ICC T20 Rankings: ಅಗ್ರಸ್ಥಾನದಲ್ಲೇ ಇಶಾನ್ ಕಿಶನ್; ಟಾಪ್ 10ರಿಂದ ಹೊರಬಿದ್ದ ಸೂರ್ಯಕುಮಾರ್ ಯಾದವ್
ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ನೂತನ ಐಸಿಸಿ ಟಿ20 ಶ್ರೇಯಾಂಕವನ್ನು ಬುಧವಾರ ಬಿಡುಗಡೆ ಮಾಡಿದೆ. ಈ ಬಾರಿಯೂ ನೂತನ ಶ್ರೇಯಾಂಕ ಪಟ್ಟಿಯಲ್ಲೂ ಇಶಾನ್ ಕಿಶನ್ ನಂಬರ್ 1 ಸ್ಥಾನದಲ್ಲಿ ಮುಂದುವರೆದಿದ್ದಾರೆ. ಅಲ್ಲದೆ ಇವರಿಗೆ ಕೊಂಚ ಲಾಭವೂ ಸಹ ಆಗಿದೆ. ಇನ್ನು ಎರಡನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ಗೆಲುವಿನಲ್ಲಿ ಮಿಂಚಿದ್ದ ಯುವ ಆಟಗಾರ ಜಾಕೊಬ್ ಬೆಥೆಲ್ ಅವರು ಭರ್ಜರಿ ಜಿಗಿತ ಕಂಡಿದ್ದು, ಟಾಪ್ 10ರಲ್ಲಿ ಸ್ಥಾನ ಪಡೆದಿದ್ದಾರೆ. ಇನ್ನು ಭಾರತ ತಂಡದ ಮಾಜಿ ನಾಯಕ ಸೂರ್ಯಕುಮಾರ್ ಯಾದವ್ ಅಗ್ರ 10ರಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ.
ಭಾರತ ಹಾಗೂ ಇಂಗ್ಲೆಂಡ್ ನಡುವಣ ಟಿ20 ಸರಣಿಯ ಮಧ್ಯದಲ್ಲಿ ಐಸಿಸಿ ನೂತನ ಶ್ರೇಯಾಂಕ ಬಿಡುಗಡೆ ಮಾಡಿದೆ. ಐಸಿಸಿ ನಂಬರ್ 1 ಸ್ಥಾನದಲ್ಲಿ ಇಶಾನ್ ಕಿಶನ್ ಮುಂದುವರೆದಿದ್ದಾರೆ. ಇಶಾನ್ ಕಿಶನ್ 897 ರೇಟಿಂಗ್ ಪಾಯಿಂಟ್‌ಗಳೊಂದಿಗೆ ನಂಬರ ಒನ್ ಸ್ಥಾನ ಪಡೆದಿದ್ದಾರೆ. ಕಳೆದ ಕೆಲವು ದಿನಗಳಲ್ಲಿ ಇಶಾನ್ ಕಿಶನ್ ಸ್ಥಿರ ಪ್ರದರ್ಶನ ನೀಡುತ್ತಿದ್ದು ಇದರ ಸಂಪೂರ್ಣ ಲಾಭವನ್ನು ಇಶಾನ್ ಪಡೆದಿದ್ದಾರೆ.

ಟೀಮ್ ಇಂಡಿಯಾದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಸದ್ಯ ಎರಡನೇ ಸ್ಥಾನದಲ್ಲಿದ್ದಾರೆ. ಎರಡನೇ ಸ್ಥಾನದಲ್ಲಿರುವ ಅಭಿಷೇಕ್ ಶರ್ಮಾ ಹಾಗೂ ನಂಬರ್ ಒನ್ ಸ್ಥಾನದಲ್ಲಿರುವ ಇಶಾನ್ ಕಿಶನ್ ಅವರಿಗೂ ರೇಟಿಂಗ್ ಅಂಕದಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲ. ಅಭಿಷೇಕ್ ಶರ್ಮಾ 881 ರೇಟಿಂಗ್ ಪಾಯಿಂಟ್ಸ್ ಹೊಂದಿದ್ದಾರೆ.
