ICC Emerging Player of the Year: ಪಟ್ಟಿಯಲ್ಲಿ ನಾಲ್ವರು ಆಟಗಾರರು: ಭಾರತೀಯ ಆಟಗಾರರಿಗೆ ಇಲ್ಲ ಸ್ಥಾನ
ಐಸಿಸಿ ಪ್ರತಿ ವರ್ಷ ಹಲವು ಪ್ರಶಸ್ತಿಗಳನ್ನು ನೀಡಿ ಆಟಗಾರರನ್ನು ಪೋಷಿಸುತ್ತದೆ. ಈ ಪ್ರಶಸ್ತಿಗಳಲ್ಲಿ ಎಲ್ಲರ ಚಿತ್ತ ಕದ್ದಿರುವ ಪ್ರಶಸ್ತಿ ಎಂದರೆ ಉದಯೋನ್ಮುಖ ಆಟಗಾರನ ಪ್ರಶಸ್ತಿ. ಈ ಪ್ರಶಸ್ತಿಗಾಗಿ ಐಸಿಸಿ ಈಗಾಗಲೇ ನಾಲ್ಕು ಆಟಗಾರರನ್ನು ಶಾರ್ಟ್ ಲೀಸ್ಟ್ ಮಾಡಿದೆ ಎಂದು ತಿಳಿದು ಬಂದಿದೆ. ಈ ನಾಲ್ಕು ಆಟಗಾರರಲ್ಲಿ ಒಬ್ಬರಿಗೆ ಈ ಬಾರಿ ಪ್ರತಿಷ್ಠಿತ ಪ್ರಶಸ್ತಿ ಲಭಿಸುತ್ತದೆ. ಈ ಪಟ್ಟಿಯಲ್ಲಿ ಒಬ್ಬನೇ ಒಬ್ಬ ಭಾರತೀಯ ಉದಯೋನ್ಮುಖ ಆಟಗಾನಿಲ್ಲದೇ ಇರುವುದು ಟೀಮ್ ಇಂಡಿಯಾ ಅಭಿಮಾನಿಗಳಿಗೆ ಬೇಸರ ತರಿಸಿದೆ.
ಈ ನಾಲ್ವರು ಆಟಗಾರರಲ್ಲಿ 3 ಆಟಗಾರರು ಇದೇ ವರ್ಷ ಪದಾರ್ಪಣೆ ಮಾಡಿದ್ದಾರೆ. ಈ ಎಲ್ಲ ಆಟಗಾರರ ಪ್ರದರ್ಶನ ಪ್ರಸಕ್ತ ವರ್ಷ ಅಮೋಘವಾಗಿದೆ. ಇದರಲ್ಲಿ ಇಂಗ್ಲೆಂಡ್‌ನ ಗಸ್ ಅಟ್ಕಿನ್ಸನ್, ಪಾಕಿಸ್ತಾನದ ಸ್ಯಾಮ್ ಅಯೂಬ್, ವೆಸ್ಟ್ ಇಂಡೀಸ್‌ನ ಶಮರ್ ಜೋಸೆಫ್ ಮತ್ತು ಶ್ರೀಲಂಕಾದ ಕಮಿಂದು ಮೆಂಡಿಸ್ ಸೇರಿದ್ದಾರೆ.

ಇಂಗ್ಲೆಂಡ್ ಪರ ಗಸ್ ಅಟ್ಕಿನ್ಸನ್ ಚೊಚ್ಚಲ ಟೆಸ್ಟ್ ಪಂದ್ಯವನ್ನುಆಡಿದ ಭರವಸೆಯ ಬೌಲರ್ 52 ವಿಕೆಟ್‌ಗಳನ್ನು ಪಡೆದಿದ್ದಾರೆ. ಇವರು ಕ್ಯಾಲೆಂಡರ್ ವರ್ಷದಲ್ಲಿ ಎರಡನೇ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು. 26 ವರ್ಷದ ಆಟಗಾರ ಲಾರ್ಡ್ಸ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 7 ವಿಕೆಟ್ ಪಡೆಯುವ ಮೂಲಕ ತಮ್ಮ ಚೊಚ್ಚಲ ಟೆಸ್ಟ್‌ನಲ್ಲಿ ಅಮೋಘ ಪ್ರದರ್ಶನ ನೀಡಿದರು.
ಸ್ಯಾಮ್ ಅಯೂಬ್
ಪಾಕಿಸ್ತಾನದ ಪರ 22 ವರ್ಷದ ಯುವ ಬ್ಯಾಟರ್ ಸ್ಯಾಮ್ ಆಯೂಬ್ ಪ್ರಸಕ್ತ ವರ್ಷ ಸ್ಥಿರ ಪ್ರದರ್ಶನ ನೀಡಿದ್ದಾರೆ. ಇವರು ಪಾಕಿಸ್ತಾನ ಪರ ಸಿಕ್ಕ ಅವಕಾಶಗಳಲ್ಲಿ ಅಮೋಘ ಪ್ರದರ್ಶನ ನೀಡಿ ಗಮನ ಸೆಳೆದರು. ಅದ್ರಲ್ಲೂ ಆಸ್ಟ್ರೇಲಿಯಾ, ಜಿಂಬಾಬ್ವೆ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಸ್ಥಿರ ಪ್ರದರ್ಶನ ನೀಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಇವರು ಆಡಿದ 7 ಪಂದ್ಯಗಳ 13 ಇನಿಂಗ್ಸ್‌ಗಳಲ್ಲಿ 2 ಶತಕ ಹಾಗೂ 2 ಅರ್ಧಶತಕ ಒಳಗೊಂಡಂತೆ 544 ರನ್ ಸಿಡಿಸಿ ಭರವಸೆಯ ಮೂಡಿಸಿದ್ದಾರೆ.
ಮೆಂಡಿಸ್ ಡಾನ್
ಪ್ರಸಕ್ತ ವರ್ಷ ದ್ವೀಪರಾಷ್ಟ್ರದಲ್ಲಿ ಹೊಸ ಸ್ಟಾರ್ ಒಬ್ಬನ ಜನನವಾಗಿದೆ. ಪ್ರಸಕ್ತ ವರ್ಷ ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್ ಬಾರಿಸಿದ ಆಟಗಾರರಲ್ಲಿ ಕುಸಾಲ್ ಮೆಂಡೀಸ್‌ಗೂ ಸ್ಥಾನವಿದೆ. 2 ವರ್ಷದ ಬಳಿಕ ತಂಡಕ್ಕೆ ಎಂಟ್ರಿ ನೀಡಿ ನೆರವಾದರು. ಕಮಿಂದು ಮೆಂಡಿಸ್ ಈ ವರ್ಷ ಬಾಂಗ್ಲಾದೇಶ ವಿರುದ್ಧ ಶತಕ ಸಿಡಿಸುವ ಮೂಲಕ ಶುಭಾರಂಭ ಮಾಡಿದರು. ಇವರು ಬಿಗ್ ಇನ್ನಿಂಗ್ಸ್ ಆಡುವ ಮೂಲಕ ಡಾನ್ ಬ್ರಾಡ್ಮನ್ ಕ್ಲಬ್ ನಲ್ಲಿ ಸ್ಥಾನ ಪಡೆದರು. ಕುಸಾಲ್ ಆಡಿದ 9 ಪಂದ್ಯಗಳಲ್ಲಿ 1049 ರನ್ ಕಲೆ ಹಾಕಿ ಅಬ್ಬರಿಸಿದ್ದಾರೆ. ಇದರಲ್ಲಿ 5 ಶತಕ ಹಾಗೂ 3 ಅರ್ಧಶತಕಗಳು ಸೇರಿವೆ.
ಶಮರ್ ಜೋಸೆಫ್
ಪ್ರಸಕ್ತ ವರ್ಷ ಅತಿ ಹೆಚ್ಚು ಸುದ್ದಿಯಲ್ಲಿರುವ ಉದಯೋನ್ಮುಖ ಆಟಗಾರ ವೆಸ್ಟ್ ಇಂಡೀಸ್ ತಂಡ ಶಮರ್ ಜೋಸೆಫ್. ತಮ್ಮ 22ನೇ ವಯಸ್ಸಿನಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಇವರು ಆಸ್ಟ್ರೇಲಿಯಾ ವಿರುದ್ಧ 5 ವಿಕೆಟ್ ಪಡೆದು ಮುನ್ನೆಲೆಗೆ ಬಂದರು. ಇದಾದ ಬಳಿಕ ಆಸ್ಟ್ರೇಲಿಯ ವಿರುದ್ಧದ ಎರಡನೇ ಇನ್ನಿಂಗ್ಸ್ ನಲ್ಲಿ 7 ವಿಕೆಟ್ ಪಡೆದು ಸಂಚಲನ ಮೂಡಿಸಿದ್ದರು. ಶಮರ್ ಜೋಸೆಫ್ ಆಡಿದ 8 ಪಂದ್ಯಗಳಲ್ಲಿ 29 ವಿಕೆಟ್ ಪಡೆದು ಬೀಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications