For Quick Alerts
ALLOW NOTIFICATIONS  
For Daily Alerts
 

ICC T20 Rankings: ಬುಮ್ರಾ, ಶಿವಂ ದುಬೆ, ಇಶಾನ್‌ ಕಿಶನ್‌ಗೆ ಬಡ್ತಿ

ಟಿ20 ವಿಶ್ವಕಪ್‌ ಮಧ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ನೂತನ ರ್ಯಾಂಕಿಂಗ್ ಬಿಡುಗಡೆ ಮಾಡಿದೆ. ಟಿ20 ವಿಶ್ವಕಪ್‌ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ಶ್ರೇಯಾಂಕದಲ್ಲಿ ಏರಿಕೆ ಆಗಿದೆ. ಟೀಮ್ ಇಂಡಿಯಾದ ಆಟಗಾರರ ಆರ್ಭಟ ರ್ಯಾಂಕಿಂಗ್‌ನಲ್ಲಿ ಮುಂದುವರೆದಿದೆ. ಯಾರ್ಕರ್‌ ಸ್ಪೆಷಲಿಸ್ಟ್‌ ಜಸ್ಪ್ರೀತ್ ಬುಮ್ರಾ ಬೌಲರ್‌ಗಳ ಶ್ರೇಯಾಂಕದಲ್ಲಿ ಟಾಪ್‌ 10ರೊಳಗೆ ಸ್ಥಾನ ಪಡೆದಿದ್ದಾರೆ.

ಟಿ20 ವಿಶ್ವಕಪ್‌ನಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿರುವ ಅಭಿಷೇಕ್‌ ಶರ್ಮಾ, ತಮ್ಮ ಶ್ರೇಯಾಂಕವನ್ನು ಕಾಯ್ದುಕೊಂಡಿದ್ದಾರೆ. ಇವರು 877 ಅಂಕಗಳೊಂದಿಗೆ ಮೊದಲ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಇಂಗ್ಲೆಂಡ್ ಆಟಗಾರ ಫಿಲ್ ಸಾಲ್ಟ್‌ ಎರಡನೇ ಸ್ಥಾನ ಪಡೆದಿದ್ದಾರೆ. ಚುಟುಕು ವಿಶ್ವಕಪ್‌ನಲ್ಲಿ ಪಾಕಿಸ್ತಾನದ ಪರ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ಶಾಹಿಜ್‌ಬಾದ ಫರ್ಹಾನ್‌ ಎರಡು ಸ್ಥಾನ ಏರಿಕೆ ಕಂಡಿದ್ದು, ಮೂರನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ.

ICC T20 Rankings

ಟಿ20 ವಿಶ್ವಕಪ್‌ನಲ್ಲಿ ಭಾರತದ ಪರ ಇನಿಂಗ್ಸ್ ಆರಂಭಿಸುವ ಇಶಾನ್‌ ಕಿಶನ್‌ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಇವರ ಶ್ರೇಯಾಂಕದಲ್ಲೂ ಭಾರೀ ಏರಿಕೆ ಆಗಿದೆ. ಇವರು ಮೂರು ಸ್ಥಾನ ಬಡ್ತಿ ಪಡೆದಿದ್ದು 5ನೇ ಸ್ಥಾನದಲ್ಲಿದ್ದಾರೆ. ಟೀಮ್ ಇಂಡಿಯಾದ ನಾಯಕ ಸೂರ್ಯಕುಮಾರ್ ಯಾದವ್ ಆರನೇ ಸ್ಥಾನದಲ್ಲಿ ಮುಂದುವರೆದಿದ್ದಾರೆ. ಭಾರತದ ತಿಲಕ್ ವರ್ಮಾ ಮೂರು ಸ್ಥಾನ ಕುಸಿತ ಕಂಡಿದ್ದು ಏಳನೇ ಸ್ಥಾನಕ್ಕೆ ಕುಸಿದಿದ್ದಾರೆ. ಪ್ರಸಕ್ತ ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡುತ್ತಿರುವ ಆಲ್‌ರೌಂಡರ್‌ ಶಿವಂ ದುಬೆ ಶ್ರೇಯಾಂಕದಲ್ಲಿ 13 ಸ್ಥಾನ ಬಡ್ತಿ ಪಡೆದಿದ್ದು, 28ನೇ ಸ್ಥಾನದಲ್ಲಿದ್ದಾರೆ.

