ICC T20 Rankings: ಬ್ಯಾಟಿಂಗ್ ಶ್ರೇಯಾಂಕದಲ್ಲಿ ಏರಿಕೆ ಕಂಡ ಬಾಬರ್ ಅಜಂ; ಅಗ್ರಸ್ಥಾನದಲ್ಲಿ ಭಾರತೀಯ
ಸದ್ಯ ಯುಎಸ್ಎ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ನಡೆಯುತ್ತಿರುವ 2024ರ ಟಿ20 ವಿಶ್ವಕಪ್ ನಡುವೆಯೇ ಐಸಿಸಿ ಟಿ20 ಸ್ವರೂಪದಲ್ಲಿ ಆಟಗಾರರ ಶ್ರೇಯಾಂಕಗಳನ್ನು ಬುಧವಾರ, ಜೂನ್ 12ರಂದು ಬಿಡುಗಡೆ ಮಾಡಿದೆ.
2024ರ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡ ಕಳಪೆ ಅಭಿಯಾನ ಹೊಂದಿದ್ದು, ಆಡಿದ ಮೂರು ಪಂದ್ಯಗಳಲ್ಲಿ ಎರಡು ಪಂದ್ಯಗಳನ್ನು ಸೋತು, ಸೂಪರ್ 8ರ ಹಂತಕ್ಕೆ ಅರ್ಹತೆ ಪಡೆಯುವ ಸಾಧ್ಯತೆಗಳು ಕ್ಷೀಣಿಸಿವೆ.

ಇದರ ನಡುವೆಯೇ, ಐಸಿಸಿ ಪುರುಷರ ಟಿ20 ಬ್ಯಾಟಿಂಗ್ ಶ್ರೇಯಾಂಕದಲ್ಲಿ ಪಾಕಿಸ್ತಾನ ತಂಡದ ನಾಯಕ ಮತ್ತು ಸ್ಟಾರ್ ಬ್ಯಾಟರ್ ಬಾಬರ್ ಅಜಂ 3ನೇ ಸ್ಥಾನವನ್ನು ಪಡೆಯಲು ಒಂದು ಸ್ಥಾನ ಮೇಲಕ್ಕೇರಿದ್ದಾರೆ. ಬಾಬರ್ ಅಜಂ ಕಳೆದೆರಡು ದಿನಗಳಿಂದ ತೀವ್ರ ಟೀಕೆಗಳ ನಡುವೆಯೇ ಶ್ರೇಯಾಂಕದಲ್ಲಿ ಏರಿಕೆ ಕಂಡಿದ್ದಾರೆ.
ಇದೇ ವೇಳೆ, ಭಾರತದ ಸ್ಟಾರ್ ಬ್ಯಾಟರ್ ಸೂರ್ಯಕುಮಾರ್ ಯಾದವ್ ಟಿ20 ಬ್ಯಾಟಿಂಗ್ ಶ್ರೇಯಾಂಕದಲ್ಲಿ ಅಗ್ರಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಹೀಗಾಗಿ, ಕಳೆದ ಒಂದು ವರ್ಷದಿಂದ ನಂ.1 ಟಿ20 ಬ್ಯಾಟರ್ ಆಗಿ ತಮ್ಮ ಪ್ರಾಬಲ್ಯವನ್ನು ಮುಂದುವರೆಸಿದ್ದಾರೆ.
ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ 2 ಸ್ಥಾನ ಮೇಲೇರಿ 5ನೇ ಸ್ಥಾನ ತಲುಪಿದ್ದಾರೆ. ಆಸ್ಟ್ರೇಲಿಯಾ ತಂಡದ ಸ್ಫೋಟಕ ಆರಂಭಿಕ ಬ್ಯಾಟರ್ ಟ್ರಾವಿಸ್ ಹೆಡ್ 6 ಸ್ಥಾನಗಳ ಮೇಲಕ್ಕೇರಿ ಅಗ್ರ 10ರಲ್ಲಿ ಸ್ಥಾನ ಪಡೆದರು.
ಅಫ್ಘಾನಿಸ್ತಾನ ತಂಡದ ಅನುಭವಿ ಆಟಗಾರ ಮೊಹಮ್ಮದ್ ನಬಿ ಟಿ20 ಆಲ್‌ರೌಂಡರ್ ಪಟ್ಟಿಯಲ್ಲಿ ನಂ.1 ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇತ್ತೀಚಿಗೆ ನ್ಯೂಜಿಲೆಂಡ್ ವಿರುದ್ಧ ಅಫ್ಘಾನಿಸ್ತಾನ 84 ರನ್‌ಗಳ ಗೆಲುವಿನ ಸಮಯದಲ್ಲಿ 2 ವಿಕೆಟ್‌ಗಳ ಸಾಧನೆಯ ನಂತರ ನಬಿ ಅವರ ಶ್ರೇಯಾಂಕದಲ್ಲಿ ಏರಿಕೆಯಾಗಿದೆ.
ಮೊಹಮ್ಮದ್ ನಬಿ 2 ಸ್ಥಾನ ಜಿಗಿದು ಅಗ್ರ ಶ್ರೇಯಾಂಕದ ಆಲ್‌ರೌಂಡರ್ ಎನಿಸಿಕೊಂಡರು. ಇದೇ ವೇಳೆ ಆಸ್ಟ್ರೇಲಿಯಾದ ಮಾರ್ಕಸ್ ಸ್ಟೊಯಿನಿಸ್ 3 ಸ್ಥಾನ ಮೇಲೇರಿ ನಬಿ ಅವರ ನಂತರದ ಸ್ಥಾನದಲ್ಲಿದ್ದಾರೆ.
ಈ ಹಿಂದೆ ನಂ.1 ಶ್ರೇಯಾಂಕದ ಆಲ್‌ರೌಂಡರ್ ಬಾಂಗ್ಲಾದೇಶದ ಅನುಭವಿ ಶಕೀಬ್ ಅಲ್ ಹಸನ್ ಅವರು ಶ್ರೇಯಾಂಕದಲ್ಲಿ ಐದನೇ ಸ್ಥಾನಕ್ಕೆ ಕುಸಿದಿದ್ದಾರೆ.
ಗಮನಾರ್ಹ ಏರಿಕೆ ಕಂಡ ಅಫ್ಘಾನಿಸ್ತಾನ ಆಟಗಾರರು
ಕೇವಲ ಮೊಹಮ್ಮದ್ ನಬಿ ಮಾತ್ರವಲ್ಲ, ಇತರ ಅಫ್ಘಾನಿಸ್ತಾನದ ಆಟಗಾರರು ಬೌಲಿಂಗ್ ಮತ್ತು ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಟಿ20 ಶ್ರೇಯಾಂಕದಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದ್ದಾರೆ.
ರಹಮನುಲ್ಲಾ ಗುರ್ಬಾಜ್ 2 ಪಂದ್ಯಗಳಲ್ಲಿ 154 ರನ್‌ಗಳೊಂದಿಗೆ 2024ರ ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದಾರೆ.
ಇಂಗ್ಲೆಂಡ್‌ನ ಸ್ಪಿನ್ನರ್ ಆದಿಲ್ ರಶೀದ್ ಟಿ20 ಬೌಲರ್‌ಗಳ ಶ್ರೇಯಾಂಕದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದು, ಶ್ರೀಲಂಕಾ ನಾಯಕ ವನಿಂದು ಹಸರಂಗ 2ನೇ ಸ್ಥಾನದಲ್ಲಿ ಮುಂದುವರೆದಿದ್ದಾರೆ.
ಅಫ್ಘಾನಿಸ್ತಾನ ತಂಡದ ನಾಯಕ ರಶೀದ್ ಖಾನ್ ನ್ಯೂಜಿಲೆಂಡ್ ವಿರುದ್ಧ 4 ವಿಕೆಟ್ ಕಬಳಿಸಿ 3ನೇ ಸ್ಥಾನ ಪಡೆದರು. ಆಡಿದ 2 ಪಂದ್ಯಗಳಲ್ಲಿ ಐದು ಮತ್ತು ನಾಲ್ಕು ವಿಕೆಟ್‌ಗಳನ್ನು ಕಬಳಿಸಿದ ಫಜಲ್ಹಾಕ್ ಫರೂಕಿ ಆರು ಸ್ಥಾನ ಮೇಲೇರಿ 4ನೇ ಸ್ಥಾನ ಪಡೆದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications