2024ರ ಟಿ20 ವಿಶ್ವಕಪ್‌ಗೆ ತಂಡಗಳನ್ನು ಸಲ್ಲಿಸಲು ಡೆಡ್‌ಲೈನ್ ನೀಡಿದ ಐಸಿಸಿ
ಜೂನ್ 1ರಿಂದ ಜೂನ್ 29ರವರೆಗೆ ನಡೆಯಲಿರುವ ಬಹು ನಿರೀಕ್ಷಿತ 2024ರ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಗೆ ಆತಿಥ್ಯ ವಹಿಸಲು ವೆಸ್ಟ್ ಇಂಡೀಸ್ ಮತ್ತು ಯುಎಸ್ಎ ಸಜ್ಜಾಗುತ್ತಿವೆ. ಇದೇ ವೇಳೆ ಕ್ರಿಕೆಟ್ ಜಗತ್ತು ಮತ್ತೊಂದು ಐಸಿಸಿ ಪಂದ್ಯಾವಳಿಯನ್ನು ಕುತೂಹಲದಿಂದ ಎದುರು ನೋಡುತ್ತಿದೆ.
ಒಟ್ಟು 20 ತಂಡಗಳನ್ನು ತಲಾ ಐದು ತಂಡಗಳ ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದ್ದು, ಪ್ರತಿ ಗುಂಪಿನಲ್ಲಿ ಮೊದಲ ಮತ್ತು ಎರಡನೇ ಸ್ಥಾನ ಪಡೆದ ತಂಡಗಳು ಸೂಪರ್ ಎಂಟು ಸುತ್ತಿಗೆ ಮುನ್ನಡೆ ಪಡೆಯುತ್ತವೆ.

2007ರ ಚಾಂಪಿಯನ್ ಭಾರತ ತಂಡವು ಯುಎಸ್ಎ, ಐರ್ಲೆಂಡ್, ಕೆನಡಾ ಮತ್ತು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡಗಳೊಂದಿಗೆ ಎ ಗುಂಪಿನಲ್ಲಿ ಸ್ಥಾನ ಪಡೆದಿದೆ.
ಜೂನ್ 1ರಂದು ಪಂದ್ಯಾವಳಿ ಆರಂಭವಾಗುವುದರಿಂದ ಎಲ್ಲಾ ತಮ್ಮ ಅಂತಿಮ ತಂಡಗಳನ್ನು ಸಲ್ಲಿಸುವ ಗಡುವು ಮೇ 1 ಆಗಿದೆ. ಗಮನಾರ್ಹವೆಂದರೆ, ಈ ದಿನಾಂಕವು ಕೇವಲ ತಾತ್ಕಾಲಿಕವಾಗಿದೆ.
ಮೇ 25 ರೊಳಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) ಅನುಮತಿಯಿಲ್ಲದೆ ಬದಲಾವಣೆಗಳನ್ನು ಮಾಡಬಹುದು. ತಂಡಗಳು ನಂತರ ಐಸಿಸಿಯ ತಾಂತ್ರಿಕ ಸಮಿತಿಯಿಂದ ಅನುಮೋದನೆ ಪಡೆಯಬೇಕಾಗುತ್ತದೆ.

ಇದರ ಪರಿಣಾಮವಾಗಿ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಯ್ಕೆ ಸಮಿತಿಯು ಸಂಪೂರ್ಣ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024ರ ಆವೃತ್ತಿಯಲ್ಲಿ ಪ್ರದರ್ಶನಗಳನ್ನು ಪರಿಶೀಲಿಸಿ, ಐಸಿಸಿ ಪಂದ್ಯಾವಳಿಗೆ ಆಯ್ಕೆಯ ಕುರಿತು ನಿರ್ಧಾರವನ್ನು ತೆಗೆದುಕೊಳ್ಳುತ್ತದೆ.
2024ರ ಐಪಿಎಲ್ ಭಾರತ ತಂಡದ ಅನುಭವಿ ಬ್ಯಾಟರ್‌ಗಳಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಗೆ ಪರೀಕ್ಷೆಯಾಗಿ ಕಾರ್ಯನಿರ್ವಹಿಸಲಿದೆ. ಇದಲ್ಲದೆ, ಮೂರು ಪ್ರಯಾಣ ಮೀಸಲು ಆಟಗಾರರನ್ನು ಹೊರತುಪಡಿಸಿ, ಬಿಸಿಸಿಐ ಆಯ್ಕೆ ಸಮಿತಿಯು ಹದಿನೈದು ಆಟಗಾರರ ಪಟ್ಟಿಯನ್ನು ಹೆಸರಿಸಬೇಕಿದೆ.
ರೋಹಿತ್ ಶರ್ಮಾ ಭಾರತ ತಂಡದ ನಾಯಕರಾಗುತ್ತಾರೆ ಎಂದು ನಿರೀಕ್ಷಿಸಲಾಗಿದ್ದರೂ, ಅವರ ಸ್ಥಾನವನ್ನು ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ವಹಿಸಲಿದ್ದಾರೆ ಎಂಬ ಊಹಾಪೋಹಗಳಿವೆ. ಆದರೆ ಅವರು ಗಾಯಗೊಂಡಿರುವ ಕಾರಣ, ರೋಹಿತ್ ಶರ್ಮಾ ಅವರೇ ನಾಯಕರಾಗುವ ಸಾಧ್ಯತೆಯೂ ಇದೆ.
ಇನ್ನು ಟೀಮ್ ಇಂಡಿಯಾ ಜೂನ್ 5ರಂದು ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಇಂಟರ್‌ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಐರ್ಲೆಂಡ್ ವಿರುದ್ಧದ ಪಂದ್ಯದೊಂದಿಗೆ ತಮ್ಮ ಟಿ20 ವಿಶ್ವಕಪ್ ಅಭಿಯಾನವನ್ನು ಪ್ರಾರಂಭಿಸುತ್ತದೆ. ಭಾರತ ತಂಡ ತನ್ನ ಮುಂದಿನ ಪಂದ್ಯದಲ್ಲಿ ಜೂನ್ 9ರಂದು ಬದ್ಧ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ.
"ಟಿ20 ವಿಶ್ವಕಪ್‌ಗಾಗಿ ಭಾರತ ತಂಡದ ಬಗ್ಗೆ ನಮಗೆ ನ್ಯಾಯೋಚಿತ ಕಲ್ಪನೆ ಇದೆ. ಅದನ್ನು ನಿರ್ಧರಿಸಲು ಖಂಡಿತಾ ಐಪಿಎಲ್ ಮಾನದಂಡವಾಗಿರುತ್ತದೆ. ನಾವು ಫಾರ್ಮ್ ಅನ್ನು ಆಧರಿಸಿ ತಂಡವನ್ನು ಆಯ್ಕೆ ಮಾಡಬೇಕು ಮತ್ತು ಹಿಂದಿನ ವೈಯಕ್ತಿಕ ಪ್ರದರ್ಶನಗಳ ಮೇಲೆ ಅಲ್ಲ. ಅಲ್ಲಿಯವರೆಗೆ ಎಲ್ಲರೂ ಆಯ್ಕೆಗೆ ಲಭ್ಯವಿರುತ್ತಾರೆ".
"ರೋಹಿತ್ ಶರ್ಮಾ ಮತ್ತು ವಿರಾಟ್ ವಿರಾಟ್ ಭಾರತ ತಂಡದಲ್ಲಿ ಇರುತ್ತಾರೆಯೇ ಎಂಬುದು ಆಯ್ಕೆಗಾರರಿಗೆ ಬಿಟ್ಟದ್ದು. ಅವರು ಟಿ20 ಪಂದ್ಯಗಳಲ್ಲಿ ಆಯ್ಕೆಗೆ ಲಭ್ಯವಿರುತ್ತಾರೆ," ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
2024ರ ಟಿ20 ವಿಶ್ವಕಪ್ ಗುಂಪು ಹಂತಗಳಲ್ಲಿ ಭಾರತ ತಂಡದ ವೇಳಾಪಟ್ಟಿ
ಜೂನ್ 5: ಭಾರತ vs ಐರ್ಲೆಂಡ್ (ನ್ಯೂಯಾರ್ಕ್)
ಜೂನ್ 9: ಭಾರತ vs ಪಾಕಿಸ್ತಾನ (ನ್ಯೂಯಾರ್ಕ್)
ಜೂನ್ 12: ಭಾರತ vs ಯುಎಸ್ಎ (ನ್ಯೂಯಾರ್ಕ್)
ಜೂನ್ 15: ಭಾರತ vs ಕೆನಡಾ (ಫ್ಲೋರಿಡಾ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications