ ಪ್ರಮುಖ ದಾಂಡಿಗರಾದ ವಿರಾಟ್ ಕೊಹ್ಲಿ ಒಂಬತ್ತನೇ ಸ್ಥಾನದಲ್ಲಿಯೇ ಮುಂದುವರಿದಿದ್ದು ನಾಯಕ ರೋಹಿತ್ ಶರ್ಮಾ 11 ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.
ಇನ್ನು ಟೆಸ್ಟ್ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾದ ಅನುಭವಿ ಸ್ಪಿನ್ನರ್‌ಗಳಾದ ಆರ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿದ್ದಾರೆ. ಆರ್ ಅಶ್ವಿನ್ ನಂಬರ್1 ಬೌಲರ್ ಆಗಿದ್ದರೆ ರವೀಂದ್ರ ಜಡೇಜಾ ನಂಬರ್ 1 ಆಲ್‌ರೌಂಡರ್ ಆಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications