ICC Rankings: ಹಾರ್ದಿಕ್ ಪಾಂಡ್ಯ ನಂಬರ್-1 ಟಿ20 ಆಲ್‌ರೌಂಡರ್, ವರುಣ್ ಚಕ್ರವರ್ತಿಗೆ ನಿರಾಸೆ
ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಬಿಡುಗಡೆ ಮಾಡಿದ ಇತ್ತೀಚಿನ ಶ್ರೇಯಾಂಕದಲ್ಲಿ ಭಾರತ ತಂಡದ ಸ್ಟಾರ್ ಆಟಗಾರ ಹಾರ್ದಿಕ್ ಪಾಂಡ್ಯ ಟಿ20 ಕ್ರಿಕೆಟ್‌ನಲ್ಲಿ ನಂಬರ್-1 ಆಲ್‌ರೌಂಡರ್ ಆಗಿ ಉಳಿದಿದ್ದಾರೆ. ಅವರು ತಮ್ಮ ಮೊದಲ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ ಭಾರತವನ್ನು ಗೆಲುವಿನತ್ತ ಕೊಂಡೊಯ್ದ ನಂತರ, ಅವರು ನಿರಂತರವಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಪುರುಷರ ಟಿ20 ಬೌಲಿಂಗ್ ಶ್ರೇಯಾಂಕದಲ್ಲಿ ಭಾರತ ತಂಡದ ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಒಂದು ಸ್ಥಾನ ಕುಸಿದು ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ.
ವರುಣ್ ಚಕ್ರವರ್ತಿ 706 ರೇಟಿಂಗ್ ಅಂಕಗಳೊಂದಿಗೆ ನ್ಯೂಜಿಲೆಂಡ್‌ನ ಜಾಕೋಬ್ ಡಫಿ (723) ಮತ್ತು ವೆಸ್ಟ್ ಇಂಡೀಸ್‌ನ ಅಕೀಲ್ ಹುಸೇನ್ (707) ಅವರಿಗಿಂತ ಹಿಂದಿದ್ದಾರೆ. ಲೆಗ್ ಸ್ಪಿನ್ನರ್ ರವಿ ಬಿಷ್ಣೋಯ್ (674) ಮತ್ತು ಎಡಗೈ ವೇಗಿ ಅರ್ಷದೀಪ್ ಸಿಂಗ್ (653) ಕ್ರಮವಾಗಿ ಏಳನೇ ಮತ್ತು ಹತ್ತನೇ ಸ್ಥಾನಗಳಲ್ಲಿ ಅಗ್ರ 10 ರಲ್ಲಿರುವ ಇತರ ಇಬ್ಬರು ಭಾರತೀಯ ಬೌಲರ್‌ಗಳಾಗಿದ್ದಾರೆ.

ಅಕ್ಷರ್ ಪಟೇಲ್ 13ನೇ ಸ್ಥಾನದಲ್ಲಿದ್ದಾರೆ. ಪಾಕಿಸ್ತಾನ ವಿರುದ್ಧದ 4-1 ಅಂತರದಲ್ಲಿ ಟಿ20 ಸರಣಿ ಗೆಲುವಿನಲ್ಲಿ ಅದ್ಭುತ ಪ್ರದರ್ಶನ ನೀಡಿದ ನಂತರ ನ್ಯೂಜಿಲೆಂಡ್ ವೇಗಿ ಜಾಕೋಬ್ ಡಫಿ ಬೌಲಿಂಗ್ ಶ್ರೇಯಾಂಕದಲ್ಲಿ ಮತ್ತೆ ನಂಬರ್ 1 ಸ್ಥಾನವನ್ನು ಪಡೆದುಕೊಂಡಿದ್ದಾರೆ. ವೆಸ್ಟ್ ಇಂಡೀಸ್ ಸ್ಪಿನ್ನರ್ ಅಕೀಲ್ ಹೊಸೈನ್ ಅವರನ್ನು ಹಿಂದಿಕ್ಕಿದ ಡಫಿ, ಸರಣಿಯಲ್ಲಿ 13 ವಿಕೆಟ್‌ಗಳನ್ನು ಕಬಳಿಸಿದರು. ಡಫಿ ಯಾವುದೇ ಸ್ವರೂಪದಲ್ಲಿ ನಂ. 1 ಶ್ರೇಯಾಂಕವನ್ನು ಸಾಧಿಸಿದ್ದು ಇದೇ ಮೊದಲು. ಅವರು 2018 ರಲ್ಲಿ ಇಶ್ ಸೋಧಿ ನಂತರ ಟಿ20 ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ಮೊದಲ ನ್ಯೂಜಿಲೆಂಡ್ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಅಭಿಷೇಕ್ ಎರಡನೇ ಸ್ಥಾನ
ಭಾರತ ತಂಡ ಯುವ ಎಡಗೈ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಟಿ20 ಬ್ಯಾಟಿಂಗ್ ಶ್ರೇಯಾಂಕದಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ ಅಗ್ರಸ್ಥಾನದಲ್ಲಿದ್ದರೆ, ಇಂಗ್ಲೆಂಡ್‌ನ ಫಿಲ್ ಸಾಲ್ಟ್ ಮೂರನೇ ಸ್ಥಾನದಲ್ಲಿದ್ದಾರೆ. ಭಾರತದ ಇನ್ನಿಬ್ಬರು ಬ್ಯಾಟರ್‍ಗಳಾದ ತಿಲಕ್ ವರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನದಲ್ಲಿದ್ದಾರೆ.
ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಹಾರ್ದಿಕ್ 252 ರೇಟಿಂಗ್ ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಅವರ ನಂತರ ನೇಪಾಳದ ದೀಪೇಂದ್ರ ಸಿಂಗ್ ಐರಿ ಮತ್ತು ಆಸ್ಟ್ರೇಲಿಯಾದ ಮಾರ್ಕಸ್ ಸ್ಟೊಯಿನಿಸ್ ಇದ್ದಾರೆ. ನ್ಯೂಜಿಲೆಂಡ್‌ನ ಟಿಮ್ ಸೀಫರ್ಟ್ ಟಾಪ್ 10 ರಲ್ಲಿ ಸ್ಥಾನ ಪಡೆದಿದ್ದಾರೆ. ಪಾಕಿಸ್ತಾನ ವಿರುದ್ಧದ ಸರಣಿಯಲ್ಲಿ 62.25 ಸರಾಸರಿಯಲ್ಲಿ 249 ರನ್ ಗಳಿಸುವ ಮೂಲಕ ಅವರು ಎಂಟನೇ ಸ್ಥಾನದಲ್ಲಿದ್ದಾರೆ. ಫಿನ್ ಅಲೆನ್ ಕೂಡ ಒಂದು ಸ್ಥಾನ ಮೇಲಕ್ಕೇರಿ 15 ನೇ ಸ್ಥಾನಕ್ಕೆ ತಲುಪಿದ್ದಾರೆ.
ಚಾಪ್ಮನ್-ಸಲ್ಮಾನ್ ಬಂಪರ್
ಮಾರ್ಕ್ ಚಾಪ್ಮನ್ 111 ಎಸೆತಗಳಲ್ಲಿ 132 ರನ್ ಗಳಿಸಿದ ಬಳಿಕ ಏಕದಿನ ಶ್ರೇಯಾಂಕದಲ್ಲಿ 24 ಸ್ಥಾನಗಳ ಏರಿಕೆ ಕಂಡು 78 ನೇ ಸ್ಥಾನಕ್ಕೆ ತಲುಪಿದ್ದಾರೆ. 58 ರನ್‌ಗಳ ಇನ್ನಿಂಗ್ಸ್ ನಂತರ ಪಾಕಿಸ್ತಾನದ ಸಲ್ಮಾನ್ ಆಘಾ ಆರು ಸ್ಥಾನಗಳ ಏರಿಕೆ ಕಂಡು 37 ನೇ ಸ್ಥಾನಕ್ಕೆ ತಲುಪಿದ್ದಾರೆ. ಬೌಲರ್‌ಗಳಲ್ಲಿ ಪಾಕಿಸ್ತಾನದ ಹ್ಯಾರಿಸ್ ರೌಫ್ ಒಂಬತ್ತು ಸ್ಥಾನ ಬಡ್ತಿ ಪಡೆದು 16 ನೇ ಸ್ಥಾನಕ್ಕೆ ತಲುಪಿದ್ದರೆ, ನಸೀಮ್ ಶಾ ಒಂದು ಸ್ಥಾನ ಬಡ್ತಿ ಪಡೆದು 42 ನೇ ಸ್ಥಾನದಲ್ಲಿದ್ದಾರೆ. ನ್ಯೂಜಿಲೆಂಡ್ ವೇಗಿ ವಿಲಿಯಂ ಒ'ರೂರ್ಕ್ 15 ಸ್ಥಾನ ಬಡ್ತಿ ಪಡೆದು 56ನೇ ಸ್ಥಾನಕ್ಕೆ ಮತ್ತು ಡಫಿ 14 ಸ್ಥಾನ ಬಡ್ತಿ ಪಡೆದು 95ನೇ ಸ್ಥಾನಕ್ಕೆ ತಲುಪಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications