For Quick Alerts
ALLOW NOTIFICATIONS  
For Daily Alerts
 

ICC Rankings: ಐಸಿಸಿ ರ‍್ಯಾಂಕಿಗ್‌ನಲ್ಲಿ ಭಾರತೀಯ ಬ್ಯಾಟರ್‌ಗಳ ಅಬ್ಬರ: ಗಿಲ್‌ ನಂಬರ್‌ 1, ವಿರಾಟ್‌ಗೆ ಬಡ್ತಿ

ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ಭಾರತೀಯ ಬ್ಯಾಟರ್‌ಗಳು ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಈ ಮೂಲಕ ತಂಡದ ಗೆಲುವಿನಲ್ಲಿ ಮಿಂಚುತ್ತಿದ್ದಾರೆ. ಸ್ಟಾರ್ ಆಟಗಾರರು ಫಾರ್ಮ್‌ಗೆ ಮರಳಿದ್ದು, ಮ್ಯಾನೇಜ್ಮೆಂಟ್ ಮುಖದಲ್ಲಿ ಮಂದಹಾಸ ಮೂಡಿಸಿದೆ. ಇನ್ನು ಟೀಮ್ ಇಂಡಿಯಾದ ನೂತನ ಸೂಪರ್‌ ಸ್ಟಾರ್ ಶುಭಮನ್‌ ಗಿಲ್‌ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ನಂಬರ್‌ ಒನ್ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಇನ್ನು ಸ್ಥಿರ ಪ್ರದರ್ಶನ ನೀಡಿರುವ ವಿರಾಟ್‌ ರ‍್ಯಾಂಕಿಗ್‌ನಲ್ಲಿ ಬಡ್ತಿ ಪಡೆದಿದ್ದಾರೆ.

ಚಾಂಪಿಯನ್ಸ್‌ ಟ್ರೋಫಿಯಲ್ಲಿ ಭಾರತೀಯ ಬ್ಯಾಟರ್‌ಗಳು ಆರ್ಭಟ ನಡೆಸಿದ್ದಾರೆ. ಈ ಟೂರ್ನಿಯಲ್ಲಿ ಭಾರತೀಯ ಬ್ಯಾಟರ್‌ಗಳ ಸ್ಥಿರ ಪ್ರದರ್ಶನದ ಫಲವಾಗಿ ಐಸಿಸಿ ಶ್ರೇಯಾಂಕದಲ್ಲಿ ಬಡ್ತಿ ಪಡೆದಿದ್ದಾರೆ. ಟೀಮ್ ಇಂಡಿಯಾದ ಟಾಪರ್‌ ಆರ್ಡರ್‌ ಬ್ಯಾಟರ್‌ಗಳ ಅಮೋಘ ಆಟದ ಫಲವಾಗಿ ಐಸಿಸಿ ನೂತನ ಶ್ರೇಯಾಂಕದಲ್ಲಿ ಲಾಭ ಪಡೆದಿದ್ದಾರೆ.

ICC Rankings Shubman Gill Retains No 1 Spot Virat Kohli Moves Up After Century Against Pakistan

ಚಾಂಪಿಯನ್ಸ್‌ ಟ್ರೋಫಿಯ ಪಂದ್ಯದಲ್ಲಿ ಟೀಮ್ ಇಂಡಿಯಾದ ಆರಂಭಿಕ ಶುಭಮನ್‌ ಗಿಲ್‌ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ಇವರು ಬಾಂಗ್ಲಾದೇಶ ವಿರುದ್ಧದ ಮೊದಲ ಪಂದ್ಯದಲ್ಲಿ ಶತಕ ಬಾರಿಸಿ ಅಬ್ಬರಿಸಿದರು. ಅಲ್ಲದೆ ತಂಡದ ಗೆಲುವಿನಲ್ಲಿ ಮಿಂಚಿದರು. ದುಬೈನಲ್ಲಿ ನಡೆದ ಪಂದ್ಯದಲ್ಲಿ 229 ರನ್‌ಗಳ ಗುರಿಯನ್ನು ಬೆನ್ನಟ್ಟುವಾಗ ಶುಭಮನ್‌ ಗಿಲ್‌ ಕ್ಲಾಸಿಕ್‌ ಬ್ಯಾಟಿಂಗ್ ನಡೆಸಿ ಶತಕ ಸಿಡಿಸಿದರು. ಇವರು 129 ಎಸೆತಗಳಲ್ಲಿ 9 ಬೌಂಡರಿ, 2 ಸಿಕ್ಸರ್ ಸಹಾಯದಿಂದ ಅಜೇಯ 101 ರನ್‌ ಬಾರಿಸಿ ಅಬ್ಬರಿಸಿದರು.

ಬಾಬರ್‌ಕ್ಕಿಂತ 47 ಅಂಕ ಮುನ್ನಡೆ

ಐಸಿಸಿ ಶ್ರೇಯಾಂಕದಲ್ಲಿ ನಂಬರ್ 1 ಸ್ಥಾನವನ್ನು ಪಡೆದಿರುವ ಶುಭಮನ್‌ ಗಿಲ್‌ ತಮ್ಮ ಬುಟ್ಟಿಯಲ್ಲಿ 817 ಅಂಕಗಳನ್ನು ಕಲೆ ಹಾಕಿದ್ದಾರೆ. ಇವರು ಎರಡನೇ ಸ್ಥಾನದಲ್ಲಿರುವ ಬಾಬರ್ ಅಜಮ್‌ ಅವರಿಗಿಂತ 47 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ರನ್‌ ಕಲೆ ಹಾಕುವಲ್ಲಿ ಹಿಂದೆ ಬಿದ್ದಿರುವ ಪಾಕ್‌ನ ಬಾಬಾರ್‌ ಅಜಮ್‌ 770 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.

ಚಾಂಪಿಯನ್ಸ್‌ ಟ್ರೋಫಿ ಪಂದ್ಯದಲ್ಲಿ ಬಿಗ್‌ ಇನಿಂಗ್ಸ್ ಕಟ್ಟದೇ ಇದ್ದರೂ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಇವರು ಸದ್ಯ 757 ಅಂಕಗಳೊಂದಿಗೆ ಐಸಿಸಿ ಶ್ರೇಯಾಂಕದಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

ICC Rankings Shubman Gill Retains No 1 Spot Virat Kohli Moves Up After Century Against Pakistan

ಪಾಕ್‌ ವಿರುದ್ಧ ಶತಕದ ಲಾಭ

ಚೇಸಿಂಗ್ ಸ್ಟಾರ್ ಖ್ಯಾತಿಯ ವಿರಾಟ್ ಕೊಹ್ಲಿ ಪಾಕಿಸ್ತಾನ ವಿರುದ್ಧ ಲೀಗ್‌ ಹಂತದ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರು 111 ಎಸೆತಗಳಲ್ಲಿ 7 ಬೌಂಡರಿ ನೆರವಿನಿಂದ ಅಜೇಯ 100 ರನ್‌ ಬಾರಿಸಿ ಅಬ್ಬರಿಸಿದರು. ಇವರ ಆರ್ಭಟದ ಆಟದ ನೆರವಿನಿಂದ ಐಸಿಸಿ ಶ್ರೇಯಾಂಕದಲ್ಲೂ ಇವರಿಗೆ ಲಾಭವಾಗಿದೆ. ಇವರು ಒಂದು ಸ್ಥಾನ ಬಡ್ತಿ ಪಡೆದಿದ್ದು ಐದನೇ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ. ಇನ್ನು ಟೀಮ್ ಇಂಡಿಯಾ ಮಧ್ಯಮ ಕ್ರಮಾಂಕದ ಶ್ರೇಯಸ್‌ ಅಯ್ಯರ್‌ ಸ್ಥಿರ ಪ್ರದರ್ಶನ ನೀಡಿದ್ದು 679 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಒಂಬತ್ತನೇ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಕನ್ನಡಿಗ ಕೆಎಲ್‌ ರಾಹುಲ್‌ 15ನೇ ಸ್ಥಾನವನ್ನು ಹೊಂದಿದ್ದಾರೆ.

ಟಾಪ್‌ 10ರಲ್ಲಿ ಒಬ್ಬನೇ ಬೌಲರ್‌

ಟೀಮ್ ಇಂಡಿಯಾದ ಚೈನಾ ಮೆನ್ ಬೌಲರ್‌ ಕುಲ್‌ದೀಪ್‌ ಯಾದವ್ ಐಸಿಸಿ ಏಕದಿನ ಬೌಲರ್‌ಗಳ ಶ್ರೇಯಾಂಕದಲ್ಲಿ ಮೂರನೇ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಇವರು ಪಾಕ್‌ ವಿರುದ್ಧ ಸ್ಥಿರ ಪ್ರದರ್ಶನ ನೀಡಿ ಮೂರು ವಿಕೆಟ್‌ ಪಡೆದಿದ್ದರು. ಇವರೊಬ್ಬರೇ ಭಾರತದ ಪರ ಬೌಲರ್‌ಗಳ ಪಟ್ಟಿಯಲ್ಲಿ ಟಾಪ್‌ 10ರಲ್ಲಿ ಸ್ಥಾನ ಪಡೆದ ಬೌಲರ್‌. ಇವರನ್ನು ಬಿಟ್ಟಂತೆ ಮೊಹಮ್ಮದ್‌ ಸಿರಾಜ್‌ 2 ಸ್ಥಾನ ಕಳೆದುಕೊಂಡಿದ್ದು 12ನೇ ಸ್ಥಾನ, ರವೀಂದ್ರ ಜಡೇಜಾ 13, ಬಾಂಗ್ಲಾದೇಶ ವಿರುದ್ಧ ಐದು ವಿಕೆಟ್ ಸಾಧನೆ ಮಾಡಿರುವ ಮೊಹಮ್ಮದ್ ಶಮಿ 14ನೇ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.

Story first published: Wednesday, February 26, 2025, 15:13 [IST]
Other articles published on Feb 26, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+