ಕೊಹ್ಲಿ ಇಸ್ ಕಿಂಗ್ : ಐಸಿಸಿ ಶ್ರೇಯಾಂಕದಲ್ಲಿ ಅಗ್ರಸ್ಥಾನ, ದಾಖಲೆ ಅಂಕ ಗಳಿಕೆ

ಲಂಡನ್, ಸೆಪ್ಟೆಂಬರ್ 03: ಅತಿಥೇಯ ಇಂಗ್ಲೆಂಡ್ ಹಾಗೂ ಭಾರತ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಆಟಗಾರರ ಶ್ರೇಯಾಂಕ ಪಟ್ಟಿ ಪ್ರಕಟಿಸಿದೆ. ಟೀಂ ಇಂಡಿಯಾ ನಾಯಕ ಕೊಹ್ಲಿ ತಮ್ಮ ಅಗ್ರಸ್ಥಾನವನ್ನು ಕಾಯ್ದುಕೊಂಡಿದ್ದಾರೆ.
29 ವರ್ಷ ವಯಸ್ಸಿನ ಕೊಹ್ಲಿ ಅವರು ಮೂರನೇ ಟೆಸ್ಟ್ ಪಂದ್ಯದಲ್ಲಿ 97 ಹಾಗೂ 103ರನ್ ಗಳಿಸಿ, ತಂಡಕ್ಕೆ ಗೆಲುವು ದಾಖಲಿಸಲು ನೆರವಾಗಿದ್ದರು. ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ 203ರನ್ ಗಳಿಂದ ಗೆಲುವು ಸಾಧಿಸಿತ್ತು. ಆದರೆ, ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 60 ರನ್ ಗಳಿಂದ ಸೋಲು ಕಂಡ ಭಾರತವು ಐದು ಪಂದ್ಯಗಳ ಸರಣಿಯನ್ನು 3-1ರಲ್ಲಿ ಕಳೆದುಕೊಂಡಿದೆ.
ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ 46 ಹಾಗೂ 58ರನ್ ಗಳಿಸಿದ ಕೊಹ್ಲಿ ಅವರು 937 ರೇಟಿಂಗ್ ಅಂಕಗಳನ್ನು ಗಳಿಸಿ ಅಗ್ರಸ್ಥಾನವನ್ನು ಉಳಿಸಿಕೊಂಡರು.
ಬರ್ಮಿಂಗ್ ಹ್ಯಾಮ್ ಟೆಸ್ಟ್ ನಂತರ ಅಗ್ರಸ್ಥಾನಕ್ಕೇರಿದ್ದ ಕೊಹ್ಲಿ ಅವರು, ಲಾರ್ಡ್ಸ್ ಟೆಸ್ಟ್ ನಂತರ ಕೆಳಗಿಳಿದಿದ್ದರು. ಆದರೆ, ಈಗಾಗಲೇ ಸರಣಿಯಲ್ಲಿ 8 ಇನ್ನಿಂಗ್ಸ್ ನಲ್ಲಿ 544 ರನ್ ದಾಖಲಿಸಿರುವ ಕೊಹ್ಲಿ ಅವರು ಅತಿಹೆಚ್ಚು ರೇಟಿಂಗ್ ದಾಖಲಿಸಿದ ದಿಗ್ಗಜರ ಪಟ್ಟಿಯಲ್ಲಿ 11ನೇ ಸ್ಥಾನದಲ್ಲಿದ್ದಾರೆ.

ದಿಗ್ಗಜರ ಪಟ್ಟಿಯಲ್ಲಿ 11ನೇ ಸ್ಥಾನ
* ಡಾನ್ ಬ್ರಾಡ್ಮನ್ (961 ಅಂಕಗಳು)
*ಸ್ಟೀವ್ ಸ್ಮಿತ್ (947)
* ಲೆನ್ ಹಟನ್ (945)
* ಜಾಕ್ ಹಾಬ್ಸ್ (942)
* ರಿಕಿ ಪಾಂಟಿಂಗ್(942)
* ಪೀಟರ್ ಮೇ(941)
* ಗ್ಯಾರಿ ಸೋಬರ್ಸ್, ಕ್ಲೈಡ್ ವಾಲ್ಕಾಟ್, ವಿವಿಯನ್ ರಿಚರ್ಡ್ಸ್ ಹಾಗೂ ಸಂಗಕ್ಕಾರ (938)
* ವಿರಾಟ್ ಕೊಹ್ಲಿ (937 ಅಂಕಗಳು)

ಸೆಪ್ಟೆಂಬರ್ 02ರಂದು ಐಸಿಸಿ ಶ್ರೇಯಾಂಕ
1. ವಿರಾಟ್ ಕೊಹ್ಲಿ 937 ಅಂಕಗಳು
2. ಸ್ಟೀವ್ ಸ್ಮಿತ್ 929 ಅಂಕಗಳು
3. ಕೇನ್ ವಿಲಿಯಮ್ಸನ್ 847
4. ಡೇವಿಡ್ ವಾರ್ನರ್ 820
5. ಜೋ ರೂಟ್ 809

ಐಸಿಸಿ ಶ್ರೇಯಾಂಕದಲ್ಲಿ ಬೌಲರ್ಸ್
ಭಾರತ ಹಾಗೂ ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದ ನಂತರ ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ಬೌಲರ್ಸ್:
1. ಜೇಮ್ಸ್ ಆಂಡರ್ಸನ್ 896
2. ಕಾಗಿಸೋ ರಬಾಡಾ 882
3. ರವೀಂದ್ರ ಜಡೇಜ 832
4. ವೆರ್ನಾನ್ ಫಿಲ್ಯಾಂಡರ್ 826
5. ಪ್ಯಾಟ್ ಕುಮಿನ್ಸ್ 800

ಆಲ್ ರೌಂಡರ್ಸ್
1.ಶಕೀಬ್ ಅಲ್ ಹಸನ್ 420
2. ವೆರ್ನಾನ್ ಫಿಲ್ಯಾಂಡರ್
3. ರವೀಂದ್ರ ಜಡೇಜ 363
4. ಜಾಸನ್ ಹೋಲ್ಡರ್ 354
5. ಆರ್ ಅಶ್ವಿನ್ 351
ಜಡೇಜ ಹಾಗೂ ಅಶ್ವಿನ್ ಇಬ್ಬರೂ ರೇಟಿಂಗ್ ಕಳೆದುಕೊಂಡರೂ ಟಾಪ್ 5 ಪಟ್ಟಿಯಲ್ಲಿ ಸ್ಥಾನ ಉಳಿಸಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications