For Quick Alerts
ALLOW NOTIFICATIONS  
For Daily Alerts
 

ಅಕ್ರಮ ಬೌಲಿಂಗ್ ಶೈಲಿ: ಶ್ರೀಲಂಕಾ ಸ್ಪಿನ್ನರ್‌ನನ್ನು ಅಮಾನತುಗೊಳಿಸಿದ ಐಸಿಸಿ!

ICC suspends Sri Lanka spinner Akila Dananjaya from bowling over illegal action

ಕೊಲಂಬೋ, ಡಿಸೆಂಬರ್ 10: ಅಕ್ರಮ ಶೈಲಿಯ ಬೌಲಿಂಗ್‌ಗಾಗಿ ಶ್ರೀಲಂಕಾ ಸ್ಪಿನ್ನರ್ ಅಕಿಲ ದನಂಜಯ ಅವರು ಅಂತಾರಾಷ್ಟ್ರಿಯ ಕ್ರಿಕೆಟ್ ನಿಂದ ಅಮಾನಗೊಂಡಿದ್ದಾರೆ. ದನಂಜಯ ಅವರನ್ನು ಅಮಾನತುಗೊಳಿಸಿರುವುದಾಗಿ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಸೋಮವಾರ (ಡಿಸೆಂಬರ್ 10) ತಿಳಿಸಿದೆ.

ಕಳೆದ ತಿಂಗಳು ಶ್ರೀಲಂಕಾದಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದ ವೇಳೆ ಅಕಿಲ ಅವರು ಸರಿಯಲ್ಲದ ಶೈಲಿಯಲ್ಲಿ ಬೌಲಿಂಗ್ ಮಾಡಿದ್ದು ಕಂಡುಬಂದಿತ್ತು. ಈ ಕಾರಣಕ್ಕಾಗಿ ಶ್ರೀಲಂಕಾ ಸ್ಪಿನ್ನರ್ ಗಂಭೀರ ಶಿಕ್ಷೆಗೆ ಒಳಗಾಗುವಂತಾಗಿದೆ.

ನವೆಂಬರ್ 23 ಬ್ರಿಸ್ಬೇನ್‌ ನಲ್ಲಿ ದನಂಜಯ ಅವರ ಬೌಲಿಂಗ್ ಶೈಲಿಯನ್ನು ಐಸಿಸಿ ಪರಿಶೀಲಿಸಿತ್ತು. ಈ ವೇಳೆ ಅಕಿಲಾ ಅವರ ಬೌಲಿಂಗ್ ಶೈಲಿ, ಅನುಮತಿ ನೀಡಲಾಗಿರುವ 15 ಡಿಗ್ರಿ ಮಟ್ಟವನ್ನು ಮೀರಿದ್ದು ಕಂಡು ಬಂದಿತ್ತು. ಅಂದ್ಹಾಗೆ, ಶ್ರೀಲಂಕಾದಲ್ಲಿ ನಡೆದಿದ್ದ ಮೊದಲ ಟೆಸ್ಟ್ ನಲ್ಲಿ ಪ್ರವಾಸಿ ಇಂಗ್ಲೆಂಡ್ 211 ರನ್ ಜಯ ದಾಖಲಿಸಿತ್ತು.

Story first published: Monday, December 10, 2018, 22:37 [IST]
Other articles published on Dec 10, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+