ಬೆನ್ ಸ್ಟೋಕ್ಸ್ ನಿವೃತ್ತಿ ವಿಡಿಯೋ ವಿವಾದ: ಇಸಿಬಿಗೆ ಪತ್ರ ಬರೆದ ICC
ಇಂಗ್ಲೆಂಡ್ ತಂಡದ ಬೆನ್ ಸ್ಟೋಕ್ಸ್ ಇತ್ತೀಚಿಗೆ ನ್ಯೂಜಿಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದರು. ಇವರು ವಿದಾಯ ಹೇಳಿರುವ ವಿಡಿಯೋವನ್ನು ತಂಡದ ಮುಂದೆ ಬಹಿರಂಗ ಪಡಿಸಿದ ವಿಡಿಯೋವನ್ನು ವೇಲ್ಸ್ ಕ್ರಿಕೆಟ್ ಮಂಡಳಿ ಬಿಡುಗಡೆ ಮಾಡಿತ್ತು. ಈಗ ಈ ಸಂಬಂಧ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ವೇಲ್ಸ್ ಕ್ರಿಕೆಟ್ ಮಂಡಳಿಗೆ ಪತ್ರ ಕಳುಹಿಸಿದೆ.
ನಾಟಿಂಗ್‌ಹ್ಯಾಮ್ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ ವಿರುದ್ಧದ ನಾಲ್ಕನೇ ದಿನದಾಟ ಆರಂಭವವಾಗುವ ಮುನ್ನ ಇಂಗ್ಲೆಂಡ್ ಮಾಜಿ ನಾಯಕ ಬೆನ್ ಸ್ಟೋಕ್ಸ್ ತಂಡದ ಆಟಗಾರರಿಗೆ ತಮ್ಮ ನಿವೃತ್ತಿಯ ಬಗ್ಗೆ ತಿಳಿಸಿದ್ದರು. ಈ ಸಂಪೂರ್ಣ ಸಂಭಾಷಣೆಯನ್ನು ಇಸಿಬಿ ರೆಕಾರ್ಡ್ ಮಾಡಿ ಪ್ರಸಾರಕರೊಂದಿಗೆ ಹಂಚಿಕೊಂಡಿತು. ಈ ವಿಡಿಯೋವನ್ನು ಎರಡನೇ ಅವಧಿಯ ವೇಳೆ ಬಹಿರಂಗ ಪಡಿಸಲಾಯಿತು. ಅಲ್ಲದೆ ಈ ಸಮಯದಲ್ಲಿ ಈ ದೃಶ್ಯವನ್ನು ಪ್ಲೇ ಸಹ ಮಾಡಲಾಯಿತು. ಇದು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಟಗಾರರು ಮತ್ತು ಪಂದ್ಯದ ಅಧಿಕಾರಿಗಳಿಗೆ ನಿಗದಿ ಪಡಿಸಿದ ಮಾನದಂಡವನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ಐಸಿಸಿ ಇಸಿಬಿಗೆ ಬರೆದ ಪತ್ರದಲ್ಲಿ ಸ್ಪಷ್ಟವಾಗಿ ತಿಳಿಸಿದೆ.

ಪತ್ರದಲ್ಲಿ ಏನಿದೆ?
ಇಸಿಬಿ ಆರ್ಟಿಕಲ್ 2.2.11 ರ ಉಲ್ಲಂಘನೆ ಮಾಡಿದೆ ಎಂದು ಐಸಿಸಿ ಪತ್ರದಲ್ಲಿ ತಿಳಿಸಿದೆ. ಡ್ರೆಸ್ಸಿಂಗ್ ಕೋಣೆಯಲ್ಲಿ ಸ್ಥಿರ ಅಥವಾ ರೆಕಾರ್ಡಿಂಗ್ ಉಪಕರಣಗಳನ್ನು ಬಳಸಬಾರದು. ಇನ್ನು ಟೆಸ್ಟ್ ಪಂದ್ಯ ಮುಗಿಯುವ ಮುನ್ನವೇ ಇಸಿಬಿ ಡೆಸ್ಸಿಂಗ್ ಕೋಣೆಯ ವಿಡಿಯೋವನ್ನು ಬಹಿರಂಗ ಪಡಿಸಿದ್ದು ನಿಯಮ ಉಲ್ಲಂಘನೀಯ ಎಂದು ಐಸಿಸಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಆಟಗಾರರ ಹಾಗೂ ಮ್ಯಾಚ್ ಅಧಿಕಾರಿಗಳ ಸ್ಥಳದಲ್ಲಿ ಚಿತ್ರಿಕರಿಸುವುದು ಹಾಗೂ ಆಡಿಯೋ ದೃಶ್ಯಗಳನ್ನು ಪಂದ್ಯದ ಮೊದಲು ಬಿಡುಗಡೆ ಮಾಡಬಾರದು ಎಂದು ಐಸಿಸಿ ಈ ಹಿಂದೆಯೇ ಇಸಿಬಿಗೆ ತಿಳಿಸಿತ್ತು. ಇನ್ನು ಐಸಿಸಿ ಬರೆದಿರುವ ಪತ್ರದ ಬಗ್ಗೆ ಇನ್ನು ಇಸಿಬಿ ಯಾವುದೇ ಸ್ಪಷ್ಟನೆಯನ್ನು ನೀಡಿಲ್ಲ. ಜುಲೈ 5 ರಂದು ಇಸಿಬಿ ಅಧ್ಯಕ್ಷ ರಿಚರ್ಡ್ ಥಾಂಪ್ಸನ್ ಹಾಗೂ ಐಸಿಸಿ ಅಧ್ಯಕ್ಷ ಜಯ್ ಶಾ ಭೇಟಿಯಾಗಿದ್ದರು. ಈ ವೇಳೆ ಪತ್ರವನ್ನು ನೀಡಲಾಗಿದೆ ಎಂದು ತಿಳಿದು ಬಂದಿದೆ.
ಬೆನ್ ಸ್ಟೋಕ್ಸ್ ತಮ್ಮ ಸುದೀರ್ಘ ಕ್ರಿಕೆಟ್ ಬದುಕಿಗೆ ಇತ್ತೀಚಿಗೆ ವಿದಾಯ ಹೇಳಿದ್ದಾರೆ. ಇವರು ಡ್ರೆಸ್ಸಿಂಗ್ ರೂಮ್‌ನಲ್ಲಿ ಮಾಡಿದ ವಿದಾಯದ ಭಾಷಣವನ್ನು ಇಸಿಬಿ ಪ್ರಕಟಿಸಿ ಈಗ ಪೇಚೆಗೆ ಸಿಲುಕಿಕೊಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications