ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ರಾಯುಡು ಇನ್ನು ಬೌಲಿಂಗ್ ಮಾಡುವಂತಿಲ್ಲ!


ಮೌಂಟ್‌ಮೌಂಗನ್ಯುಯಿ, ಜನವರಿ 28: ಐಸಿಸಿಯು ಭಾರತದ ಆಲ್ ರೌಂಡರ್ ಅಂಬಾಟಿ ರಾಯುಡು ಅವರನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನ ಬೌಲಿಂಗ್‌ನಿಂದ ಅಮಾನತುಗೊಳಿಸಿದೆ. ಆಸ್ಟ್ರೇಲಿಯಾ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ರಾಯುಡು ಬೌಲಿಂಗ್ ಮಾಡಿದ್ದರು. ರಾಯುಡು ಬೌಲಿಂಗ್ ಶೈಲಿ ಸರಿಯಿಲ್ಲದಿರುವುದರಿಂದ ಅವರಿನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬೌಲಿಂಗ್ ಮಾಡುವಂತಿಲ್ಲ.
ಜನವರಿ 13ರಂದು ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆದಿದ್ದ ಆಸ್ಟ್ರೇಲಿಯಾ-ಭಾರತ ನಡುವಣ ಮೊದಲ ಏಕದಿನ ಪಂದ್ಯದಲ್ಲಿ 33ರ ಹರೆಯದ ರಾಯುಡು 2 ಓವರ್ ಬೌಲಿಂಗ್ ಮಾಡಿದ್ದರು. ಇದು ಅಕ್ರಮ ಶೈಲಿಯಂತಿತ್ತು. ಹೀಗಾಗಿ ಬೌಲಿಂಗ್ ಶೈಲಿ ಪರೀಕ್ಷೆಗೆ ಒಳಗಾಗಿವಂತೆ ಐಸಿಸಿ ರಾಯುಡುಗೆ ಸೂಚಿಸಿತ್ತು. ಆದರೆ ರಾಯುಡು ಬೌಲಿಂಗ್ ಶೈಲಿ ಪರೀಕ್ಷೆಗೆ ಒಳಗಾಗಿಲ್ಲ.
'ಅನುಮಾನಾಸ್ಪದ ಬೌಲಿಂಗ್ ಶೈಲಿಗಾಗಿ 14 ದಿನಗಳೊಳಗೆ ಪರೀಕ್ಷೆಗೆ ಒಳಗಾಗುವಂತೆ ರಾಯುಡುಗೆ ಸೂಚಿಸಿದ್ದೆವು. ಆದರೆ ರಾಯುಡು ಬೌಲಿಂಗ್ ಶೈಲಿ ಪರೀಕ್ಷೆಗೆ ಒಳಗಾಗಿಲ್ಲ. ಹೀಗಾಗಿ ಅವರನ್ನು ಈ ಕೂಡಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಬೌಲಿಂಗ್‌ನಿಂದ ಅಮಾನತುಗೊಳಿಸಲಾಗಿದೆ' ಎಂದು ಸೋಮವಾರ (ಜನವರಿ 28) ಮಾಧ್ಯಮ ಪ್ರಕಟಣೆಯಲ್ಲಿ ಐಸಿಸಿ ತಿಳಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications