
ಸೋಮವಾರ ಹೋಬರ್ಟ್‌ನ ಬೆಲ್ಲೆರಿವ್ ಓವಲ್‌ನಲ್ಲಿ ನಡೆಯಲಿರುವ ಗ್ರೂಪ್ 2 ಸೂಪರ್ 12 ಮುಖಾಮುಖಿಯಲ್ಲಿ ನೆದರ್‌ಲ್ಯಾಂಡ್‌ನ ವಿರುದ್ಧ ಬಾಂಗ್ಲಾದೇಶ ಗೆಲುವಿನ ಆರಂಭ ಮಾಡುವ ಉತ್ಸಾಹದಲ್ಲಿದೆ. ನೆದರ್ಲ್ಯಾಂಡ್ಸ್ ಮೊದಲ ಸುತ್ತಿನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಸೂಪರ್ 12 ಸುತ್ತಿಗೆ ಪ್ರವೇಶ ಪಡೆದಿದ್ದಾರೆ. ಬಾಂಗ್ಲಾದೇಶವನ್ನು ಸೋಲಿಸುವ ಸಾಮರ್ಥ್ಯವನ್ನು ನೆದರ್ಲ್ಯಾಂಡ್ಸ್ ಹೊಂದಿದೆ.
2022 ರಲ್ಲಿ ಬಾಂಗ್ಲಾದೇಶ 16 ಪಂದ್ಯಗಳನ್ನಾಡಿದೆ ಅದರಲ್ಲಿ ಕೇವಲ 4 ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ. ತಮ್ಮ ಕಳಪೆ ಪ್ರದರ್ಶನವನ್ನು ಗಂಭೀರಾವಗಿ ಪರಿಗಣಿಸುವ ಮೂಲಕ ಶಕೀಬ್ ಹಲ್ ಹಸನ್ ನೇತೃತ್ವದ ಬಾಂಗ್ಲಾದೇಶ ಉತ್ತಮ ಪ್ರದರ್ಶನ ನೀಡುವತ್ತ ಗಮನ ಹರಿಸಬೇಕಿದೆ.
ಶಕೀಬ್ ಅಲ್ ಹಸನ್ ನೇತೃತ್ವದ ಬಾಂಗ್ಲಾದೇಶ ಈ ವರ್ಷದಲ್ಲಿ ಯುಎಇ, ಜಿಂಬಾಬ್ವೆ ಮತ್ತು ಅಫ್ಘಾನಿಸ್ತಾನ ವಿರುದ್ಧ ಮಾತ್ರ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 2ನೇ ಗುಂಪಿನಲ್ಲಿ ಭಾರತ ಮತ್ತು ಪಾಕಿಸ್ತಾನ ಸೆಮಿಫೈನಲ್‌ಗೆ ಅರ್ಹತೆ ಪಡೆಯುವ ನೆಚ್ಚಿನ ತಂಡಗಳಾಗಿವೆ. ಆದರೂ ಬಾಂಗ್ಲಾ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸುವ ಉತ್ಸಾಹದಲ್ಲಿದೆ.
ಗುಂಪು ಹಂತದ ಪಂದ್ಯಗಳಲ್ಲಿ ನೆದರ್ಲ್ಯಾಂಡ್ಸ್ ಅತ್ಯಂತ ಉತ್ತಮ ಪ್ರದರ್ಶನ ನೀಡಿರುವುದು, ಅದಕ್ಕೆ ಆತ್ಮವಿಶ್ವಾಸವನ್ನು ಹೆಚ್ಚಿದೆ. ಗುಂಪಿನಲ್ಲಿ ಎರಡನೇ ಅತ್ಯುತ್ತಮ ತಂಡವಾಗಿ ಸೂಪರ್ 12 ಹಂತಕ್ಕೆ ಪ್ರವೇಶ ಪಡೆದರು.

ಮತ್ತೊಂದೆಡೆ ಬಾಂಗ್ಲಾದೇಶ ನಿರೀಕ್ಷಿಸಿದಷ್ಟು ಉತ್ತಮವಾಗಿ ಆಡುತ್ತಿಲ್ಲ, ಏಷ್ಯಾಕಪ್‌ನ ನಿರಾಶಾದಾಯಕ ಪ್ರದರ್ಶನದ ನಂತರ ಮಹಮ್ಮದುಲ್ಲಾ ಅವರನ್ನು ನಾಯಕನ ಸ್ಥಾನದಿಂದ ಕೆಳಗಿಳಿಸಿದೆ. ಟಿ20 ವಿಶ್ವಕಪ್‌ಗಾಗಿ ಆಲ್‌ರೌಂಡರ್ ಶಕೀಬ್ ಅಲ್ ಹಸನ್ ಹೊಸ ನಾಯಕರಾಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಶಕೀಬ್ ನಾಯಕತ್ವದಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ ಬಾಂಗ್ಲಾದೇಶ ತಂಡ.
ಹೋಬರ್ಟ್‌ನ ಬೆಲ್ಲೆರಿವ್ ಓವಲ್ ಪಿಚ್ ವರದಿ
ಹೋಬರ್ಟ್‌ನ ಬೆಲ್ಲೆರಿವ್ ಓವಲ್ ಪಿಚ್ ಆರಂಭದಲ್ಲಿ ವೇಗಿಗಳಿಗೆ ಹೆಚ್ಚಿನ ಸಹಕಾರಿಯಾಗಲಿದೆ. ಮೊದಲ ಕೆಲವು ಓವರ್ ಗಳಲ್ಲಿ ಬಾಲ್ ಸ್ವಿಂಗ್ ಆಗುತ್ತದೆ, ಕೆಲವು ಓವರ್ ಗಳ ನಂತರ ಬ್ಯಾಟಿಂಗ್ ಮಾಡುವವರಿಗೆ ಪಿಚ್ ಸಹಕಾರಿಯಾಗಲಿದೆ. ಇಲ್ಲಿ ನಡೆದಿರುವ ಕಳೆದ ಮೂರು ಪಂದ್ಯಗಳಲ್ಲಿ ಮೊದಲು ಬೌಲಿಂಗ್ ಮಾಡುವ ತಂಡವೇ ಜಯಗಳಿಸಿರುವುದರಿಂದ ಟಾಸ್ ಗೆಲ್ಲುವ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ.

ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ XI
ಬಾಂಗ್ಲಾದೇಶ: ಮೆಹಿದಿ ಹಸನ್ ಮಿರಾಜ್, ಲಿಟ್ಟನ್ ದಾಸ್, ನಜುಮುಲ್ ಶ್ನಾಟೊ, ಸೌಮ್ಯ ಸರ್ಕಾರ್, ನೂರುಲ್ ಹಸನ್, ಶಕೀಬ್ ಅಲ್ ಹಸನ್ (ನಾಯಕ), ಯಾಸಿರ್ ಖಾನ್, ತಸ್ಕಿನ್ ಅಹ್ಮದ್, ಶೋರಿಫುಲ್ ಇಸ್ಲಾಂ, ಮುಸ್ತಾಫಿಜುರ್ ರೆಹಮಾನ್, ಎಬಾಡೋತ್ ಹೊಸೈನ್
ನೆದರ್ಲ್ಯಾಂಡ್ಸ್: ಮ್ಯಾಕ್ಸ್ ಓಡೌಡ್, ವಿಕರ್ಮ್ಜಿತ್ ಸಿಂಗ್, ಬಾಸ್ ಡಿ ಲೀಡೆ, ಕಾಲಿನ್ ಅಕರ್ಮನ್, ಟಾಮ್ ಕಾಪರ್, ಸ್ಕಾಟ್ ಎಡ್ವರ್ಡ್ಸ್ (ನಾಯಕ), ಟಿಮ್ ಪ್ರಿಂಗಲ್, ಟಿಮ್ ವ್ಯಾನ್ ಡೆರ್ ಗುಗ್ಟೆನ್, ಫ್ರೆಡ್ ಕ್ಲಾಸೆನ್, ಪಾಲ್ ವ್ಯಾನ್ ಮೀಕೆರಾನ್, ರೋಲೋಫ್ ವ್ಯಾನ್ ಡೆರ್ ಮೆರ್ವೆ