ICC T20 Ranking: ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದ ಬಳಿಕ ಟಿ20 ಶ್ರೇಯಾಂಕದಲ್ಲಿ ಸ್ಮೃತಿ ಮಂಧಾನ ಭಾರೀ ಏರಿಕೆ
ಸೋಮವಾರ, ಸೆಪ್ಟೆಂಬರ್ 25ರಂದು ಚೀನಾದ ಹ್ಯಾಂಗ್‌ಝೌನಲ್ಲಿ ನಡೆದ 2023ರ ಏಷ್ಯನ್ ಗೇಮ್ಸ್‌ನ ಮಹಿಳಾ ಕ್ರಿಕೆಟ್ ಪಂದ್ಯಾವಳಿಯ ಫೈನಲ್‌ನಲ್ಲಿ ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ತಂಡವು ಫೈನಲ್‌ನಲ್ಲಿ ಶ್ರೀಲಂಕಾ ತಂಡವನ್ನು 19 ರನ್‌ಗಳಿಂದ ಸೋಲಿಸಿತು.
ಈ ಮೂಲಕ ಭಾರತ ಮಹಿಳಾ ತಂಡವು ಕ್ರಿಕೆಟ್‌ನಲ್ಲಿ ತನ್ನ ಚೊಚ್ಚಲ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕವನ್ನು ಗೆದ್ದುಕೊಂಡಿತು. ರನ್ನರ್-ಅಪ್ ಶ್ರೀಲಂಕಾ ಮಹಿಳಾ ತಂಡ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿತು.

ಇದೀಗ ಐಸಿಸಿ ಮಹಿಳಾ ಟಿ20 ಬ್ಯಾಟಿಂಗ್ ಶ್ರೇಯಾಂಕದಲ್ಲಿ ಭಾರತ ತಂಡದ ಉಪನಾಯಕಿ ಹಾಗೂ ಸ್ಟಾರ್ ಬ್ಯಾಟರ್ ಸ್ಮೃತಿ ಮಂಧಾನ ಅವರು ಅಗ್ರ ಮೂರನೇ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ.
712 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಭಾರತದ ಸ್ಮೃತಿ ಮಂಧಾನ ಅವರು ದಕ್ಷಿಣ ಆಫ್ರಿಕಾದ ಲಾರಾ ವೊಲ್ವಾರ್ಡ್ಟ್ (703) ಅವರನ್ನು ಹಿಂದಿಕ್ಕಿ ಮೂರನೇ ಸ್ಥಾನಕ್ಕೇ ಏರಿದ್ದಾರೆ. ಸದ್ಯ ಆಸ್ಟ್ರೇಲಿಯಾದ ತಹ್ಲಿಯಾ ಮೆಕ್‌ಗ್ರಾತ್ (784) ಮತ್ತು ಬೆತ್ ಮೂನಿ (777) ಮೊದಲ ಎರಡು ಸ್ಥಾನಗಳಲ್ಲಿದ್ದಾರೆ.
ಹರ್ಮನ್‌ಪ್ರೀತ್ ಕೌರ್ ಅನುಪಸ್ಥಿತಿಯಲ್ಲಿ 2023ರ ಏಷ್ಯನ್ ಗೇಮ್ಸ್‌ನ ಮೊದಲ ಎರಡು ಪಂದ್ಯಗಳಲ್ಲಿ ಸ್ಮೃತಿ ಮಂಧಾನ ಭಾರತ ಮಹಿಳಾ ತಂಡವನ್ನು ಮುನ್ನಡೆಸಿದರು.

ಸ್ಮೃತಿ ಮಂಧಾನ 26.67ರ ಸರಾಸರಿಯಲ್ಲಿ 80 ರನ್‌ಗಳೊಂದಿಗೆ ಮತ್ತು 109.59 ಸ್ಟ್ರೈಕ್ ರೇಟ್‌ನಲ್ಲಿ ಮೂರನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಎಡಗೈ ಬ್ಯಾಟರ್ ಸ್ಮೃತಿ ಮಂಧಾನ ಫೈನಲ್‌ನಲ್ಲಿ ತಾಳ್ಮೆಯ 45 ಎಸೆತಗಳಲ್ಲಿ 46 ರನ್ ಗಳಿಸುವುದರೊಂದಿಗೆ ಅಗ್ರ ಸ್ಕೋರ್ ಮಾಡಿದರು.
ಫೈನಲ್ ಪಂದ್ಯದಲ್ಲಿ ಸ್ಮೃತಿ ಮಂಧಾನಾಗೆ ಉತ್ತಮ ಸಾಥ್ ನೀಡಿದ ಜೆಮಿಮಾ ರೋಡ್ರಿಗಸ್ ತಂಡದ ಸ್ಕೋರ್ ಹೆಚ್ಚಿಸಲು ನೆರವಾದರು. ರೋಡ್ರಿಗಸ್ 129.76 ಸ್ಟ್ರೈಕ್ ರೇಟ್‌ನಲ್ಲಿ 109 ರನ್ ಗಳಿಸುವ ಮೂಲಕ ಪಂದ್ಯಾವಳಿಯ ಅಗ್ರ ರನ್ ಸ್ಕೋರರ್ ಆಗಿದ್ದಾರೆ.
ಜೆಮಿಮಾ ರೋಡ್ರಿಗಸ್ ಪ್ರದರ್ಶನಗಳು ಐಸಿಸಿ ಮಹಿಳಾ ಟಿ20 ಶ್ರೇಯಾಂಕದಲ್ಲಿ ಸ್ಥಾನ ಹೆಚ್ಚಿಸಲು ಸಹಾಯ ಮಾಡಿದ್ದು, ಸದ್ಯ 12ನೇ ಸ್ಥಾನದಲ್ಲಿದ್ದಾರೆ. ಇನ್ನು ಕೇವಲ ಫೈನಲ್ ಪಂದ್ಯದಲ್ಲಿ ಮಾತ್ರ ಆಡಿದ ಹರ್ಮನ್‌ಪ್ರೀತ್ ಕೌರ್ 13ನೇ ಸ್ಥಾನಕ್ಕೆ ಜಾರಿದ್ದಾರೆ.
ರನ್ನರ್-ಅಪ್ ಶ್ರೀಲಂಕಾದ ನಾಯಕಿ ಚಾಮರಿ ಅಥಾಪತ್ತು ಅವರು ಕಳಪೆ ಫಾರ್ಮ್‌ನ ಪಂದ್ಯಾವಳಿಯನ್ನು ಹೊಂದಿದ್ದರು ಮತ್ತು ಮೆಗ್ ಲ್ಯಾನಿಂಗ್ ಅವರೊಂದಿಗೆ ಜಂಟಿ-ಏಳನೇ ಸ್ಥಾನ ಪಡೆದುಕೊಳ್ಳಲು ಎರಡು ಸ್ಥಾನಗಳ ಕುಸಿತ ಕಂಡರು.
ಐಸಿಸಿ ಮಹಿಳಾ ಟಿ20 ಶ್ರೇಯಾಂಕದಲ್ಲಿ ಸ್ಥಾನ ಕಳೆದುಕೊಂಡ ಭಾರತೀಯ ಬೌಲರ್‌ಗಳು
ಇದೇ ವೇಳೆ ಐಸಿಸಿ ಮಹಿಳಾ ಟಿ20 ಬೌಲಿಂಗ್ ಶ್ರೇಯಾಂಕದಲ್ಲಿ ದೊಡ್ಡ ಬದಲಾವಣೆ ಕಂಡಿದೆ, ವಿಶೇಷವಾಗಿ ಭಾರತೀಯರಿಗೆ. ದೀಪ್ತಿ ಶರ್ಮಾ, ರೇಣುಕಾ ಸಿಂಗ್, ಸ್ನೇಹ್ ರಾಣಾ ಮತ್ತು ರಾಜೇಶ್ವರಿ ಗಾಯಕ್ವಾಡ್ ತಲಾ ಒಂದೊಂದು ಸ್ಥಾನ ಕುಸಿತ ಕಂಡಿದ್ದಾರೆ.
ವಿಶೇಷವಾಗಿ ದೀಪ್ತಿ ಶರ್ಮಾ ಏಷ್ಯನ್ ಗೇಮ್ಸ್‌ನಲ್ಲಿ ಸ್ಥಿರ ಪ್ರದರ್ಶನಕ್ಕಾಗಿ ಹೋರಾಡಿದರು ಮತ್ತು ಆಸ್ಟ್ರೇಲಿಯಾದ ಡಾರ್ಸಿ ಬ್ರೌನ್‌ಗೆ ದಾರಿ ಮಾಡಿಕೊಟ್ಟು ನಾಲ್ಕನೇ ಸ್ಥಾನಕ್ಕೆ ಕುಸಿದರು. ಇಂಗ್ಲೆಂಡ್‌ನ ಸೋಫಿ ಎಕ್ಲೆಸ್ಟೋನ್ ಮತ್ತು ದಕ್ಷಿಣ ಆಫ್ರಿಕಾದ ನಾನ್ಕುಲುಲೆಕೊ ಮ್ಲಾಬಾ ಮೊದಲ ಎರಡು ಸ್ಥಾನದಲ್ಲಿದ್ದಾರೆ.
ಇನ್ನು ಪೂಜಾ ವಸ್ತ್ರಾಕರ್ ಅವರು ಏಷ್ಯನ್ ಗೇಮ್ಸ್‌ನಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದರು ಮತ್ತು 7.60ರ ಸರಾಸರಿಯಲ್ಲಿ 5 ವಿಕೆಟ್‌ಗಳನ್ನು ಪಡೆದರು. ಪೂಜಾ ಐಸಿಸಿ ಟಿ20 ಬೌಲಿಂಗ್ ಶ್ರೇಯಾಂಕದಲ್ಲಿ 32ನೇ ಸ್ಥಾನಕ್ಕೆ ಏರಲು ಸಹಾಯ ಮಾಡಿತು.
ಶ್ರೀಲಂಕಾದ ಇನೋಕಾ ರಣವೀರ ಕೂಡ ಸ್ಥಾನ ಹೆಚ್ಚಿಸಿಕೊಂಎಡು ಪಡೆದು ಐದನೇ ಸ್ಥಾನದಲ್ಲಿದ್ದರೆ, ಮೂರು ವಿಕೆಟ್ ಪಡೆದ ಪಾಕಿಸ್ತಾನದ ನಶ್ರಾ ಸಂಧು ಐದು ಸ್ಥಾನ ಮೇಲೇರಿ ಏಳನೇ ಸ್ಥಾನದಲ್ಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications