ಐಸಿಸಿ ಸಮೀಕ್ಷೆ: ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರತೀಯರ ಸಂಖ್ಯೆಯೇ ಹೆಚ್ಚು!

ಬೆಂಗಳೂರು, ಜೂನ್ 27: ಜಗತ್ತಿನ ಕ್ರಿಕೆಟ್ ಅಭಿಮಾನಿಗಳ ಪೈಕಿ ಹೆಚ್ಚಿನವರು ಭಾರತೀಯ ಉಪಖಂಡದಲ್ಲಿಯೇ ಇದ್ದಾರೆ. ಇನ್ನು ಅಲ್ಪಪಾಲು ಮಾತ್ರ ಉಳಿದ ದೇಶಗಳ ನಡುವೆ ಹಂಚಿಹೋಗಿದೆ ಎನ್ನುತ್ತದೆ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ ನಡೆಸಿರುವ ಸಮೀಕ್ಷೆ.

ಐಪಿಎಲ್, ಏಕದಿನ, ಟೆಸ್ಟ್ ಹೀಗೆ ಭಾರತದ ಕ್ರೀಡಾಂಗಣಗಳಲ್ಲಿ ಯಾವ ಪಂದ್ಯ ಆಡಿದರೂ ಪ್ರೇಕ್ಷಕರು ಬಹುತೇಕ ತುಂಬಿಕೊಳ್ಳುತ್ತಾರೆ.

ರಣಜಿ ಟ್ರೋಫಿ: ಮತ್ತೆ ಎಲೈಟ್-ಪ್ಲೇಟ್ ಪದ್ಧತಿಗೆ ಬಿಸಿಸಿಐ ಒಲವು?

ದೇಸಿ ಕ್ರಿಕೆಟ್‌ಗಳಾದ ರಣಜಿ, ಸಯ್ಯದ್ ಮುಷ್ತಾಕ್ ಅಲಿ, ಕರ್ನಾಟಕ ಪ್ರೀಮಿಯರ್‌ ಲೀಗ್‌ಗಳಲ್ಲಿಯೂ ಅಭಿಮಾನಿಗಳ ದಂಡಿಗೆ ಬರವಿಲ್ಲ. ಇತ್ತೀಚೆಗೆ ಅಫ್ಘಾನಿಸ್ತಾನದಂತಹ ದುರ್ಬಲ ತಂಡದ ಎದುರು ನಡೆದ ಅಷ್ಟೇನೂ ಮಹತ್ವವಲ್ಲದ ಪಂದ್ಯವನ್ನು ಮಳೆಯ ಭೀತಿಯ ನಡುವೆಯೂ ವೀಕ್ಷಿಸಲು ಅಭಿಮಾನಿಗಳು ಬಂದಿದ್ದರು.

ಇನ್ನು ಟಿವಿ ನೇರ ಪ್ರಸಾರ, ರೇಡಿಯೊ ಕಾಮೆಂಟರಿ ಕೇಳುವವರಿಗೂ ಕೊರತೆಯಿಲ್ಲ. ನೇರಪ್ರಸಾರ ನೋಡಲು ಸಾಧ್ಯವಾಗದೆ ಇದ್ದವರು, ನೋಡಿದವರೂ ಹೈಲೈಟ್ಸ್ ಪ್ರಸಾರವಾದಾಗ ಟಿವಿ ಮುಂದೆ ಕೂರುತ್ತಾರೆ.

ಬಾರ್ಬಡೋಸ್ ಟೆಸ್ಟ್: ಶ್ರೀಲಂಕಾಕ್ಕೆ ಐತಿಹಾಸಿಕ ಜಯ

ಭಾರತದಲ್ಲಿರುವಷ್ಟು ಪ್ರೇಕ್ಷಕರನ್ನು ಯಾವ ಕ್ರಿಕೆಟ್ ಕ್ರೀಡಾಂಗಣದಲ್ಲಿಯೂ ಕಾಣಲು ಸಾಧ್ಯವಾಗುವುದಿಲ್ಲ. ಇದು ಸತ್ಯ ಎನ್ನುತ್ತದೆ ಐಸಿಸಿಯ ಈ ಸಮೀಕ್ಷೆ.

ಶೇ 90ರಷ್ಟು ಮಂದಿ ಭಾರತ ಉಪಖಂಡದಲ್ಲಿ

ಕ್ರೀಡಾ ಕ್ಷೇತ್ರದಲ್ಲಿಯೇ ಅತ್ಯಂತ ದೊಡ್ಡದ ಎನ್ನಲಾದ ಮಾರುಕಟ್ಟೆ ಸಮೀಕ್ಷೆಯನ್ನು ಐಸಿಸಿ ನಡೆಸಿದೆ. ಜಾಗತಿಕವಾಗಿ ಕ್ರಿಕೆಟ್‌ಗೆ ಒಂದು ಬಿಲಿಯನ್ ಅಭಿಮಾನಿಗಳಿದ್ದಾರೆ. ಅದರಲ್ಲಿ ಶೇ 90ರಷ್ಟು ಮಂದಿ ಭಾರತ ಉಪಖಂಡದಲ್ಲಿಯೇ ಇದ್ದಾರೆ ಎನ್ನುತ್ತದೆ ಈ ಸಮೀಕ್ಷೆ.

ಅಧ್ಯಯನದ ಪ್ರಕಾರ ಅಭಿಮಾನಿಗಳ ಸರಾಸರಿ ವಯಸ್ಸು 34 (ಸಮೀಕ್ಷೆಯನ್ನು 16-69ರ ವಯಸ್ಸಿನವರಲ್ಲಿ ಮಾಡಲಾಗಿದೆ). ಇದರಲ್ಲಿ ಶೇ 61 ರಷ್ಟು ಪುರುಷರು ಹಾಗೂ ಶೇ 39ರಷ್ಟು ಮಹಿಳೆಯರಿದ್ದಾರೆ. 300 ಮಿಲಿಯನ್ ಮಂದಿ ಇದರಲ್ಲಿ ಪಾಲ್ಗೊಂಡಿದ್ದಾರೆ.

ಕ್ರಿಕೆಟ್ ಅಭಿವೃದ್ಧಿಗೆ ನೆರವು

ಐಸಿಸಿ ಮತ್ತು ಅದರ ಸದಸ್ಯರು ಕ್ರಿಕೆಟ್‌ನ ಬೆಳವಣಿಗೆಯ ಸಮೃದ್ಧಿಯನ್ನು ಅರಿತುಕೊಳ್ಳಲು ಅನುಕೂಲವಾಗುವಂತೆ ಈ ಸಮೀಕ್ಷೆಯನ್ನು ನಡೆಸಲಾಗಿದೆ.

ಕ್ರೀಡೆಯನ್ನು ಜಾಗತಿಕ ಮಟ್ಟದಲ್ಲಿ ಬೆಳೆಸಲು ಗಮನ ಹರಿಸಬೇಕಾದ ಕಾರ್ಯತಂತ್ರಗಳು, ನಿರ್ಧಾರ ಕೈಗೊಳ್ಳುವಿಕೆ ಮತ್ತು ಈ ಕಾರ್ಯತಂತ್ರಗಳಿಂದ ಬಂದ ಫಲಿತಾಂಶಗಳ ಮಾಪನ ಮಾಡಲು ಸೂಕ್ತ ನೆಲಗಟ್ಟನ್ನು ಈ ಸಮೀಕ್ಷೆ ಒದಗಿಸಲಿದೆ.

ಅಭಿಮಾನಿಗಳು ಕ್ರೀಡಾ ಸಂಬಂಧಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ ಕಾರ್ಯತಂತ್ರಗಳನ್ನು ರೂಪಿಸುವ ಹಾಗೂ ಜಾರಿಮಾಡುವ ನಿಟ್ಟಿನಲ್ಲಿ, ಕ್ರಿಕೆಟ್‌ ಅನ್ನು ಜಾಗತಿಕವಾಗಿ ಹೆಚ್ಚು ಜನಪ್ರಿಯ ಮತ್ತು ಸಂಚಲನ ಉಂಟುಮಾಡುವಂತಹ ಕ್ರೀಡೆಯಾಗಿ ಬೆಳೆಸುವಲ್ಲಿ ಐಸಿಸಿ ಮತ್ತು ಅದರ ಸದಸ್ಯರ ಪ್ರಯತ್ನವನ್ನು ಈ ಸಮೀಕ್ಷೆ ಶ್ಲಾಘಿಸಿದೆ.

ಶೇ 88ರಷ್ಟು ಮಂದಿಗೆ ಏಕದಿನ ಇಷ್ಟ

ಟೆಸ್ಟ್ ಕ್ರಿಕೆಟ್‌ಗೆ ಶೇ 70ರಷ್ಟು ಕ್ರಿಕೆಟ್ ಅಭಿಮಾನಿಗಳು ಆಸಕ್ತಿ ಹೊಂದಿದ್ದಾರೆ. ಈ ವಿಭಾಗದ ಕಡೆಗೆ ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ಅತಿ ಹೆಚ್ಚು ಜನರು ಒಲವು ಹೊಂದಿದ್ದಾರೆ (ಶೇ 86).

ದಕ್ಷಿಣ ಆಫ್ರಿಕಾದಲ್ಲಿ ಏಕದಿನ ಕ್ರಿಕೆಟ್‌ ಅಭಿಮಾನಿಗಳ ಸಂಖ್ಯೆ ಅತ್ಯಧಿಕ, ಅಂದರೆ ಶೇ 91ರಷ್ಟಿದೆ. ಪಾಕಿಸ್ತಾನದಲ್ಲಿ ಟಿ 20 ಹೆಚ್ಚು ಜನಪ್ರಿಯ (ಶೇ 98). ಜಾಗತಿಕವಾಗಿ ಟಿ 20 ವಿಭಾಗವೇ ಬಲು ಜನಪ್ರಿಯ. ಶೇ 92ರಷ್ಟು ಜನರಿಗೆ ಚುಟುಕು ಕ್ರಿಕೆಟ್ ಬಗ್ಗೆ ಒಲವಿದ್ದರೆ, ಶೇ 88ರಷ್ಟು ಮಂದಿಗೆ ಏಕದಿನ ಕ್ರಿಕೆಟ್ ಕುರಿತು ಪ್ರೀತಿ ಇದೆ.

ಅತಿ ದೊಡ್ಡ ಕ್ರೀಡಾ ಸಮೀಕ್ಷೆ

ಕ್ರೀಡಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಇದು ಮೊದಲ ಜಾಗತಿಕ ಮಾರುಕಟ್ಟೆ ಸಂಶೋಧನಾ ಯೋಜನೆಯಾಗಿದೆ. 16 ರಿಂದ 69 ವರ್ಷದವರನ್ನು ಒಳಗೊಂಡ ಸಮೀಕ್ಷೆಯಲ್ಲಿ ಒಂದು ಬಿಲಿಯನ್‌ಗೂ ಅಧಿಕ ಅಭಿಮಾನಿಗಳು ನಮಗೆ ಇರುವುದು ಖಚಿತವಾಗಿದೆ.

ಸರಾಸರಿ 34ರ ವಯಸ್ಸಿನ ಜನರು ಕ್ರಿಕೆಟ್ಅನ್ನು ಪ್ರೀತಿಸುತ್ತಿರುವುದು ನಿಸ್ಸಂಶಯವಾಗಿ ರೋಮಾಂಚನಕಾರಿ ಸಂಗತಿ. ನಾವು ಗಟ್ಟಿಯಾದ ಸ್ಥಾನದಲ್ಲಿದ್ದೇವೆ. ಇಲ್ಲಿಂದ ಮುಂದೆ ಕ್ರೀಡೆಯನ್ನು ಬೆಳೆಸಬಹುದು ಎಂದು ಐಸಿಸಿ ಮುಖ್ಯ ಕಾರ್ಯನಿರ್ವಾಹಕ ಡೇವಿಡ್ ರಿಚರ್ಡ್‌ಸನ್ ತಿಳಿಸಿದ್ದಾರೆ.

ಈ ಅಭಿಮಾನಿಗಳ ಪೈಕಿ ಶೇ 90ರಷ್ಟು ಮಂದಿ ಭಾರತ ಉಪಖಂಡದಲ್ಲಿಯೇ ಇದ್ದಾರೆ ಎಂದು ಅವರು ತಿಳಿಸಿದ್ದಾರೆ.

ಮೂರೂ ವಿಭಾಗಗಳೆಡೆಗೆ ಆಸಕ್ತಿ

ಕ್ರಿಕೆಟ್‌ನ ಮೂರು ವಿಭಿನ್ನ ವಿಭಾಗಗಳ ಕುರಿತು ಸಮೀಕ್ಷೆಯಲ್ಲಿ ಪ್ರಶ್ನೆಗಳನ್ನು ಕೇಳಲಾಗಿತ್ತು. ಸಂದರ್ಶನದಲ್ಲಿ ಪಾಲ್ಗೊಂಡ 16 ಮೀರಿದ ವಯಸ್ಸಿನವರಲ್ಲಿ ಮೂರನೇ ಎರಡರಷ್ಟು ಅಭಿಮಾನಿಗಳು ಕ್ರೀಡೆಯ ಎಲ್ಲ ಮೂರೂ ವಿಭಾಗಗಳತ್ತ ಒಲವು ಹೊಂದಿದ್ದಾರೆ ಎನ್ನುವುದು ಸ್ಪಷ್ಟವಾಗಿದೆ.

ಐಸಿಸಿ ಜಾಗತಿಕ ಟೂರ್ನಿಗಳ ಮಹತ್ವ ಮತ್ತು ಜನಪ್ರಿಯತೆ ಅಧಿಕವಾಗಿದೆ. ಐಸಿಸಿ ಏಕದಿನ ವಿಶ್ವಕಪ್ ಮತ್ತು ಟಿ 20 ವಿಶ್ವಕಪ್ ಹೆಚ್ಚು ಜನಪ್ರಿಯವಾಗಿವೆ. ಶೇ 95ರಷ್ಟು ಅಭಿಮಾನಿಗಳು ಈ ಬಗ್ಗೆ ಅಧಿಕ ಆಸಕ್ತಿ ಹೊಂದಿದ್ದಾರೆ.

ಒಲಿಂಪಿಕ್ಸ್ ಭಾಗವಾಗಬೇಕು

ನಮ್ಮ ಸಂಶೋಧನೆಯ ಪ್ರಕಾರ, ಒಲಿಂಪಿಕ್ ಕ್ರೀಡೆಯಲ್ಲಿ ಟಿ 20 ಕ್ರಿಕೆಟ್ ಅವಕಾಶ ಪಡೆಯಬೇಕು ಎಂದು ಶೇ 87ರಷ್ಟು ಅಭಿಮಾನಿಗಳು ಬಯಸಿದ್ದಾರೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts

    ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

    Story first published: Wednesday, June 27, 2018, 19:47 [IST]
    Other articles published on Jun 27, 2018
    POLLS

    myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ

    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Mykhel sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Mykhel website. However, you can change your cookie settings at any time. Learn more