ಕೊರೊನಾ ವೈರಸ್: ಟಿ20 ವಿಶ್ವಕಪ್ ಫೈನಲ್ ಹೀರೋಗೆ ಐಸಿಸಿ ಸೆಲ್ಯೂಟ್

ಇಡೀ ವಿಶ್ವವೇ ಕೊರೊನಾ ಭೀತಿಯಿಂದ ಸ್ಥಬ್ಧವಾಗಿದೆ. ಹೆಚ್ಚಿ ಎಲ್ಲಾ ದೇಶಗಳೂ ನಾಗರೀಕರನ್ನು ಮನೆಯಿಂದ ಆಚೆ ಬಾರದಂತೆ ಕ್ರಮಗಳನ್ನು ಕೈಗೊಂಡಿದೆ. ಪ್ರತಿಯೊಬ್ಬರೂ ಕೊರೊನಾ ಭೀತಿಯಿಮದ ಮನೆಯಿಂದ ಆಚೆ ಬಾರಲು ಭಯಪಡುವಂತಾ ವಾತಾವರಣ ನಿರ್ಮಾಣವಾಗಿದೆ. ಆದರೆ ಪೊಲೀಸ್ ಇಲಾಖೆಯ ಸೇವೆಯಲ್ಲಿರುವ ಟೀಮ್ ಇಂಡಿಯಾದ ಮಾಜಿ ಆಟಗಾರನೋರ್ವ ಮಾಸ್ಕ್ ಹಾಕಿ ಕೊರೊನಾ ಭೀತಿಯ ಮಧ್ಯೆಯೂ ಕರ್ತವ್ಯದಲ್ಲಿದ್ದಾರೆ.
ಯಸ್, ಟೀಮ್ ಇಂಡಿಯಾದ ಮಾಜಿ ಆಟಗಾರ ಜೋಗಿಂದರ್ ಶರ್ಮಾ ಖಾಕಿ ಬಟ್ಟೆತೊಟ್ಟು ಮಾಸ್ಕ್ ಹಾಕಿ ಕರ್ತವ್ಯದಲ್ಲಿದ್ದಾರೆ. ಇದರ ಫೋಟೋವೊಂದು ಕಳೆದೆರಡು ದಿನಗಳಿಂದ ಭಾರೀ ವೈರಸ್ ಆಗಿದೆ. ಈ ಫೋಟೋ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದೆ.
ಐಸಿಸಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಕೊರೊನಾ ವಿರುದ್ಧದ ಹೋರಾಟದಲ್ಲಿ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರತರಾಗಿರುವ ಜೋಗಿಂದರ್ ಶರ್ಮಾ ಅವರ ಫೋಟೋವನ್ನು ಟ್ವೀಟ್ ಮಾಡಿದೆ.
ಟೀಮ್ ಇಂಡಿಯಾದ ಮಾಜಿ ಆಟಗಾರನಿಗೆ ಐಸಿಸಿ ಮೆಚ್ಚುಗೆಯನ್ನು ಸೂಚಿಸಿದೆ.
ಟೀಮ್ ಇಂಡಿಯಾ ಮೊದಲ ವಿಶ್ವಕಪ್ ಗೆದ್ದ ತಂಡದ ಸದಸ್ಯರಾಗಿದ್ದ ಶರ್ಮಾ ಫೈನಲ್ ಪಂದ್ಯದ ಗೆಲುವಿಗೆ ಕಾರಣರಾಗಿದ್ದರು. ಪಾಕಿಸ್ತಾನದ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಶರ್ಮಾ ಮಿಸ್ಬಾ ಉಲ್ ಹಕ್ ವಿಕೆಟ್ ಪಡೆದು ಟೀಮ್ ಇಂಡಿಯಾವನ್ನು ಗೆಲ್ಲಿಸಿದ್ದರು.
ಟೀಮ್ ಇಂಡಿಯಾದ ಪರ 4 ಏಕದಿನ ಪಂದ್ಯ, 4 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಿರುವ 36ರ ಹರೆಯದ ಜೋಗೀಂದರ್ ಶರ್ಮಾ ಹರ್ಯಾಣದಲ್ಲಿ ಡೆಪ್ಯುಟಿ ಸುಪರಿಂಟೆಂಡೆಂಟ್ ಆಫ್ ಪೊಲೀಸ್ ಆಗಿದ್ದಾರೆ. ಸದ್ಯ ಕೊರೊನಾ ಕಾರಣ ನಿಷೇಧ ಜಾರಿಯಲ್ಲಿರುವುದರಿಂದ ಬೀಟ್ ಕರ್ತವ್ಯದಲ್ಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications