
ಭಾರತ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಗೆ ಸಜ್ಜಾಗುತ್ತಿದ್ದರೆ ಇತ್ತ ಟಿ20 ಶ್ರೇಯಾಂಕಪಟ್ಟಿಯಲ್ಲಿ ಟೀಮ್ ಇಂಡಿಯಾದ ಇಬ್ಬರು ಪ್ರಮುಖ ಆಟಗಾರರು ಭಾರೀ ಏರಿಕೆ ಕಂಡಿದ್ದಾರೆ. ಅದ್ಭುತ ಫಾರ್ಮ್‌ನಲ್ಲಿರುವ ಟೀಮ್ ಇಂಡಿಯಾದ ಯುವ ಆರಂಭಿಕ ಆಟಗಾರ ಶುಬ್ಮನ್ ಗಿಲ್ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಭರ್ಜರಿ ಶತಕ ಸಿಡಿಸಿದ್ದರು. ಈ ಮೂಲಕ ಭಾರತ ನಿರ್ಣಾಯಕ ಪಂದ್ಯದಲ್ಲಿ ಭರ್ಜರಿ ಗೆಲುವಿಗೆ ಕಾರಣವಾಗಿದ್ದಾರೆ. ಈ ಪ್ರದರ್ಶನದ ಕಾರಣದಿಂದಾಗಿ ಶುಬ್ಮನ್ ಗಿಲ್ ವೃತ್ತಿ ಜೀವನದ ಅತ್ಯುತ್ತಮ 3ನೇ ಶ್ರೇಯಾಂಕಕ್ಕೆ ಏರುವಲ್ಲಿ ಸಫಲವಾಗಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಗಿಲ್ 63 ಎಸೆತಗಳಲ್ಲಿ ಔಟಾಗದೆ 126 ರನ್ ಗಳಿಸಿದ ಕಾರಣ 168 ರನ್‌ಗಳ ಬೃಹತ್ ಗೆಲುವು ಸಾಧಿಸಿತ್ತು ಈ ಮೂಲಕ ಏಕದಿನ ಸರಣಿಯನ್ನು 2-1 ರಿಂದ ವಶಕ್ಕೆ ಪಡೆಯಲು ಗಿಲ್ ಕಾರಣವಾದರು. ಈ ಭರ್ಜರಿ ಪ್ರದರ್ಶನದ ಕಾರಣದಿಂದಾಗಿ ಗಿಲ್ ಬರೊಬ್ಬರಿ 168 ಸ್ಥಾನಗಳ ಏರಿಕೆ ಕಂಡಿದ್ದಾರೆ. ಇದೀಗ ಎಲ್ಲಾ ಮೂರು ಮಾದರಿಯಲ್ಲಿ ಶತಕ ಸಿಡಿಸಿರುವ ಗಿಲ್, ಏಕದಿನದಲ್ಲಿ ಆರನೇ ಹಾಗೂ ಟೆಸ್ಟ್‌ನಲ್ಲಿ 62ನೇ ಶ್ರೇಯಾಂಕ ಪಡೆದುಕೊಂಡಿದ್ದಾರೆ.
ಇನ್ನು ಭಾರತ ತಂಡದ ಮತ್ತೋರ್ವ ಯುವ ಆಟಗಾರ ಎಡಗೈ ವೇಗದ ಬೌಲರ್ ಅರ್ಷ್‌ದೀಪ್ ಸಿಂಗ್ ಕೂಡ ಏರಿಕೆ ಕಂಡಿದ್ದಾರೆ. ಅರ್ಶ್‌ದೀಪ್ ಅಹ್ಮದಾಬಾದ್‌ನಲ್ಲಿ ನಡೆದ ನಿರ್ಣಾಯಕ ಪಂದ್ಯದಲ್ಲಿ 16 ರನ್‌ಗಳಿಗೆ 2 ವಿಕೆಟ್ ಪಡೆದುಕೊಂಡಿದ್ದರು. ಇದರ ಕಾರಣದಿಂದ 8 ಸ್ಥಾನಗಳ ಏರಿಕೆ ಕಂಡಿರುವ ಅರ್ಶ್‌ದೀಪ್ ವೃತ್ತಿಜೀವನದ ಅತ್ಯುತ್ತಮ 13 ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಇನ್ನು ನ್ಯೂಜಿಲೆಂಡ್ ವಿರುದ್ಧದ ಟಿ20 ಪಂದ್ಯದಲ್ಲಿ ಮಿಂಚಿನ ಪ್ರದರ್ಶನ ನೀಡಿರುವ ಮತ್ತೋರ್ವ ಆಟಗಾರ ಹಾರ್ದಿಕ್ ಪಾಂಡ್ಯ. ಕಿವೀಸ್ ವಿರುದ್ಧದ ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸಿರುವ ಹಾರ್ದಿಕ್ ಪಾಂಡ್ಯ ಅಂತಿಮ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡು ವಿಭಾಗದಲ್ಲಿಯೂ ಅದ್ಭುತ ಪ್ರದರ್ಶನ ನೀಡಿದ್ದಾರೆ. ಬೌಲಿಂಗ್‌ನಲ್ಲಿ 16 ರನ್‌ಗಳಿಗೆ 4 ವಿಕೆಟ್ ಪಡೆದುಕೊಂಡಿದ್ದ ಹಾರ್ದಿಕ್ ಬ್ಯಾಟಿಂಗ್‌ನಲ್ಲಿ 17 ಎಸೆತಗಳಲ್ಲಿ 30 ರನ್ ಬಾರಿಸಿದ್ದರು.
ಬ್ಯಾಟರ್‌ಗಳ ಪಟ್ಟಿಯಲ್ಲಿ 53ನೇ ಸ್ಥಾನದಿಂದ 50ನೇ ಸ್ಥಾನಕ್ಕೆ ಏರಿಕೆ ಕಂಡಿರುವ ಹಾರ್ದಿಕ್ ಬೌಲರ್‌ಗಳ ಪಟ್ಟಿಯಲ್ಲಿ 66ನೇ ಸ್ಥಾನದಿಂದ 46ನೇ ಸ್ಥಾನವನ್ನು ಗಳಿಸಿದ್ದಾರೆ. ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದಿರುವ ಹಾರ್ದಿಕ್ ಅಗ್ರಸ್ಥಾನದಲ್ಲಿರುವ ಶಕೀಬ್ ಅಲ್ ಹಸನ್ ಅವರಿಗಿಂತ ಎರಡು ಅಂಕಗಳ ಹಿಂದಿದ್ದಾರೆ.
ಕಿಂಬರ್ಲಿಯಲ್ಲಿ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ಅವರ ಮ್ಯಾಚ್ ವಿನ್ನಿಂಗ್ 131 ರನ್‌ಗಳು ಅವರಿಗೆ 6 ಸ್ಥಾನಗಳ ಏರಿಕೆ ನೀಡಿದೆ. ಹೀಗಾಗಿ ಬಟ್ಲರ್ ಟಾಪ್ 20ಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಇನ್ನು ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಲುಂಗಿ ಎನ್‌ಗಿಡಿ ಈ ಪಂದ್ಯದಲ್ಲಿ 62 ರನ್‌ಗಳಿಗೆ 4 ವಿಕೆಟ್ ಸಂಪಾದಿಸಿದ್ದರು. ಹೀಗಾಗಿ ಅವರು 19 ನೇ ಸ್ಥಾನಕ್ಕೆ ಏರಿದ್ದಾರೆ.