ಸೂರ್ಯ ಸ್ಥಾನ ಇಳಿತ
ಟೀಮ್ ಇಂಡಿಯಾದ ಮಾಜಿ ನಾಯಕ ಹಾಗೂ ಮಾಜಿ ನಂಬರ್ 1 ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರ ಶ್ರೇಯಾಂಕದಲ್ಲೂ ಇಳಿಕೆ ಕಂಡಿದೆ. ಟಿ20 ವಿಶ್ವಕಪ್ ಬಳಿಕ ನಡೆಯುತ್ತಿರುವ ಟಿ20 ಸರಣಿಯಲ್ಲಿ ಸೂರ್ಯ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದು, ಶ್ರೇಯಾಂಕದಲ್ಲೂ ಇಳಿಕೆ ಕಂಡಿದ್ದಾರೆ. ಇವರು ಟಾಪ್ 10ರಿಂದ ಹೊರ ನಡೆದಿದ್ದು, 13ನೇ ಸ್ಥಾನ ಹೊಂದಿದ್ದಾರೆ. ಇವರು ಬುಧವಾರ ಬಿಡುಗಡೆಯಾದ ಶ್ರೇಯಾಂಕದಲ್ಲಿ ಐದು ಸ್ಥಾನ ಇಳಿಕೆಯಾಗಿದೆ.

ಭಾರತ ಮತ್ತು ಇಂಗ್ಲೆಂಡ್ ನಡುವೆ ಪ್ರಸ್ತುತ ಟಿ20 ಸರಣಿ ನಡೆಯುತ್ತಿದೆ. ಇನ್ನೂ ಎರಡು ಪಂದ್ಯಗಳು ಬಾಕಿ ಉಳಿದಿವೆ. ಸರಣಿಯ ನಾಲ್ಕನೇ ಪಂದ್ಯ ಜುಲೈ 9 ರಂದು ನಡೆಯಲಿದ್ದು, ಅಂತಿಮ ಪಂದ್ಯ ಜುಲೈ 11 ರಂದು ನಡೆಯಲಿದೆ. ಇದರರ್ಥ ಮುಂದಿನ ವಾರ ಮತ್ತೆ ಶ್ರೇಯಾಂಕಗಳಲ್ಲಿ ಇನ್ನು ಏರಿಳಿತಗಳು ಆಗುವ ಸಾಧ್ಯತೆಗಳು ಹೆಚ್ಚಿವೆ.
ವರುಣ್‌ಗೆ ಐದನೇ ಸ್ಥಾನ
ಇಂಗ್ಲೆಂಡ್ ಪ್ರವಾಸದಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗಿರುವ ಸ್ಪಿನ್ ಬೌಲರ್ ವರುಣ್ ಚಕ್ರವತ್ತಿ ಅವರ ಶ್ರೇಯಾಂಕದಲ್ಲೂ ಕುಸಿತವಾಗಿದೆ. ಇವರು 2 ಸ್ಥಾನ ಇಳಿಕೆ ಕಂಡಿದ್ದು, ಐದನೇ ಸ್ಥಾನದಲ್ಲಿದ್ದಾರೆ. ಅಲ್ಲದೆ ಭಾರತದ ಪರ ಬೌಲಿಂಗ್‌ನಲ್ಲಿ ಹೆಚ್ಚಿನ ಶ್ರೇಯಾಂಕ ಹೊಂದಿದ ಬೌಲರ್ ಆಗಿದ್ದಾರೆ. ಈ ಸರಣಿಯಿಂದ ದೂರ ಉಳಿದಿರುವ ಜಸ್ಪ್ರೀತ್ ಬುಮ್ರಾ ಶ್ರೇಯಾಂಕದಲ್ಲೂ ಇಳಿಕೆ ಆಗಿದೆ. ಈ ಇಬ್ಬರೇ ಬೌಲರ್‌ಗಳು ಟಾಪ್ 10 ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications