For Quick Alerts
ALLOW NOTIFICATIONS  
For Daily Alerts
 

T20 World Cup: ಟಿ20 ವಿಶ್ವಕಪ್‌ಗೆ ಮುಂಚಿತವಾಗಿ ಕೋವಿಡ್-19 ನಿಯಮ ಸಡಿಲಿಸಿದ ಐಸಿಸಿ

ICC Relaxes COVID Rules For T20 World Cup 2022, Know The Details Of New Rules

ಆಸ್ಟ್ರೇಲಿಯಾದಲ್ಲಿ ಪುರುಷರ ಟಿ20 ವಿಶ್ವಕಪ್‌ಗೆ ಮುಂಚಿತವಾಗಿ, ಕೋವಿಡ್-19 ನಿಯಮಗಳನ್ನು ಕ್ರೀಡೆಯ ಜಾಗತಿಕ ನಿಯಂತ್ರಣ ಸಂಸ್ಥೆಯಾದ ಇಂಟರ್‌ನ್ಯಾಶನಲ್ ಕ್ರಿಕೆಟ್ ಕೌನ್ಸಿಲ್ (ICC) ಸಡಿಲಿಸಿದೆ. ಪಾಸಿಟಿವ್ ಬಂದಿರುವ ಆಟಗಾರರು ಕೂಡ ಸ್ಪರ್ಧಿಸಲು ಅನುಮತಿಸಲಾಗುವುದು ಎಂದು ಹೇಳಲಾಗಿದೆ.

ಸ್ಪರ್ಧೆಯ ಸಮಯದಲ್ಲಿ ಯಾವುದೇ ಕಡ್ಡಾಯ ಪರೀಕ್ಷೆ ಇರುವುದಿಲ್ಲ ಮತ್ತು ಆಟಗಾರರು ಕೋವಿಡ್ ಸೋಂಕಿಗೆ ತುತ್ತಾದರೆ ಐಸೋಲೇ‍ಷನ್‌ನಲ್ಲಿ ಇರುವಂತೆ ನಿಯಮ ಇರುವುದಿಲ್ಲ ಎಂದು ಐಸಿಸಿ ಹೇಳುತ್ತದೆ. ಕ್ರಿಕೆಟ್ ಆಸ್ಟ್ರೇಲಿಯಾ. ಕಾಮ್ ವರದಿಯ ಪ್ರಕಾರ ಕೋವಿಡ್-19 ಸೋಂಕಿಗೆ ತುತ್ತಾದರೆ, ಅವರು ಆಡಬೇಕಾ ಬೇಡವಾ ಎಂದು ನಿರ್ಧರಿಸುವ ಜವಾಬ್ದಾರಿಯನ್ನು ತಂಡದ ವೈದ್ಯರಿಗೆ ವಹಿಸಲಾಗಿದೆ. ಈ ವಾರ, ಆಸ್ಟ್ರೇಲಿಯಾದ ಫೆಡರಲ್ ಸರ್ಕಾರವು ವಿಧಿಸಿದ ಕಡ್ಡಾಯವಾದ ಕೋವಿಡ್-19 ಪ್ರತ್ಯೇಕತೆಯ ನಿಯಮಗಳು ಕೊನೆಗೊಂಡಿವೆ.

ಆಟಗಾರರಿಗೆ ಪಾಸಿಟಿವ್ ಬಂದರೆ ತಂಡದಲ್ಲಿ ಬದಲಾವಣೆಗಳನ್ನು ಅನುಮತಿ ನೀಡಲಾಗುತ್ತದೆ. ತಂಡದ ಆಟಗಾರನು ಚೇತರಿಸಿಕೊಂಡು, ಸೋಂಕಿನಿಂದ ಗುಣಮುಖನಾದ ನಂತರ ಅವರು ಆಟಕ್ಕೆ ಮರಳು ಅನುಮತಿ ನೀಡಲಾಗುತ್ತದೆ.

ಈ ವರ್ಷದ ಆರಂಭದಲ್ಲಿ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಇದೇ ರೀತಿಯ ನಿಲುವನ್ನು ಅಳವಡಿಸಿಕೊಂಡಿತು. ಕೋವಿಡ್‌ ಸೋಂಕಿತ ಜನರನ್ನು ಕೇಸ್-ಬೈ-ಕೇಸ್ ಆಧಾರದ ಮೇಲೆ ನಿರ್ವಹಿಸಲಾಗುತ್ತದೆ ಮತ್ತು ಭಾಗವಹಿಸುವಿಕೆಯಿಂದ ಅಗತ್ಯವಾಗಿ ನಿರ್ಬಂಧಿಸಲಾಗುವುದಿಲ್ಲ.

ಕೋವಿಡ್ ಇದ್ದರೂ ಕ್ರಿಕೆಟ್ ಆಡಿದ್ದ ಮೆಕ್‌ಗ್ರಾತ್

ಆಗಸ್ಟ್‌ನಲ್ಲಿ ನಡೆದ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಫೈನಲ್ ಪಂದ್ಯಕ್ಕೆ ಮುನ್ನ ಆಸ್ಟ್ರೇಲಿಯಾದ ಕ್ರಿಕೆಟರ್ ಮೆಕ್‌ಗ್ರಾತ್ ಕೋವಿಡ್-19 ಸೋಂಕಿಗೆ ತುತ್ತಾಗಿರುವುದು ಗೊತ್ತಾಯಿತು. ಆದರೂ, ಆಕೆಗೆ ಆಡಲು ಅನುಮತಿ ನೀಡಲಾಯಿತು.

ಮೆಕ್‌ಗ್ರಾತ್ ಮೈದಾನದ ಹೊರಗೆ ಇರುವಾಗ ಮಾಸ್ಕ್‌ ಧರಿಸಿದ್ದಳು ಮತ್ತು ಅವರು ಬ್ಯಾಟಿಂಗ್ ಮಾಡುವಾಗ ಸಹ ಆಟಗಾರರಿಂದ ದೂರ ಕುಳಿತುಕೊಂಡರು. ನಂತರ ಆಸ್ಟ್ರೇಲಿಯಾ ಭಾರತವನ್ನು ಸೋಲಿಸಿದ ನಂತರ ಸಂಭ್ರಮಾಚರಣೆಯಲ್ಲಿ ಅವರು ಪಾಲ್ಗೊಂಡರು.

ICC Relaxes COVID Rules For T20 World Cup 2022, Know The Details Of New Rules

ಟಿ20 ವಿಶ್ವಕಪ್‌ನಲ್ಲಿ 16 ತಂಡಗಳು

ಎಂಟನೇ ಐಸಿಸಿ ಪುರುಷರ ಟಿ20 ವಿಶ್ವಕಪ್ ಇನ್ನೂ ದೊಡ್ಡದಾಗಿದೆ ಮತ್ತು ಅತ್ಯುತ್ತಮವಾಗಿದೆ, 16 ತಂಡಗಳು ಅಕ್ಟೋಬರ್ 16 ರಿಂದ ನವೆಂಬರ್ 13 ರವರೆಗೆ ಆಸ್ಟ್ರೇಲಿಯಾದ ಏಳು ನಗರಗಳಲ್ಲಿ 45 ಪಂದ್ಯಗಳನ್ನು ಆಡುತ್ತವೆ.

ಐಸಿಸಿ ಪುರುಷರ ಟಿ20 ವಿಶ್ವಕಪ್ 2022 ರ ಸಮಯದಲ್ಲಿ ಆಸ್ಟ್ರೇಲಿಯಾದಾದ್ಯಂತ ಏಳು ಸ್ಥಳಗಳನ್ನು ಬಳಸಲಾಗುವುದು, ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಫೈನಲ್ ಪಂದ್ಯವನ್ನು ಆಯೋಜಿಸುತ್ತದೆ ಮತ್ತು ಸೆಮಿಫೈನಲ್‌ ಪಂದ್ಯಗಳು ಅಡಿಲೇಡ್ ಓವಲ್ ಮತ್ತು ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಆಡಲಾಗುತ್ತದೆ.

ಬ್ರಿಸ್ಬೇನ್‌ನ ಗಬ್ಬಾ, ಗೀಲಾಂಗ್‌ನ ಕಾರ್ಡಿನಿಯಾ ಪಾರ್ಕ್, ಹೊಬಾರ್ಟ್‌ನ ಬೆಲ್ಲೆರಿವ್ ಓವಲ್ ಮತ್ತು ಪರ್ತ್ ಸ್ಟೇಡಿಯಂ ಇತರ ಆತಿಥೇಯ ಸ್ಥಳಗಳಾಗಿವೆ.

Story first published: Sunday, October 16, 2022, 19:39 [IST]
Other articles published on Oct 16, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+