ಟಾಪ್‌ 10ರಲ್ಲಿ ಬುಮ್ರಾ

ಬೌಲರ್‌ಗಳ ಶ್ರೇಯಾಂಕದಲ್ಲೂ ಭಾರತ ವರುಣ್‌ ಚಕ್ರವರ್ತಿ ನಂಬರ್ 1 ಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಇವರು 790 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನ ಹೊಂದಿದ್ದಾರೆ. ಅಫ್ಘಾನಿಸ್ತಾನದ ರಶೀದ್ ಖಾನ್ 753 ಅಂಕಗಳೊಂದಿಗೆ ಎರಡನೇ ಸ್ಥಾನವನ್ನು ಹೊಂದಿದ್ದಾರೆ. ದಕ್ಷಿಣ ಆಫ್ರಿಕಾದ ಕಾರ್ಬಿನ್ ಬಾಷ್ ಭಾರೀ ಜಿಗಿತ ಕಂಡಿದ್ದಾರೆ. ಇವರು 21 ಸ್ಥಾನ ಏರಿಕೆ ಕಂಡಿದ್ದು, ಸದ್ಯ ಮೂರನೇ ಸ್ಥಾನವನ್ನು ಪಡೆದಿದ್ದಾರೆ. ಇಂಗ್ಲೆಂಡ್ ತಂಡದ ಆದೀಲ್ ರಶೀದ್‌ ನಾಲ್ಕನೇ ಸ್ಥಾನವನ್ನು ಹೊಂದಿದ್ದು, ಪಾಕಿಸ್ತಾನದ ಅಬ್ರಾರ್ ಅಹ್ಮದ್‌ ಐದನೇ ಸ್ಥಾನದಲ್ಲಿದ್ದಾರೆ.

ICC T20 Rankings

ವೆಸ್ಟ್‌ ಇಂಡೀಸ್ ತಂಡದ ಮ್ಯಾಥ್ಯೂ ಫೋರ್ಡ್ 23 ಸ್ಥಾನ ಏರಿಕೆ ಕಂಡಿದ್ದು, ಏಳನೇ ಸ್ಥಾನದಲ್ಲಿದ್ದಾರೆ. ಭಾರತ ತಂಡದ ಯಾರ್ಕರ್ ಸ್ಪೆಷಲಿಸ್ಟ್‌ ಜಸ್ಪ್ರೀತ್ ಬುಮ್ರಾ ಸದ್ಯ 8ನೇ ಸ್ಥಾನದಲ್ಲಿದ್ದು, ಇವರು 7 ಸ್ಥಾನ ಬಡ್ತಿ ಪಡೆದಿದ್ದಾರೆ.

ದುಬೆಗೆ ಬಡ್ತಿ

ಆಲ್‌ರೌಂಡರ್‌ ಶ್ರೇಯಾಂಕದಲ್ಲಿ ಜಿಂಬಾಬ್ವೆ ತಂಡದ ಸಿಕಂದರ್‌ ರಾಜ್‌ ಮೊದಲ ಸ್ಥಾನದಲ್ಲಿ ಮುಂದುವರೆದಿದ್ದಾರೆ. ಈ ಸ್ಥಾನವನ್ನು ಮೊದಲು ಅಲಂಕರಿಸಿದ್ದ ಪಾಕಿಸ್ತಾನದ ಸೈಮ್ ಅಯೂಬ್‌ ಎರಡನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ. ಭಾರತದ ಸ್ಟಾರ್ ಪ್ಲೇಯರ್ ಹಾರ್ದಿಕ್ ಪಾಂಡ್ಯ ಮೂರನೇ ಸ್ಥಾನದಲ್ಲಿ ಮುಂದುವರೆದಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡಿರುವ ಶಿವಂ ದುಬೆ 2 ಸ್ಥಾನ ಏರಿಕೆ ಕಂಡಿದ್ದು ಏಳನೇ ಸ್ಥಾನದಲ್ಲಿದ್ದಾರೆ.

Story first published: Wednesday, February 25, 2026, 18:15 [IST]
Other articles published on Feb 25, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+