ICC Rankings: ಟಿ20 ಬೌಲಿಂಗ್ ಶ್ರೇಯಾಂಕದಲ್ಲಿ 2ನೇ ಸ್ಥಾನಕ್ಕೆ ಜಿಗಿದ ದೀಪ್ತಿ ಶರ್ಮಾ; ಟಿಟಾಸ್ ಸಾಧು ಭಾರೀ ಏರಿಕೆ
ಭಾರತ ಮಹಿಳಾ ಕ್ರಿಕೆಟ್ ತಂಡದ ಬೌಲರ್‌ಗಳಾದ ದೀಪ್ತಿ ಶರ್ಮಾ ಮತ್ತು ಟಿಟಾಸ್ ಸಾಧು ಐಸಿಸಿ ಟಿ20 ಬೌಲಿಂಗ್ ಶ್ರೇಯಾಂಕದಲ್ಲಿ ಭಾರೀ ಮುನ್ನಡೆ ಸಾಧಿಸಿದ್ದಾರೆ.
ಮಂಗಳವಾರ, ಜನವರಿ 9ರಂದು ಐಸಿಸಿ ಟಿ20 ಶ್ರೇಯಾಂಕಗಳನ್ನು ನವೀಕರಿಸಲಾಗಿದ್ದು, ಭಾರತೀಯ ಆಲ್‌ರೌಂಡರ್ ದೀಪ್ತಿ ಶರ್ಮಾ ನಾಲ್ಕು ಸ್ಥಾನಗಳ ಜಿಗಿತ ಕಂಡಿದ್ದಾರೆ ಮತ್ತು ಟಿಟಾಸ್ ಸಾಧು 50 ಸ್ಥಾನಗಳ ಏರಿಕೆಯೊಂದಿಗೆ ಇಬ್ಬರೂ ಸ್ಟಾರ್ ಬೌಲರ್‌ಗಳು ತಮ್ಮ ಪ್ರಯತ್ನಕ್ಕೆ ಫಲವನ್ನು ಪಡದಿದ್ದಾರೆ.
ದೀಪ್ತಿ ಶರ್ಮಾ ಇದೀಗ ಐಸಿಸಿ ಟಿ20 ಬೌಲರ್ ಶ್ರೇಯಾಂಕದಲ್ಲಿ ಎರಡನೇ ಸ್ಥಾನವನ್ನು ಪಡೆದರೆ, ಆಲ್‌ರೌಂಡರ್ ಶ್ರೇಯಾಂಕದಲ್ಲಿ ನಾಲ್ಕನೇ ಸ್ಥಾನದಲ್ಲಿ ತಮ್ಮ ಸ್ಥಾನವನ್ನು ಗಟ್ಟಿಗೊಳಿಸಿಕೊಂಡಿದ್ದಾರೆ.

723 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿರುವ ದೀಪ್ತಿ ಶರ್ಮಾ, 722 ರೇಟಿಂಗ್ ಪಾಯಿಂಟ್‌ಗಳನ್ನು ಹೊಂದಿರುವ ದಕ್ಷಿಣ ಆಫ್ರಿಕಾದ ನಾನ್ಕುಲುಲೆಕೊ ಮ್ಲಾಬಾ ಅವರನ್ನು ಹಿಂದಿಕ್ಕಿದ್ದಾರೆ.
ಇನ್ನು ಯುವ ಬೌಲರ್ ಟಿಟಾಸ್ ಸಾಧು ಬೌಲಿಂಗ್ ಶ್ರೇಯಾಂಕದಲ್ಲಿ 358 ರೇಟಿಂಗ್ ಪಾಯಿಂಟ್‌ಗಳೊಂದಿಗೆ 50 ಸ್ಥಾನಗಳ ಬೃಹತ್ ಏರಿಕೆ ಕಂಡು 92ನೇ ಸ್ಥಾನ ತಲುಪಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ ಈ ಇಬ್ಬರು ಆಟಗಾರ್ತಿಯರ ಅದ್ಭುತ ಪ್ರದರ್ಶನದ ನಂತರ ಶ್ರೇಯಾಂಕ ದೊಡ್ಡ ಬದಲಾವಣೆಯಾಗಿದೆ.
ಬ್ಯಾಟಿಂಗ್ ಶ್ರೇಯಾಂಕಕ್ಕೆ ಸಂಬಂಧಿಸಿದಂತೆ, ಆಸ್ಟ್ರೇಲಿಯಾದ ಮಹಿಳಾ ನಾಯಕಿ ಅಲಿಸ್ಸಾ ಹೀಲಿ ಟಾಪ್ 10 ಶ್ರೇಯಾಂಕಕ್ಕೆ ಮರಳಿದರು. ಅಲ್ಲದೆ, ಭಾರತದ ಸ್ಟಾರ್ ಬ್ಯಾಟರ್ ಸ್ಮೃತಿ ಮಂಧಾನ ತಮ್ಮ ನಾಲ್ಕನೇ ಸ್ಥಾನವನ್ನು ಮರಳಿ ಪಡೆದರು.
ಕಠಿಣ ಹೋರಾಟದ ನಂತರ ಟಿ20 ಸರಣಿ ವಶಪಡಿಸಿಕೊಂಡ ಆಸ್ಟ್ರೇಲಿಯಾ ವನಿತೆಯರು
ಭಾರತ ಮತ್ತು ಆಸ್ಟ್ರೇಲಿಯಾ ಮಹಿಳಾ ತಂಡಗಳ ಟಿ20 ಸರಣಿಯ ಕುರಿತು ಹೇಳುವುದಾದರೆ, ಆತಿಥೇಯ ಭಾರತ ಮಹಿಳೆಯರು ಮತ್ತು ಆಸ್ಟ್ರೇಲಿಯಾ ಮಹಿಳೆಯರು ಮೂರು ಟಿ20 ಪಂದ್ಯಗಳಲ್ಲಿ ಪರಸ್ಪರ ಮುಖಾಮುಖಿಯಾದರು ಮತ್ತು ಪ್ರತಿ ಪಂದ್ಯವು ಅಭಿಮಾನಿಗಳಿಗೆ ಭಾರೀ ರೋಚಕತೆ ನೀಡಿದವು.

ಭಾರತ ತಂಡವು ಮೊದಲ ಟಿ20 ಪಂದ್ಯವನ್ನು ಗೆದ್ದುಕೊಂಡಿತು. ಎರಡನೇ ಪಂದ್ಯವನ್ನು ಆಸ್ಟ್ರೇಲಿಯಾ ಗೆದ್ದುಕೊಂಡು ಸರಣಿಯನ್ನು ಸಮಬಲಗೊಳಿಸಿತು. ಅದೇ ನವಿ ಮುಂಬೈನ ಸ್ಟೇಡಿಯಂನಲ್ಲಿ ನಡೆದ ಸರಣಿ ನಿರ್ಣಾಯಕ ಪಂದ್ಯದಲ್ಲಿ ಆಸ್ಟ್ರೇಲಿಯಾ ವನಿತಾ ತಂಡ ಗೆದ್ದು ಬೀಗಿತು ಮತ್ತು ಸರಣಿಯನ್ನು 2-1 ಅಂತರದಲ್ಲಿ ವಶಪಡಿಸಿಕೊಂಡಿತು.
ಮಂಗಳವಾರ, ಡಿಸೆಂಬರ್ 9ರಂದು ನಡೆದ ಮೂರನೇ ಟಿ20 ಪಂದ್ಯದಲ್ಲಿ ಎರಡೂ ತಂಡಗಳು ಸೆಣಸಾಡಿದವು. ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಭಾರತ ಮಹಿಳಾ ತಂಡ 147 ರನ್‌ಗಳ ಉತ್ತಮ ಮೊತ್ತ ಕಲೆಹಾಕಿತು.
ಆರಂಭಿಕ ಬ್ಯಾಟರ್‌ಗಳಾದ ಶಫಾಲಿ ವರ್ಮಾ ಮತ್ತು ಸ್ಮೃತಿ ಮಂಧಾನ ಕ್ರಮವಾಗಿ 26 ಮತ್ತು 29 ರನ್ ಗಳಿಸುವ ಮೂಲಕ ತಂಡಕ್ಕೆ ಉತ್ತಮ ಆರಂಭ ನೀಡಿದರು. ನಂತರ ಬಂದ ರಿಚಾ ಘೋಷ್ 34 ರನ್ ಬಾರಿಸಿದರು.
148 ರನ್‌ಗಳ ಸವಾಲಿನ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಮಹಿಳಾ ತಂಡದ ಪರ ಅಲಿಸ್ಸಾ ಹೀಲಿ ಮತ್ತು ಬೆತ್ ಮೂನಿ ಜೋಡಿಯು ತಮ್ಮ ತಲಾ ಅರ್ಧಶತಕಗಳನ್ನು ಗಳಿಸಿದ ಕಾರಣ, ಆಸ್ಟ್ರೇಲಿಯಾದ ಮಹಿಳಾ ತಂಡ ಬ್ಯಾಟ್‌ನೊಂದಿಗೆ ಅದ್ಭುತ ಪ್ರದರ್ಶನ ನೀಡಿತು ಮತ್ತು 7 ವಿಕೆಟ್‌ಗಳಿಂದ ಪಂದ್ಯ ಹಾಗೂ ಸರಣಿಯನ್ನು ಸಹ ಗೆದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications