ICC ಮಾಸ್ಟರ್ ಪ್ಲ್ಯಾನ್: ಟೆಸ್ಟ್ ಆಡಲು ಆಟಗಾರರ ಕ್ಯೂ
ಟೆಸ್ಟ್ ಕ್ರಿಕೆಟ್ ಉತ್ತೇಜಿಸಲು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಹೊಸ ಪ್ಲ್ಯಾನ್ ಹಾಕಿಕೊಂಡಿದೆ. ಟೆಸ್ಟ್ ಪಂದ್ಯಗಳನ್ನು ನೋಡಲು ಜನ ಸಹ ಕಡಿಮೆ ಬರುತ್ತಿದ್ದಾರೆ. ಇದರ ಪ್ರಾಮುಖ್ಯತೆ ಕಡಿಮೆ ಆದಂತೆ ಕಂಡು ಬರುತ್ತಿದೆ. ಇದನ್ನು ಮನಗೊಂಡ ಐಸಿಸಿ ಹೊಸ ಪ್ಲ್ಯಾನ್ ಸಿದ್ಧ ಪಡಿಸಿದ್ದು, ಒಂದು ವೇಳೆ ಈ ಪ್ಲ್ಯಾನ್ ಸಕ್ಸಸ್ ಆದಲ್ಲಿ ಆಟಗಾರರು ಟಿ20 ಲೀಗ್‌ಗಳಂತೆ ಟೆಸ್ಟ್ ಕ್ರಿಕೆಟ್ ಆಡಲು ಓಡಿ ಓಡಿ ಬರುವುದನ್ನು ಕಾಣಬಹುದು.
ವಿಶ್ವದಲ್ಲೇ ಸೀಮಿತ ಓವರ್‌ಗಳ ಪಂದ್ಯಗಳು ಹೆಚ್ಚಾಗಿ ನಡೆಯುತ್ತಿವೆ. ಕ್ರಿಕೆಟ್‌ನ ಅಸಲಿ ಮಜಾ ಅಂದ್ರೆನೆ ಟೆಸ್ಟ್. ಈ ಫಾರ್ಮೆಟ್ ತನ್ನ ಪ್ರಾಮುಖ್ಯತೆ ಕಳೆದುಕೊಳ್ಳುತ್ತಿದೆ ಎಂದು ಎಲ್ಲರು ಭಾವಿಸಿದ್ದರು. ಇದೇ ಕ್ರಿಕೆಟ್‌ನ ಕ್ಲಾಸ್ ರೂಮ್ ಎಂದು ಅರಿತುಕೊಂಡಿರುವ ಐಸಿಸಿ, ಈಗ ಹೊಸ ಯೋಜನೆ ರೂಪಿಸಲು ಸಿದ್ಧತೆ ನಡೆಸಿದೆ. ಟೆಸ್ಟ್ ಕ್ರಿಕೆಟ್ ಆಡಲು ಸಹ ಕ್ಯೂ ನಿಲ್ಲುವಂತೆ ಐಸಿಸಿ ಮೆಗಾ ಪ್ಲ್ಯಾನ್ ಸಿದ್ಧ ಪಡಿಸಿಕೊಂಡಿದೆ.

ಐಸಿಸಿ ಮಾಡಿಕೊಂಡ ಪ್ಲ್ಯಾನ್ ಏನು?
ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಟೆಸ್ಟ್ ಕ್ರಿಕೆಟ್‌ಗೆ ಪ್ರತ್ಯೇಕ ಹಣವನ್ನು ಎತ್ತಿ ಇಡಲು ಸಿದ್ಧತೆ ನಡೆಸಿದೆ. ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ವರದಿಯ ಪ್ರಕಾರ, ಐಸಿಸಿ ಟೆಸ್ಟ್‌ಗಾಗಿ ಕನಿಷ್ಠ 150 ಯುಎಸ್ ಡಾಲರ್ ಹಣವನ್ನು ಮೀಸಲಿಡಲು ಚಿಂತನೆ ನಡೆಸಿದೆ. ಇದರಿಂದ ನಿಶ್ಚಿತವಾಗಿ ಆಟಗಾರರ ಪಂದ್ಯದ ಶುಲ್ಕ ಸಹ ಹೆಚ್ಚಾಗುತ್ತದೆ. ಈ ಬಗ್ಗೆ ಕ್ರಿಕೆಟ್ ಆಸ್ಟ್ರೇಲಿಯಾ ಐಸಿಸಿಗೆ ಮನವಿಯನ್ನು ಮಾಡಿಕೊಂಡಿದೆ. ಈ ಮನವಿಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹಾಗೂ ಇಸಿಬಿ ಮಂಡಳಿಯ ಒಪ್ಪಿಗೆ ಸಹ ಸಿಕ್ಕಿದೆ ಎಂದು ತಿಳಿದು ಬಂದಿದೆ.
