Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಒಡಿಐ ನಂ.1 ಸ್ಥಾನಿ ವಿರಾಟ್ ಕೊಹ್ಲಿ ಬೆನ್ನ ಹಿಂದೆಯೇ ಇದ್ದಾರೆ ಹಿಟ್‌ಮ್ಯಾನ್!

ICC rankings: Virat Kohli and Rohit Sharma occupy top two spots in ODI

ನವದೆಹಲಿ: ಪ್ರಸ್ತುತ ಏಕದಿನ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಶ್ರೇಷ್ಠ ಬ್ಯಾಟ್ಸ್‌ಮನ್ ಅಂತ ಕ್ರಿಕೆಟ್‌ ಜಗತ್ತು ಮಾತನಾಡುತ್ತಿದೆ. ಅನೇಕ ಕ್ರಿಕೆಟ್ ದಂತಕತೆಗಳೂ ಕೂಡ ಒಡಿಐನಲ್ಲಿ ಕೊಹ್ಲಿ ಬೆಸ್ಟ್ ಎಂದು ಒಪ್ಪಿಕೊಂಡಿದ್ದಾರೆ. ಏಕದಿನದಲ್ಲಿ ಕೊಹ್ಲಿ ನಿರ್ಮಿಸಿರುವ ದಾಖಲೆಗಳು, ಮಾಡಿರುವ ಸಾಧನೆಗಳು ಇದನ್ನೆಲ್ಲ ಒಪ್ಪಿಕೊಳ್ಳುವಂತೆ ಮಾಡುತ್ತಿದೆ. ಆದರೆ ಸದ್ಯ ಒಡಿಐ ನಂ.1 ಸ್ಥಾನದಲ್ಲಿರುವ ಕೊಹ್ಲಿಯನ್ನು ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಮೀರಿಸುವುದರಲ್ಲಿದ್ದಾರೆ.

ಹೌದು. ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಅಗ್ರ ಶ್ರೇಯಾಂಕಿತ ಕಿಂಗ್ ಕೊಹ್ಲಿಯನ್ನು ರೋಹಿತ್ ಶರ್ಮಾ ಶೀಘ್ರ ಮೀರಿಸಿದರೂ ಅಚ್ಚರಿಯಿಲ್ಲ. ಯಾಕೆಂದರೆ ಐಸಿಸಿ ನೂತನ ಏಕದಿನ ರ್‍ಯಾಂಕಿಂಗ್‌ನಲ್ಲಿ ರೋಹಿತ್ ಶರ್ಮಾ ಅವರು ವಿರಾಟ್ ಬೆನ್ನ ಹಿಂದೆಯೇ ಇದ್ದಾರೆ.

ಸದ್ಯದ ಐಸಿಸಿ ಒಡಿಐ ಶ್ರೇಯಾಂಕದಲ್ಲಿ ರನ್ ಮಷಿನ್ ವಿರಾಟ್ ಕೊಹ್ಲಿ ನಂ.1 ಸ್ಥಾನದಲ್ಲಿದ್ದರೆ, ರೋಹಿತ್ ಶರ್ಮಾ ದ್ವಿತೀಯ ಸ್ಥಾನದಲ್ಲಿದ್ದಾರೆ.

ಆಸೀಸ್ ಸರಣಿ ಆಡದೆಯೂ ರೋಹಿತ್ ನಂ.2

ಆಸೀಸ್ ಸರಣಿ ಆಡದೆಯೂ ರೋಹಿತ್ ನಂ.2

ಸದ್ಯ ಆಸ್ಟ್ರೇಲಿಯಾ ಮತ್ತು ಭಾರತದ ಮಧ್ಯೆ ಪ್ರವಾಸ ಸರಣಿ ನಡೆಯುತ್ತಿದೆ. ಏಕದಿನ ಸರಣಿಯ ಆರಂಭಿಕ ಎರಡು ಪಂದ್ಯಗಳಲ್ಲಿ ಆಡಿದ್ದ ವಿರಾಟ್ ಕೊಹ್ಲಿ ಕ್ರಮವಾಗಿ 89, 63 ರನ್ ಗಳಿಸಿದ್ದರು. ಇದು ನಂ.1 ಸ್ಥಾನಕ್ಕೆ ಗಟ್ಟಿಯಾಗಲು ಕೊಹ್ಲಿಗೆ ಸಹಕಾರಿಯಾಗಿತ್ತು. ಆದರೆ ಇತ್ತಂಡಗಳ ನಡುವಿನ ಏಕದಿನ ಮತ್ತು ಟಿ20ಐ ಸರಣಿಯಲ್ಲಿ ರೋಹಿತ್ ಆಡಿಯೇ ಇಲ್ಲ. ಆದರೂ ನಂ.2 ಸ್ಥಾನದಲ್ಲಿ ರೋಹಿತ್ ಉಳಿದುಕೊಂಡಿದ್ದಾರೆ.

28 ಪಾಯಿಂಟ್ಸ್‌ ಮಾತ್ರ ವ್ಯತ್ಯಾಸ

28 ಪಾಯಿಂಟ್ಸ್‌ ಮಾತ್ರ ವ್ಯತ್ಯಾಸ

ಒಡಿಐ ನಂ.1 ಸ್ಥಾನಿ ವಿರಾಟ್ ಕೊಹ್ಲಿ ಮತ್ತು ನಂ.2 ಸ್ಥಾನಿ ರೋಹಿತ್ ಶರ್ಮಾ ಮಧ್ಯೆ 28 ಪಾಯಿಂಟ್ಸ್‌ ಮಾತ್ರ ವ್ಯತ್ಯಾಸವಿದೆ. ಕೊಹ್ಲಿ 870 ಅಂಕ ಗಳಿಸಿದ್ದರೆ, ರೋಹಿತ್ ಖಾತೆಯಲ್ಲಿ 842 ಅಂಕಗಳಿವೆ. ತೃತೀಯ ಸ್ಥಾನದಲ್ಲಿರುವ ಪಾಕಿಸ್ತಾನದ ಬಾಬರ್ ಅಝಾಮ್ 837, 4ನೇ ಸ್ಥಾನಿ ನ್ಯೂಜಿಲೆಂಡ್‌ನ ರಾಸ್ ಟೇಲರ್ 818, 5ನೇ ಸ್ಥಾನಿ ಆಸ್ಟ್ರೇಲಿಯಾದ ಆ್ಯರನ್ ಫಿಂಚ್ 791 ಅಂಕಗಳನ್ನು ಕಲೆ ಹಾಕಿದ್ದಾರೆ.

ಟಾಪ್‌ 3ರಲ್ಲಿ ಜಸ್‌ಪ್ರೀತ್ ಬೂಮ್ರಾ

ಟಾಪ್‌ 3ರಲ್ಲಿ ಜಸ್‌ಪ್ರೀತ್ ಬೂಮ್ರಾ

ಏಕದಿನ ಕ್ರಿಕೆಟ್ ಬೌಲಿಂಗ್ ರ್‍ಯಾಂಕಿಂಗ್‌ನಲ್ಲಿ 1. ಟ್ರೆಂಟ್ ಬೌಲ್ಟ್ (ನ್ಯೂಜಿಲೆಂಡ್, 722 ಪಾಯಿಂಟ್ಸ್‌), 2. ಮುಜೀಬ್ ಉರ್ ರಹ್ಮಾನ್ (ಅಫ್ಘಾನಿಸ್ಥಾನ, 701), 3. ಜಸ್‌ಪ್ರೀತ್ ಬೂಮ್ರಾ (ಭಾರತ, 700), 4. ಕ್ರಿಸ್ ವೋಕ್ಸ್ (ಇಂಗ್ಲೆಂಡ್), 5. ಕಾಗಿಸೊ ರಬಾಡ (ದಕ್ಷಿಣ ಆಫ್ರಿಕಾ) ಇದ್ದಾರೆ.

ಆಲ್‌ ರೌಂಡರ್‌ಗಳಲ್ಲಿ ಶಕೀಬ್ ನಂ.1

ಆಲ್‌ ರೌಂಡರ್‌ಗಳಲ್ಲಿ ಶಕೀಬ್ ನಂ.1

ಏಕದಿನ ಆಲ್‌ ರೌಂಡರ್‌ಗಳಲ್ಲಿ 1. ಶಕೀಬ್ ಅಲ್ ಹಸನ್ (ಬಾಂಗ್ಲಾದೇಶ, 373 ಪಾಯಿಂಟ್ಸ್‌), 2. ಮೊಹಮ್ಮದ್ ನಬಿ (ಅಫ್ಘಾನಿಸ್ತಾನ, 301), 3. ಕ್ರಿಸ್ ವೋಕ್ಸ್ (ಇಂಗ್ಲೆಂಡ್, 281), 4 ಬೆನ್ ಸ್ಟೋಕ್ಸ್ (ಇಂಗ್ಲೆಂಡ್), 5. ಇಮಾದ್ ವಾಸಿಮ್ (ಪಾಕಿಸ್ತಾನ) ಇದ್ದಾರೆ.

Story first published: Thursday, December 10, 2020, 18:48 [IST]
Other articles published on Dec 10, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+