ಹೊಸ ಪ್ಲ್ಯಾನ್ ಬಂದರೆ ಏನು ಲಾಭ?
ಸದ್ಯ ವಿಶ್ವದಲ್ಲಿ ಹಲವು ಲೀಗ್‌ಗಳಲ್ಲಿ ಕ್ರಿಕೆಟ್ ಆಟಗಾರರು ಆಡುತ್ತಾರೆ. ಇದರಿಂದ ಹೆಚ್ಚು ಹಣವನ್ನು ಗಳಿಸುತ್ತಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಈ ಲೀಗ್‌ಗಳಿಗೆ ಹೋಲಿಸಿದರೆ ಕಡಿಮೆ ಸಂಭಾವನೆ ನೀಡಲಾಗುತ್ತದೆ. ಹೀಗಾಗಿಯೇ ಆಟಗಾರರು ಹೆಚ್ಚಾಗಿ ಲೀಗ್‌ಗಳತ್ತ ಮುಖ ಮಾಡಿದ್ದಾರೆ. ಇದನ್ನು ಅರಿತು ಕೊಂಡು ಐಸಿಸಿ ಮಾಸ್ಟರ್ ಪ್ಲ್ಯಾನ್ ಮಾಡಿಕೊಂಡಿದೆ.
ವರದಿಯಲ್ಲಿ ಏನಿದೆ?
ಐಸಿಸಿಗೆ ಸಲ್ಲಿಸಿದ ಮನವಿಯಲ್ಲಿ ಹಲವು ಬೇಡಿಕೆಗಳನ್ನು ಇಡಲಾಗಿದೆ. ಇದರಲ್ಲಿ ಆಟಗಾರರ ಸುರಕ್ಷತೆ ಹಾಗೂ ಆರ್ಥಿಕ ಭದ್ರತೆಯ ಬಗ್ಗೆಯೂ ಗಮನ ಹರಿಸಲಾಗಿದೆ. ಎಲ್ಲಾ ಆಟಗಾರರಿಗೆ ಸುಮಾರು 10000 ಡಾಲರ್‌ಗಳಷ್ಟು ಕನಿಷ್ಠ ಹಣವನ್ನು ಖಾತ್ರಿ ಪಡಿಸಲಾಗುತ್ತದೆ. ಇದಲ್ಲದೆ, ಟೆಸ್ಟ್ ಕ್ರಿಕೆಟ್ ಆಡಲು ಹೆಣಗಾಡುತ್ತಿರುವ ದೇಶಗಳ, ವಿದೇಶಿ ಪ್ರವಾಸಗಳ ವೆಚ್ಚವನ್ನು ಸಹ ಭರಿಸಬೇಕು ಎಂದು ಮನವಿ ಸಲ್ಲಿಸಲ್ಲಾಗಿತ್ತು. ಈ ನಿಟ್ಟಿನಲ್ಲಿ ಐಸಿಸಿ ಹಲವು ಕ್ರಮಗಳನ್ನು ಕೈಗೊಳ್ಳಲು ಪ್ಲ್ಯಾನ್ ಮಾಡಿಕೊಂಡಿದೆ.
ಹಾಲಿ ಐಸಿಸಿ ಅಧ್ಯಕ್ಷರ ಅವಧಿ ಇನ್ನೇನು ಕೆಲವು ದಿನಗಳಲ್ಲಿ ಮುಗಿಯಲಿದೆ. ಈ ಸ್ಥಾನದ ಮೇಲೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಕಣ್ಣು ನೆಟ್ಟಿದ್ದಾರೆ. ಒಂದು ವೇಳೆ ಅವರು ಐಸಿಸಿ ಚುಕ್ಕಾಣಿಯನ್ನು ಹಿಡಿದಿದ್ದೇ ಆದಲ್ಲಿ ಅವರ ಮುಂದೆ ಇದು ಜಾರಿಗೆ ತರುವ ಸವಾಲು ಎದುರಾಗಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications